ETV Bharat / business

ಕೊರೊನಾ ಹೊರತಾಗಿ ಮೋದಿ ಕನಸಿನ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮುಟ್ಟುತ್ತೇವೆ: ಗೋಯಲ್​ ವಿಶ್ವಾಸ - 5 ಟ್ರಿಲಿಯನ್ ಆರ್ಥಿಕತೆ

2025ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ತಲುಪುವ ಪ್ರಧಾನ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆ ಬಲಪಡಿಸುತ್ತಿದೆ. ಇದಕ್ಕಾಗಿ ನಾವು ತ್ವರಿತ ರಚನಾತ್ಮಕ ಸುಧಾರಣೆಗಳನ್ನು ತರುತ್ತಿದ್ದೇವೆ. ಸುಲಲಿತವಾಗಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

economy
ಆರ್ಥಿಕತೆ
author img

By

Published : Jan 9, 2021, 3:48 PM IST

ನವದೆಹಲಿ: ತ್ವರಿತ ರಚನಾತ್ಮಕ ಸುಧಾರಣೆಗಳ ಮೂಲಕ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಪ್ರವಾಸಿ ಭಾರತೀಯ ದಿವಾಸ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ನಮ್ಮಲ್ಲಿನ ಗುಣಮಟ್ಟ, ಉತ್ಪಾದಕತೆ, ದಕ್ಷತೆಯಲ್ಲಿ ಬೇಕಾದ ಮಿತಿ ತರಲು ನಾವು ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದಾಗಿ ಭಾರತೀಯ ಉದ್ಯಮದ ರಫ್ತು ಜಾಲ ವಿಸ್ತರಿಸಿ, ಅದು ದೊಡ್ಡದಾಗಿದೆ ಉತ್ತಮ ಮತ್ತು ವಿಶಾಲವಾಗಿ ಬೆಳೆಯಲಿದೆ ಎಂದರು.

ಜಾಗತಿಕವಾಗಿ ಭಾರತೀಯ ಉತ್ಪನ್ನಗಳ ವ್ಯಾಪ್ತಿ ಹೆಚ್ಚಿಸಲು ಹೊಸ ಮಾರುಕಟ್ಟೆಗಳನ್ನು ಆಕ್ರಮಣಕಾರಿಯಾಗಿ ಅನ್ವೇಷಿಸಲಾಗುತ್ತಿದೆ. ಕೋವಿಡ್​ ಸೋಂಕು ತನ್ನಿಂದ ಉಂಟಾಗುವ ಅಡೆತಡೆಗಳ ದೊಡ್ಡ ಕಾರ್ಯಗಳನ್ನು ಎದುರಿಸಲು ಒಬ್ಬರು ಧೈರ್ಯ ಮಾಡಬೇಕಾಗಿದೆ ಎಂಬುದನ್ನು ಎಲ್ಲರಿಗೂ ಅರಿವು ಮೂಡಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ತನ್ನಲ್ಲಿ ಚೀನಾ ವ್ಯಾಕ್ಸಿನ್​ ಕ್ಲಿನಿಕಲ್​ ಹಂತದಲ್ಲಿದ್ದರೂ ಬೇಗ ಲಸಿಕೆ ಕಳುಹಿಸುವಂತೆ ಬ್ರೆಜಿಲ್​ ಅಧ್ಯಕ್ಷ ಮೋದಿಗೆ ಪತ್ರ!

ಈ ಕೆಲಸ ಮಾಡದಿದ್ದರೇ ನಾವು ಜಾಗತಿಕ ನಾಯಕರಾಗುವ ಸಾಮರ್ಥ್ಯ ಕಳೆದುಕೊಳ್ಳಬಹುದು. ಇದು ಆತ್ಮನಿರ್ಭರ ಭಾರತನ ಹಿಂದಿನ ತತ್ತ್ವವಾಗಿದೆ. ಇದು ಬಾಗಿಲು ಮುಚ್ಚಿ ಕೂರುವ ವಿಷಯವಲ್ಲ. ಭಾರತದ ಸಾಮರ್ಥ್ಯ ಮತ್ತು ಯೋಗ್ಯತೆಯ ಜೊತೆಗೆ ವೇಗ, ಕೌಶಲ್ಯ ಮತ್ತು ಪ್ರಮಾಣದಲ್ಲಿ ಸ್ಥರವಾದ ವಿಶಾಲವಾದ ಬಾಗಿಲು ತೆರೆಯುವ ಉದ್ದೇಶವಿದೆ ಎಂದು ಗೋಯಲ್ ಹೇಳಿದರು.

2025ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ತಲುಪುವ ಪ್ರಧಾನ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಇದಕ್ಕಾಗಿ ನಾವು ತ್ವರಿತ ರಚನಾತ್ಮಕ ಸುಧಾರಣೆಗಳನ್ನು ತರುತ್ತಿದ್ದೇವೆ. ಸುಲಲಿತವಾಗಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ. ಭಾರತ ವೇಗವಾಗಿ ಬೆಳೆಯುತ್ತಿದೆ ಮತ್ತು ವಿಶ್ವದಾದ್ಯಂತ ಭಾರತೀಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಪ್ರಪಂಚದಾದ್ಯಂತದ ನಮ್ಮ ಸಹೋದರ ಸಹೋದರಿಯರು ಈ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಮೊದಲಿಗರಾಗಬೇಕೆಂಬುದು ನಮ್ಮ ಆಸೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.