ನವದೆಹಲಿ: ಕೋವಿಡ್ ಅಡೆತಡೆಗಳ ಹೊರತಾಗಿಯೂ ಭಾರತೀಯ ಆರ್ಥಿಕತೆ ಬಹುಬೇಗನೆ ಚೇತರಿಸಿಕೊಂಡಿದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಹೇಳಿದ್ದಾರೆ. ಇದೇ ವೇಳೆ, ಪ್ರಸ್ತುತ ವರ್ಷ ಭಾರತದ ಆರ್ಥಿಕತೆಯು ಶೇ 7 ರಿಂದ 8 ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ 2022-23ರಲ್ಲಿ ವಿತ್ತೀಯ ಕೊರತೆಯನ್ನ ತಗ್ಗಿಸಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದ್ದಾರೆ. ಭಾರತೀಯ ಆರ್ಥಿಕತೆ ಅದ್ಬುತವಾಗಿ ಚೇತರಿಕೆ ಕಂಡಿದ್ದು, ಕೋವಿಡ್ ಪೂರ್ವ ಜಿಡಿಪಿ ಪ್ರಮಾಣದತ್ತ ಹಿಂತಿರುಗುತ್ತಿದೆ ಎಂದು ಪನಗರಿಯಾ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಯೋಜನಾ ಆಯೋಗದ ಮಾಜಿ ಅಧ್ಯಕ್ಷರು, ಕೇಂದ್ರ ಸಾಂಖಿಕ ಇಲಾಂಖೆ ಅಂದಾಜಿನಂತೆ 2021 -22 ನೇ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ 9.2 ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಈ ಅಂದಾಜನ್ನು ಜಿಡಿಪಿ ಕ್ರಾಸ್ ಮಾಡುವ ಸಾಧ್ಯತೆಗಳಿವೆ. ಅಷ್ಟಕ್ಕೂ ಇದು ಇತರ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಮೂರನೇ ಅಲೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ 7.3ಕ್ಕೆ ಸೀಮಿತವಾಗಿತ್ತು ಎಂದಿದ್ದಾರೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ ಕೊರೊನಾದ ವಿವಿಧ ರೂಪಾಂತರಿಗಳಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಹೀಗಾಗಿ ಕೋವಿಡ್ ತನ್ನ ಸತ್ವ ಕಳೆದುಕೊಳ್ಳಲಿದೆ. ಇದು ಆರ್ಥಿಕ ಚೇತರಿಕೆಗೆ ಕಾರಣವಾಗಲಿದೆ. ರೋಗದ ಪ್ರಭಾವ ಕಡಿಮೆ ಆಗುವುದರಿಂದ ಆರ್ಥಿಕತೆ ಶೇ 7 - 8 ರಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಅಂಶವನ್ನ ಪನಗರಿಯಾ ಅವರು ಪ್ರತಿಪಾದಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಾವು ಅಗತ್ಯಕ್ಕಿಂತ ಹೆಚ್ಚಿನ ಹೊರೆ ಹೊತ್ತುಕೊಂಡು ಬದುಕಬಾರದು, ಇದು ಹೆಚ್ಚಿನ ಸಾಲಕ್ಕೂ ಕಾರಣವಾಗಲಿದೆ. ಸಾಲ ಹೆಚ್ಚಾದರೆ ಮುಂದಿನ ಪೀಳಿಗೆ ಮೇಲೆ ಇದರ ಪರಿಣಾಮ ಬೀರಲಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಪನಗರಿಯಾ ಸಲಹೆ ನೀಡಿದ್ದಾರೆ. 2020-21 ರಲ್ಲಿ ಸರ್ಕಾರ 9.5 ರಷ್ಟು ಬೆಳವಣಿಯ ಗುರಿ ಹೊಂದಿತ್ತು. ಆದರೆ, ಸರ್ಕಾರ ಶೇ 6.8 ರಷ್ಟು ಗುರಿ ಸಾಧಿಸಿತ್ತು ಎಂಬುದರ ಬಗ್ಗೆ ಬೆಳಕು ಚಲ್ಲಿದ್ದಾರೆ.
ಇನ್ನು ಅಮೆರಿಕದಲ್ಲಿ ಏರುತ್ತಿರುವ ಹಣದುಬ್ಬರ ಕಳವಳಕಾರಿಯಾಗಿದೆ. ಇಲ್ಲಿ ಹಣದುಬ್ಬರದ ಪ್ರಮಾಣ ಶೇ 7ಕ್ಕೆ ತಲುಪಿದೆ. ಇದು ಕಳೆದ 40 ವರ್ಷಗಳಲ್ಲೇ ಹೆಚ್ಚು. ಆದರೆ ಭಾರತದಲ್ಲಿ ಈ ಪ್ರಮಾಣ ಶೇ 2- 6 ರವ್ಯಾಪ್ತಿಯಲ್ಲೇ ಇದೆ. ಇದು ಸಮಾಧಾನಕರ ವಿಷಯ ಎಂದು ಪನಗರಿಯಾ ಹೇಳಿದ್ದಾರೆ.
2021 ರ ಡಿಸೆಂಬರ್ನಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣ ಶೇ 5.59ಕ್ಕೆ ಏರಿಕೆಯಾಗಿದೆ. ಇದಕ್ಕೆ ಕಾರಣ ಆಹಾರ ವಸ್ತುಗಳಲ್ಲಿ ಉಂಟಾದ ಬೆಲೆ ಏರಿಕೆಯೇ ಕಾರಣವಾಗಿದೆ. ಕಳೆದ ಮಾಸಿಕದಲ್ಲಿ ಸಗಟು ಹಣದುಬ್ಬರ ಶೇ 13.56ರಷ್ಟು ಕಡಿಮೆ ಆಗಿದೆ ಎಂದರು.
ಇದನ್ನು ಓದಿ:ಸತತ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್: ಇಂದು ಆರಂಭದಲ್ಲೇ 800 ಅಂಕ ಕಳೆದುಕೊಂಡು ತಲ್ಲಣ