ETV Bharat / business

ವ್ಯಾಪಾರ ಸಂಬಂಧಿತ ಜಾಗತಿಕ ಅಕ್ರಮ ದಂಧೆ... ಭಾರತಕ್ಕೆ ಕಪ್ಪು ಚುಕ್ಕೆಯಾದ 3ನೇ ಸ್ಥಾನ - ಜಾಗತಿಕ ಹಣಕಾಸು ಸಮಗ್ರತೆ

ಅಕ್ರಮ ಹರಿವಿನ ಪ್ರಾಥಮಿಕ ಮೂಲಗಳು ಭ್ರಷ್ಟಾಚಾರ, ವಾಣಿಜ್ಯ ತೆರಿಗೆ ವಂಚನೆ ಮತ್ತು ದೇಶಿಯ ಅಪರಾಧಗಳನ್ನು ಒಳಗೊಂಡಿದೆ. ಮಾದಕವಸ್ತು ಮಾರಾಟದಂತಹ ಅಕ್ರಮ ಆದಾಯವನ್ನು ಬಳಸಿದ ಕಾರುಗಳನ್ನು ಖರೀದಿಸಲು, ವ್ಯಾಪಾರ ಆಧಾರಿತ ಮನಿ ಲಾಂಡರಿಂಗ್ ತಂತ್ರಗಳಿಗೆ, ಡ್ರಗ್ಸ್​ ರಫ್ತು ನಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇವೆಲ್ಲ ಅಕ್ರಮ ಆರ್ಥಿಕ ಹರಿವಿನ ಉದಾಹರಣೆಯಾಗಿವೆ ಎಂದು ವರದಿ ಹೇಳಿದೆ.

Money
ಹಣ
author img

By

Published : Mar 3, 2020, 9:05 PM IST

ನವದೆಹಲಿ: ಅಮೆರಿಕ ಮೂಲದ ಜಾಗತಿಕ ಚಿಂತಕರ ಚಾವಡಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವ್ಯಾಪಾರ ಸಂಬಂಧಿತ ಅತಿ ಹೆಚ್ಚು ಅಕ್ರಮ ಆರ್ಥಿಕ ಚಟುವಟಿಕೆ ಇರುವ ವಿಶ್ವದ 135ಕ್ಕೂ ಅಧಿಕ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನದಲ್ಲಿದೆ.

ಜಾಗತಿಕ ಹಣಕಾಸಿನ ಸಮಗ್ರತೆಯು (ಜಿಎಫ್‌ಐ) ಕಾನೂನು ಬಾಹಿರವಾಗಿ ಹರಿದಾಡುವ ಹಣದ ನಿಧಿಗಳನ್ನು ವರ್ಗೀಕರಿಸುತ್ತದೆ. ಕಾನೂನು ಬಾಹಿರವಾಗಿ ಗಳಿಸಿದ, ವರ್ಗಾವಣೆಯಾದ ಹಣ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಳಸಲ್ಪಡುತ್ತದೆ. ಭಾರತದ ಅಕ್ರಮ ಆರ್ಥಿಕ ವ್ಯವಹಾರದ ಮೊತ್ತ 83.5 ಬಿಲಿಯನ್​ ಡಾಲರ್​ನಷ್ಟಿದೆ (6.11 ಲಕ್ಷ ಕೋಟಿ ರೂ.) ಎಂದು ಅದು ಅಂದಾಜಿಸಿದೆ.

ಅಕ್ರಮ ಹಣ ಹರಿವಿನ ಪ್ರಾಥಮಿಕ ಮೂಲಗಳು ಭ್ರಷ್ಟಾಚಾರ, ವಾಣಿಜ್ಯ ತೆರಿಗೆ ವಂಚನೆ ಮತ್ತು ದೇಶಿಯ ಅಪರಾಧಗಳನ್ನು ಒಳಗೊಂಡಿದೆ. ಮಾದಕ ವಸ್ತು ಮಾರಾಟದಂತಹ ಅಕ್ರಮ ಆದಾಯದಲ್ಲಿ ಬಳಸಿದ ಕಾರುಗಳನ್ನು ಖರೀದಿಸುವುದು, ವ್ಯಾಪಾರ ಆಧಾರಿತ ಮನಿ ಲಾಂಡರಿಂಗ್ ತಂತ್ರ ನಡೆಸುವುದು, ಡ್ರಗ್ಸ್​ ರಫ್ತುನಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇವೆಲ್ಲ ಅಕ್ರಮ ಆರ್ಥಿಕ ಹರಿವಿನ ಉದಾಹರಣೆಯಾಗಿವೆ ಎಂದು ವರದಿ ಹೇಳಿದೆ.

'135 ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವ್ಯಾಪಾರ ಸಂಬಂಧಿತ ಅಕ್ರಮ ಹಣಕಾಸು ಹರಿವುಗಳು: 2008-2017' ಎಂಬ ಶೀರ್ಷಿಕೆಯಡಿ ವರದಿ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ, 2017ರಲ್ಲಿ ಚೀನಾ 457.7 ಬಿಲಿಯನ್ ಡಾಲರ್, ಮೆಕ್ಸಿಕೊ 85.3 ಡಾಲರ್, ಭಾರತ 83.5 ಬಿಲಿಯನ್ ಡಾಲರ್, ರಷ್ಯಾ 74.8 ಬಿಲಿಯನ್ ಡಾಲರ್ ಮತ್ತು ಪೋಲೆಂಡ್ 66.3 ಬಿಲಿಯನ್ ಡಾಲರ್​ನಷ್ಟಿದೆ.

ಆಂತರಿಕ ಅಕ್ರಮ ವ್ಯವಹಾರ ಮೌಲ್ಯದ ಬಗ್ಗೆ ಭಾರತ ಗಂಭೀರವಾಗಿ ಚಿಂತಿಸಬೇಕು. ಇಲ್ಲಿನ ಸರ್ಕಾರಗಳು ಆಮದು ಮತ್ತು ರಫ್ತುದಾರರ ಮೇಲಿನ ವ್ಯಾಪಾರಕ್ಕೆ ತಕ್ಕಂತೆ ಸರಿಯಾಗಿ ತೆರಿಗೆ ವಿಧಿಸುತ್ತಿಲ್ಲ ಎಂದು ಜಿಎಫ್‌ಐನ ಹಿರಿಯ ಅರ್ಥಶಾಸ್ತ್ರಜ್ಞ ರಿಕ್ ರೌಡೆನ್ ಹೇಳಿದ್ದಾರೆ.

ಇಂತಹ ನಡೆಗಳಿಂದ ಅಕ್ರಮ ವ್ಯಾಪಾರವು ತಪ್ಪು ಹಾದಿಯಲ್ಲಿ ನಡೆಯುವ ಅಭ್ಯಾಸವನ್ನೇ ರೂಢಿಸಿಕೊಂಡಿದ್ದು, ದೇಶಕ್ಕೆ ಅತಿ ದೊಡ್ಡ ಸಮಸ್ಯೆಯಾಗಿದೆ. ಸರಿಯಾಗಿ ತೆರಿಗೆ ವಿಧಿಸಲಾಗದ ದೊಡ್ಡ ಪ್ರಮಾಣ ವ್ಯಾಪಾರ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ, ದೇಶಗಳು ಪ್ರತಿ ವರ್ಷ ಶತಕೋಟಿ ಡಾಲರ್ ಸಂಗ್ರಹಿಸಬೇಕಿದ್ದ ವ್ಯಾಪಾರ ತೆರಿಗೆಯನ್ನು ಕಳೆದುಕೊಳ್ಳುತ್ತಿವೆ ಎಂದು ರೌಡೆನ್ ಎಚ್ಚರಿಸಿದ್ದಾರೆ.

135 ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು 36 ಮುಂದುವರಿದ ಆರ್ಥಿಕತೆಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದಲ್ಲಿನ ಮೌಲ್ಯದ ಅಂತರಗಳ ಪ್ರಕಾರ, ಜಿಎಫ್​ಐ ಪರಿಶೀಲಿಸಿದ ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತವು ಅಗ್ರ ಹತ್ತ ರಾಷ್ಟ್ರಗಳ ಒಳಗೆ ಸ್ಥಿರವಾದ ಸ್ಥಾನ ಪಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.