ನವದೆಹಲಿ: ಭಾರತದ ಆರ್ಥಿಕತೆಯನ್ನು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ಗೆ ತಲುಪಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ಯೋಜನೆಯನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟೀಕಿಸಿದ್ದಾರೆ.
''ಮುಂದಿನ 5 ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಏನು ಸ್ವರ್ಗದಿಂದ ಬರುತ್ತದೆಯೇ'' ಎಂದು ‘ಭಾರತದ ಭರವಸೆ ಹೆಚ್ಚಿಸುವುದ'ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರದ ನಡೆಯನ್ನು ಪ್ರಣಬ್ ಪ್ರಶ್ನಿಸಿದ್ದಾರೆ.
ದೇಶದ ಆರ್ಥಿಕತೆಗೆ ಸುಭದ್ರ ತಳಪಾಯ ಹಾಕಬಲ್ಲ ಯೋಜನಾ ಆಯೋಗವನ್ನೇ ರದ್ದುಪಡಿಸಿರುವ ಪ್ರಸ್ತುತ ಸರ್ಕಾರ, ಸದೃಢ ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿಯ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಪ್ರಸ್ತುತ ಇಷ್ಟು ಸದೃಢ ಆರ್ಥಿಕ ವ್ಯವಸ್ಥೆಯನ್ನು ಹೊಂದಿರಬೇಕಾದರೆ ಈ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ತೆಗೆದುಕೊಂಡ ಸುಧಾರಣಾ ಕ್ರಮಗಳೇ ಕಾರಣ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಟ್ಟಿ ಬೆಳೆಸಿದ್ದ ಐಐಟಿ, ಇಸ್ರೋದಂತ ಸಂಸ್ಥೆಗಳನ್ನು ಮುಂದಿನ ಸರ್ಕಾರಗಳು ಅವುಗಳನ್ನು ಪೋಷಿಸಿ ಬೆಳೆಸಿದ ಪರಿಣಾಮ ದೇಶ ಇಂದು ಈ ಸ್ಥಿತಿಗೆ ಬಂದು ನಿಂತಿದೆ ಎಂದು ಪ್ರಣಬ್ ಹೇಳಿದ್ದಾರೆ.