ETV Bharat / business

ರೈತರ ಆದಾಯ ದ್ವಿಗುಣಗೊಳಿಸಲು ಮೋದಿಯಿಂದ ಸಾಧ್ಯವಿಲ್ಲ: ಅಭಿಜಿತ್​ ಸೇನ್​​​​​​ ವಿಶ್ಲೇಷಣೆ! - ರೈತರ ಆದಾಯ ದ್ವಿಗುಣ

2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಆಯೋಗದ ಮಾಜಿ ಸದಸ್ಯ ಅಭಿಜಿತ್​ ಸೇನ್, 'ಅವರಿಂದ ಖಂಡಿತ ಆಗುವುದಿಲ್ಲ'. ರೈತರಿಗೆ ನಿಜವಾಗಿಯೂ ಸಾಕಷ್ಟು ಕುಂದುಕೊರತೆಗಳಿವೆ. ಏಕೆಂದರೆ ಭವಿಷ್ಯದ ಬಗ್ಗೆ ಅವರಿಗೆ ಖಾತ್ರಿಯಿಲ್ಲ ಎಂದು ಹೇಳಿದರು.

Farm
ರೈತರು
author img

By

Published : Dec 4, 2020, 9:27 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 10ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್ ಅಂದಾಜಿಸಿದ್ದಾರೆ.

ಕೃಷಿ ಸಂಬಂಧಿತ ವಿಷಯಗಳ ತಜ್ಞರೂ ಆಗಿರುವ ಸೇನ್, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ನಾವು ಈ ವರ್ಷ (2020-21) ಶೇ 10ರಷ್ಟು ನಕಾರಾತ್ಮಕ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ಇದು ಖಂಡಿತವಾಗಿಯೂ ಶೇ7.5ರಷ್ಟು ಮೈನಸ್ ಆಗುವುದಿಲ್ಲ. ಅದು ಅದಕ್ಕಿಂತ ಕೆಟ್ಟದಾಗಿದೆ. ಮುಂದಿನ ವರ್ಷ ಭಾರಿ ಪ್ರಮಾಣದಲ್ಲಿ ಇದು ಮರುಕಳಿಸಬಹುದೆಂದು ಜನರು ಆಶಿಸುತ್ತಿದ್ದಾರೆ. ನನಗೆ ಇದರ ಬಗ್ಗೆ ಅನುಮಾನವಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ಆರ್‌ಬಿಐ ಪ್ರಕಾರ, 2020-21ರಲ್ಲಿ ಆರ್ಥಿಕತೆಯು ಶೇ 7.5ರಷ್ಟು ಕುಗ್ಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಇದೇ ಸಮಯದಲ್ಲಿ ಏನೂ ಮಾಡದೆ ಇದ್ದರೂ ಅದು ಸಂಭವಿಸುತ್ತದೆ ಎಂಬುದನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಆದ್ದರಿಂದ ಇದೊಂದು ಕೇವಲ ಭರವಸೆಯಾಗಿಯೇ ಉಳಿದಿದೆ. ಸರ್ಕಾರದ ನೈಜ ಖರ್ಚು ಬಜೆಟ್​ನಲ್ಲಿ ಲೆಕ್ಕಾಚಾರ ಮಾಡಿದ್ದಕ್ಕಿಂತ ಕಡಿಮೆಯಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.

ಗ್ರಾಮೀಣ ಬ್ಯಾಂಕ್​ಗಳಿಗೆ ಮೊದಲ ಬಾರಿಗೆ ಹಣಕಾಸು ಮಾರುಕಟ್ಟೆ ಪ್ರವೇಶಕ್ಕೆ ಅನುಮತಿ ಕೊಟ್ಟ RBI

ಕೇಂದ್ರದ ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಸೇನ್, ಸರ್ಕಾರಕ್ಕೆ ಒಂದು ದೃಷ್ಟಿಕೋನವಿದ್ದರೇ ರೈತರಿಗೆ ಇನ್ನೊಂದು ದೃಷ್ಟಿಕೋನವಿದೆ. ಇದು ಭಿನ್ನಾಭಿಪ್ರಾಯಕ್ಕೆ ಹಾದಿ ಮಾಡಿಕೊಟ್ಟಿದೆ. ಈ ವಿಷಯದಲ್ಲಿ ಸರ್ಕಾರದ ಮುಖ್ಯ ವಿಫಲತೆಯೆಂದರೆ (ಹೊಸ ಕೃಷಿ ಕಾನೂನುಗಳು) ತ್ವರಿತಗತಿಯಲ್ಲಿ ಕಾನೂನುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋದದ್ದು ಎಂದರು.

ರೈತರಿಗೆ ನಿಜವಾಗಿಯೂ ಸಾಕಷ್ಟು ಕುಂದು ಕೊರತೆಗಳಿವೆ. ಏಕೆಂದರೆ ಭವಿಷ್ಯದ ಬಗ್ಗೆ ಅವರಿಗೆ ಖಾತ್ರಿಯಿಲ್ಲ ಎಂದೂ, 2022ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೇನ್, 'ಖಂಡಿತ ಇಲ್ಲ' ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.