ETV Bharat / business

ಚಿಂತೆ ಬೇಡ,'ಆರ್ಥಿಕತೆ 'V' ಆಕಾರದಲ್ಲಿ ತ್ವರಿತ ಚೇತರಿಕೆ ಕಾಣುತ್ತಿದೆ': ವಿತ್ತ ಸಚಿವಾಲಯ

V-ಆಕಾರದ ಚೇತರಿಕೆ ಎಂದರೇ ಪುನಶ್ಚೇತನದ ಚಾರ್ಟಿಂಗ್‌ನಲ್ಲಿ "ವಿ" (V) ಆಕಾರ ಹೋಲುತ್ತದೆ. ಸರಳವಾಗಿ ಹೇಳುವುದಾದರೇ ತೀವ್ರ ಕುಸಿತದ ಬಳಿಕ ಹಿಂದಿನ ಗರಿಷ್ಠ ಮಟ್ಟಕ್ಕೆ ತೀಕ್ಷ್ಣವಾಗಿ ಏರಿಕೆ ಕಾಣುತ್ತದೆ. ತೀಕ್ಷ್ಣ ಆರ್ಥಿಕ ಕುಸಿತದ ನಂತರ ಆರ್ಥಿಕ ಕಾರ್ಯಕ್ಷಮತೆಯು ತ್ವರಿತ ಮತ್ತು ನಿರಂತರ ಚೇತರಿಕೆಯಿಂದ ಕೂಡಿರುತ್ತದೆ.

Indian economy
ಭಾರತದ ಆರ್ಥಿಕತೆ
author img

By

Published : Dec 3, 2020, 3:08 PM IST

ನವದೆಹಲಿ: ಈ ಆರ್ಥಿಕ ವರ್ಷದ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ತ್ರೈಮಾಸಿಕದಿಂದ ತ್ರೈಮಾಸಿಕ ಶೇ 23ರಷ್ಟು ಬೆಳವಣಿಗೆ ದಾಖಲಿಸಿರುವುದರಿಂದ ಭಾರತದ ಆರ್ಥಿಕತೆಯು 'ವಿ' ಆಕಾರದ ಚೇತರಿಕೆ ಕಾಣುತ್ತಿದೆ ಎಂದು ಹಣಕಾಸು ಸಚಿವಾಲಯ ತನ್ನ ಇತ್ತೀಚಿನ ಮಾಸಿಕ ಆರ್ಥಿಕ ವಿಮರ್ಶೆ ವರದಿಯಲ್ಲಿ ಹೇಳಿದೆ.

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿನ ಕುಸಿತವು ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಶೇ 23.9ಕ್ಕಿಂತ ಅಧಿಕವಾಗಿದೆ. 2020-21ರ 2ನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಜಿಡಿಪಿ ಸಂಕೋಚನವು ಶೇ 7.5ರಷ್ಟಿದ್ದು, ಜಿಡಿಪಿ ಬೆಳವಣಿಗೆಯಲ್ಲಿ ಶೇ 23ರಷ್ಟು ಹೆಚ್ಚಳವಾಗಿದೆ.

ಟೀ, ಕಾಫಿ ಜೊತೆ ಮಾಸ್ಕ್​ ಫ್ರೀ.. ಕೊರೊನಾ ಜಾಗೃತಿಗಿಳಿದ ಚಾಯ್​​​ವಾಲಾ!

ವಿ - ಆಕಾರದ ಚೇತರಿಕೆಯು 2020-21ರ ಮಧ್ಯಾರ್ಧದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಭಾರತೀಯ ಆರ್ಥಿಕತೆಯ ಸ್ಥಿರತೆ ಮತ್ತು ದೃಢತೆ ಪ್ರತಿಬಿಂಬಿಸುತ್ತದೆ. ಲಾಕ್‌ಡೌನ್‌ಗಳನ್ನು ಕ್ರಮೇಣ ಹಿಂತೆಗೆದುಕೊಂಡಿದ್ದರ ಪ್ರತಿಫಲವಾಗಿ ಆರ್ಥಿಕತೆಯ ಮೂಲ ಅಂಶಗಳು ದೃಢವಾಗಿವೆ. ಇದರ ಜೊತೆಗೆ ಆತ್ಮನಿರ್ಭರ ಭಾರತ ಮಿಷನ್‌ನ ಚುರುಕಾದ ಬೆಂಬಲವು ಆರ್ಥಿಕತೆಯನ್ನು ಚೇತರಿಕೆಯ ಹಾದಿಗೆ ಸಹಕರಿಸಿವೆ ಎಂದು ನವೆಂಬರ್‌ ಮಾಸಿಕದ ಆರ್ಥಿಕ ವಿಮರ್ಶೆ ಹೇಳಿದೆ.

V - ಆಕಾರದ ಚೇತರಿಕೆ ಎಂದರೇ ಪುನಶ್ಚೇತನದ ಚಾರ್ಟಿಂಗ್‌ನಲ್ಲಿ "ವಿ" (V) ಆಕಾರ ಹೋಲುತ್ತದೆ. ಸರಳವಾಗಿ ಹೇಳುವುದಾದರೇ ತೀವ್ರ ಕುಸಿತದ ಬಳಿಕ ಹಿಂದಿನ ಗರಿಷ್ಠ ಮಟ್ಟಕ್ಕೆ ತೀಕ್ಷ್ಣವಾಗಿ ಏರಿಕೆ ಕಾಣುತ್ತದೆ. ತೀಕ್ಷ್ಣ ಆರ್ಥಿಕ ಕುಸಿತದ ನಂತರ ಆರ್ಥಿಕ ಕಾರ್ಯಕ್ಷಮತೆಯು ತ್ವರಿತ ಮತ್ತು ನಿರಂತರ ಚೇತರಿಕೆಯಿಂದ ಕೂಡಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.