ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 11ಕ್ಕೆ ಬೆಳೆಯುವ ಸಾಧ್ಯತೆಯಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಂದಾಜಿಸಿದೆ.
'ಏಷ್ಯನ್ ಡೆವಲಪ್‌ಮೆಂಟ್ ಔಟ್‌ಲುಕ್ (ಎಡಿಒ) 2021'ರ ವರದಿಯಲ್ಲಿ, ಕೋವಿಡ್ -19 ಪ್ರಕರಣಗಳಲ್ಲಿ ಇತ್ತೀಚಿನ ಉಲ್ಬಣವು ಆರ್ಥಿಕ ಚೇತರಿಕೆಗೆ ಅಪಾಯ ಉಂಟುಮಾಡುತ್ತದೆ ಎಂದಿದೆ.
ಭಾರತದ ಆರ್ಥಿಕತೆಯು 2021ರ ಹಣಕಾಸು ವರ್ಷದಲ್ಲಿ (2021ರ ಹಣಕಾಸು ವರ್ಷ) ಶೇ 11.0ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಬಲವಾದ ಲಸಿಕೆ ಚಾಲನೆಯಿಂದ 2022 ಮಾರ್ಚ್ 31ರಂದು ಕೊನೆಗೊಳ್ಳುತ್ತದೆ. ಕೋವಿಡ್-19 ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯು ಈ ಚೇತರಿಕೆಗೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 7.0ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ. ಈ ವರ್ಷ ದಕ್ಷಿಣ ಏಷ್ಯಾದ ಜಿಡಿಪಿ ಬೆಳವಣಿಗೆಯು ಶೇ 9.5ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. 2020ರಲ್ಲಿ ಇದು ಶೇ 6.0ರಷ್ಟು ಸಂಕೋಚನದ ನಂತರ, ಮುಂದಿನ ವರ್ಷದಲ್ಲಿ ಶೇ 6.6ರಲ್ಲಿ ಇರಲಿದೆ ಎಂದಿದೆ.
ಏಷ್ಯಾದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಬೆಳವಣಿಗೆಯು ಈ ವರ್ಷ ಶೇ 7.3ಕ್ಕೆ ಏರಿಕೆಯಾಗಲಿದೆ. ಇದು ಆರೋಗ್ಯಕರ ಜಾಗತಿಕ ಚೇತರಿಕೆ ಮತ್ತು ಕೊರೊನಾ ವೈರಸ್ ಲಸಿಕೆಗಳ ಆರಂಭಿಕ ಪ್ರಗತಿಯಿಂದ ಪ್ರೇರೇಪಿತವಾಗಲಿದೆ.
ಅಭಿವೃದ್ಧಿ ಹೊಂದುತ್ತಿರುವ ಏಷ್ಯಾದಾದ್ಯಂತ ಬೆಳವಣಿಗೆ ವೇಗ ಪಡೆಯುತ್ತಿದೆ. ಆದರೆ, ರೂಪಾಂತರ ಕೋವಿಡ್-19 ಚೇತರಿಕೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಡಿಬಿ ಮುಖ್ಯ ಅರ್ಥಶಾಸ್ತ್ರಜ್ಞ ಯಸುಯುಕಿ ಸವಡಾ ಹೇಳಿದ್ದಾರೆ.