ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕವು ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸುತ್ತಿರುವುದರಿಂದ ಸರ್ಕಾರಿ ಖರ್ಚಿನ ಅಗತ್ಯತೆಯನ್ನು ಸಹ ಹೆಚ್ಚಿಸುತ್ತಿದೆ.
ಭಾರತದ ಒಟ್ಟು ಸಾಲದ ಪ್ರಮಾಣವು ಮುಂದಿನ ವರ್ಷದ ವೇಳೆಗೆ 170 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ. ಇದು ಒಟ್ಟಾರೆ ಜಿಡಿಪಿಯ 87.6 ಪ್ರತಿಶತದಷ್ಟು ಇರಲಿದೆ ಎಂದು ಎಸ್‌ಬಿಐ ಇಕೋವ್ರಾಪ್ ಅಂದಾಜಿಸಿದೆ.
ಹೆಚ್ಚಿನ ಸಾಲದ ಮೊತ್ತವು ಏಳು ವರ್ಷಗಳ ವೇಳೆಗೆ ಒಟ್ಟು ಸಾಲದ ಎಫ್‌ಆರ್‌ಬಿಎಂ ಗುರಿಯನ್ನು ಜಿಡಿಪಿಯ ಶೇ.60ಕ್ಕೆ ಎಫ್‌ವೈ 23 ರ ವೇಳೆಗೆ ಬದಲಾಯಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ, 2003 ಆರ್ಥಿಕ ಶಿಸ್ತು ಸಾಲದ ಗುರಿ ಜಿಡಿಪಿಯ ಶೇ.60ರಷ್ಟು ಅನ್ನು 2023 ವೇಳೆಗೆ ಸಾಧಿಸಬೇಕಿರುವುದು ಏಳು ವರ್ಷ ಮುಂದಕ್ಕೆ ಹೋಗಲಿದೆ. 2030ರ ವೇಳೆಗೆ ಈ ಗಡಿಯನ್ನು ದಾಟಲಿದೆ.
ಈ ಹಣಕಾಸು ವರ್ಷದಲ್ಲಿ ಹೆಚ್ಚಿನ ಮಟ್ಟದ ಸಾಲ ಸುಮಾರು 170 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ.87.6ರಷ್ಟಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಇದರೊಳಗೆ ಬಾಹ್ಯ ಸಾಲವು 6.8 ಲಕ್ಷ ಕೋಟಿ ರೂ.ಗೆ (ಜಿಡಿಪಿಯ ಶೇ.3.5ರಷ್ಟು) ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಉಳಿದ ದೇಶಿಯ ಸಾಲಗಳಲ್ಲಿ ರಾಜ್ಯದ ಸಾಲದ ಪ್ರಮಾಣವು ಜಿಡಿಪಿಯ ಶೇ.27ರಷ್ಟಿದೆ. 2019-20ರ ಹಣಕಾಸು ವರ್ಷದಲ್ಲಿ ಭಾರತದ ಸಾಲವು 146.9 ಲಕ್ಷ ಕೋಟಿ ರೂ. ಮೂಲಕ ಜಿಡಿಪಿಯ ಶೇ.72.2ರಷ್ಟಿದೆ. 2012ರ ವಿತ್ತೀಯ ವರ್ಷದಲ್ಲಿ 58.8 ಲಕ್ಷ ಕೋಟಿ ರೂ.ಗಳಿಂದ ಏರಿಕೆ ಆಗುತ್ತಲೇ ಸಾಗಿದೆ. ಭಾರತದ ಜನಸಂಖ್ಯೆ ಸುಮಾರು 136 ಕೋಟಿ ಇದೆ ಎಂದರೇ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು 12.4 ಲಕ್ಷ ರೂ.ಗೂ ಅಧಿಕ ಸಾಲದ ಹೊರೆ ಆಗಲಿದೆ.