ನ್ಯೂಯಾರ್ಕ್: ಭಾರತದ ಆರ್ಥಿಕತೆಯು ಕ್ರಮೇಣ ಚೇತರಿಕೆಯ ಹಾದಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಮುಂದಿನ ತಿಂಗಳ ವಿಶ್ವ ಬ್ಯಾಂಕ್ನ ವಸಂತ ಋತುವಿನ ಸಭೆಗೂ ಮುನ್ನ ಹೇಳಿದೆ.
ಭಾರತದ ಆರ್ಥಿಕತೆಯು ಕ್ರಮೇಣ ಚೇತರಿಕೆಯ ಹಾದಿಯಲ್ಲಿದೆ. ನೈಜ ಜಿಡಿಪಿ ಬೆಳವಣಿಗೆ 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಂತಕ್ಕೆ ಮರಳುತ್ತದೆ. ಸಾಂಕ್ರಾಮಿಕ ರೋಗ ಶುರುವಾದ ನಂತರ ಮೊದಲ ಬಾರಿಗೆ ಸ್ಥಿರ ಬಂಡವಾಳ ರಚನೆಯಲ್ಲಿ ಬೆಂಬಲಿತವಾಗಿ ಸಕಾರಾತ್ಮಕ ಹಾದಿಯಲ್ಲಿ ಸಾಗಲಿದೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 2 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ: ಯಾರಿಗೆಷ್ಟು ಹಣ ಸಿಕ್ಕಿತು?
ಪಿಎಂಐಗಳ (ಖರೀದಿ ವ್ಯವಸ್ಥಾಪಕ ಸೂಚ್ಯಂಕ) ವ್ಯಾಪಾರ ಮತ್ತು ಚಲನಶೀಲತೆ ಸೇರಿ ಬಹುತೇಕ ಹೆಚ್ಚಿನ ಆವರ್ತನ ಸೂಚಕಗಳು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮುಂದುವರಿದ ಚೇತರಿಕೆ ಸೂಚಿಸುತ್ತವೆ ಎಂದು ನಾನು ಹೇಳಬಲ್ಲೆ. ಆದರೆ, 2021ರ ಇತ್ತೀಚಿನ ರೂಪಾಂತರ ಮತ್ತು ಸ್ಥಳೀಯ ಲಾಕ್‌ಡೌನ್‌ಗಳು ನಿರಂತರ ಚೇತರಿಕೆಗೆ ಅಪಾಯವನ್ನು ಉಂಟುಮಾಡಬಹುದು ಎಂದು ರೈಸ್ ಎಚ್ಚರಿಸಿದ್ದಾರೆ.
ಐಎಂಎಫ್ ಏಪ್ರಿಲ್ 6ರಂದು ವರ್ಲ್ಡ್ ಎಕನಾಮಿ ಔಟ್ಲುಕ್ ಬಿಡುಗಡೆ ಮಾಡಲಿದೆ.