ETV Bharat / business

ಕೊರೊನಾಘಾತಕ್ಕೆ ಆರ್ಥಿಕತೆ ಸಡ್ಡು: ಮುಂದಿನ ವರ್ಷ ಭಾರತದ ಜಿಡಿಪಿ ಶೇ 9.5% ಬೆಳವಣಿಗೆ ಸಾಧ್ಯತೆ

author img

By

Published : Jun 10, 2020, 9:02 PM IST

ಸಾಂಕ್ರಾಮಿಕ ರೋಗವು ಭಾರತದ ವಿತ್ತೀಯ ಬೆಳವಣಿಗೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ಹೆಚ್ಚಿನ ಸಾರ್ವಜನಿಕ ಸಾಲದ ಹೊರೆಯಿಂದ ಸರ್ಕಾರದ ಮೇಲೆ ಒತ್ತಡ ಬಿದ್ದಿದೆ ಎಂದು ಪಿಚ್ ರೇಟಿಂಗ್ಸ್ ಬುಧವಾರ ಬಿಡುಗಡೆ ಮಾಡಿದ ಎಪಿಎಸಿ ಕ್ರೆಡಿಟ್​ನಲ್ಲಿ ತಿಳಿಸಿದೆ.

Indian economy
ಜಿಡಿಪಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಸಂಕುಚಿತದ ಬಳಿಕ ಭಾರತದ ಆರ್ಥಿಕತೆಯು ಮುಂದಿನ ವರ್ಷದಲ್ಲಿ ಶೇ 9.5ರಷ್ಟು ತೀವ್ರ ಬೆಳವಣಿಗೆ ಕಾಣಲಿದೆ ಎಂದು ಪಿಚ್ ರೇಟಿಂಗ್ಸ್ ಅಂದಾಜಿಸಿದೆ.

ಜಾಗತಿಕ ಬಿಕ್ಕಟ್ಟಿನ ನಂತರ ಭಾರತದ ಜಿಡಿಪಿ ಬೆಳವಣಿಗೆಯು 'ಬಿಬಿಬಿ' ವರ್ಗದ ಹೆಚ್ಚಿನ ಮಟ್ಟಕ್ಕೆ ಮರಳುವ ಸಾಧ್ಯತೆಯಿದೆ. ಇದು ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಹಣಕಾಸು ವಲಯದ ಆರೋಗ್ಯ ಮತ್ತಷ್ಟು ಕ್ಷೀಣಿಸುವುದನ್ನು ತಪ್ಪಿಸುತ್ತದೆ. ಶೇ 9.5ರಷ್ಟು ನೈಜ ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ಮುನ್ಸೂಚನೆ ನೀಡಿದೆ.

ಒಟ್ಟಾರೆ ಜಿಡಿಪಿ ಪೈಕಿ ಶೇ 10ರಷ್ಟು ಉತ್ತೇಜಕ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಸರ್ಕಾರದ ಸಾಮಾನ್ಯ ಸಾಲದ ಹೊರೆಯು 2019-20ರಲ್ಲಿ ಜಿಡಿಪಿಯ ಶೇ 70ರಷ್ಟಿದೆ, ಇದು 'ಬಿಬಿಬಿ' ರೇಟಿಂಗ್ ಸರಾಸರಿಗಿಂತ ಶೇ 42ರಷ್ಟಾಗುತ್ತದೆ. ಈ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಜಿಡಿಪಿಯ ಶೇ 84ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವಿತ್ತೀಯ ಕೊರತೆಯು ಇನ್ನಷ್ಟು ಹೆಚ್ಚಲಿದೆ. ಹಣದುಬ್ಬರ ಏರಿಕೆಯಾಗಲಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳಗೊಳ್ಳಲಿದೆ ಎಂದು ಅಂದಾಜಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.