ETV Bharat / business

ಸೇದಿದರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಸಾಧ್ಯತೆ: ಯಾವುದೀ ಸಿಗರೇಟು? - e-cigarettes

ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಸಾಧನಗಳ ಬಳಕೆಯನ್ನು ನಿಷೇಧಿಸುವುದು ಉಪಯುಕ್ತ. ಇ-ಸಿಗರೇಟ್‌ಗಳು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಸಾಂಕ್ರಾಮಿಕ ಹವ್ಯಾಸಗಳನ್ನು ಹುಟ್ಟು ಹಾಕುತ್ತದೆ. ಇಂತಹ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ, ಕೇಂದ್ರ ಸರ್ಕಾರವು ಇ-ಸಿಗರೇಟ್​ ನಿಷೇಧದ ಆದೇಶ ಹೊರಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : Aug 22, 2019, 11:11 PM IST

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಎಲೆಕ್ಟ್ರಾನಿಕ್ ಸಿಗರೇಟ್ ಉತ್ಪಾದನೆ ಮತ್ತು ಆಮದು ನಿಷೇಧವನ್ನು ಜಾರಿಗೆ ತರುವ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಸಾಧನಗಳ ಬಳೆಯನ್ನು ನಿಷೇಧಿಸುವುದು ಉಪಯುಕ್ತ. ಇ-ಸಿಗರೆಟ್‌ಗಳು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಸಾಂಕ್ರಾಮಿಕ ಹವ್ಯಾಸಗಳನ್ನು ಹುಟ್ಟುಹಾಕುತ್ತದೆ. ಇಂತಹ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ, ಕೇಂದ್ರ ಸರ್ಕಾರವು ಇ- ಸಿಗರೇಟ್​ ನಿಷೇಧದ ಆದೇಶ ಹೊರಡಿಸಬೇಕೆಂದು ಸಚಿವಾಲಯವು ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ.

ಇ-ಸಿಗರೆಟ್‌ ಮತ್ತು ತಂಬಾಕು ಬಳಕೆಯನ್ನು ಉತ್ತೇಜಿಸುವ ಅಥವಾ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ತಂತ್ರಜ್ಞಾನಗಳ ಸಕ್ರಿಯವಾಗಿ ನಿಷೇಧಿಸಬೇಕು ಎಂದು ಆರೋಗ್ಯ ಸಚಿವಾಲಯವು ಕೇಂದ್ರ ಸಚಿವ ಸಂಪುಟದ ಮುಂದಿಟ್ಟಿದೆ ಎನ್ನಲಾಗುತ್ತಿದೆ.

ಕಾರ್ಯನಿರ್ವಾಹಕ ಆದೇಶದ ಕರಡು ಅನ್ವಯ, ಹೊಸ ನಿಯಮಗಳ ವಿರುದ್ಧ ಪುನರಾವರ್ತಿತ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂ.ವರೆಗೂ ದಂಡಾರ್ಹ ಶಿಕ್ಷಿ ವಿಧಿಸುವಂತೆ ಉಲ್ಲೇಖಿಸಲಾಗಿದೆ. ಮೊದಲ ಬಾರಿಯ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವಿರಬೇಕು ಎಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.