ETV Bharat / business

ರಾಜಕೀಯ ಸ್ಥಿರತೆಗೆ ಮನಸೋತ ಕಂಪನಿಗಳು: ಜಗತ್ತಿನ ಹೂಡಿಕೆಯ ನೆಚ್ಚಿನ ತಾಣ ಭಾರತ! - ಭಾರತದ ರಾಜಕೀಯ ಸ್ಥಿರತೆ ಹೂಡಿಕೆಯ ಆಕರ್ಷಣೆ

ಸುಮಾರು 30 ಪ್ರತಿಶತದಷ್ಟು ಕಂಪನಿಗಳು 500 ಮಿಲಿಯನ್​ ಡಾಲರ್​ಗಿಂತ ಅಧಿಕ ಹೂಡಿಕೆ ಮಾಡಲು ಯೋಜಿಸುತ್ತಿವೆ. ಸುಮಾರು 50 ಪ್ರತಿಶತದಷ್ಟು ಜನರು 2025ರ ವೇಳೆಗೆ ಭಾರತವನ್ನು ಅಗ್ರ ಮೂರು ಆರ್ಥಿಕತೆಗಳಲ್ಲಿ ಅಥವಾ ವಿಶ್ವದ ಪ್ರಮುಖ ಉತ್ಪಾದನಾ ತಾಣವಾಗಿ ನೋಡುತ್ತಾರೆ ಎಂದಿದೆ.

investments
ಹೂಡಿಕೆ
author img

By

Published : Oct 14, 2020, 9:37 AM IST

ನವದೆಹಲಿ: ಮುಂದಿನ 2-3 ವರ್ಷಗಳಲ್ಲಿ ಸಾಗರೋತ್ತರ ಹೂಡಿಕೆಗೆ ಭಾರತವು ಮೊದಲ ಮೂರು ಆಯ್ಕೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಸಿಐಐ - ಇವೈ ಎಫ್‌ಡಿಐ ಸಮೀಕ್ಷೆಯ ವರದಿ ತಿಳಿಸಿದೆ.

ಸಮೀಕ್ಷೆಯ ಪ್ರಕಾರ, ಎಂಎನ್‌ಸಿ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಎರಡರಷ್ಟು ಜನರಿಗೆ ಭವಿಷ್ಯದ ಹೂಡಿಕೆಗಳಿಗೆ ಭಾರತ ಮೊದಲ ಆಯ್ಕೆಯಾಗಿದೆ. ಭಾರತಯೇತರ ಎಚ್​​ಕ್ಯೂ ಎಂಎನ್‌ಸಿಗಳನ್ನು ಪ್ರತಿನಿಧಿಸುವ ಶೇ 25ರಷ್ಟು ಜನರು ಭವಿಷ್ಯದ ಹೂಡಿಕೆಗಳಿಗೆ ಭಾರತವನ್ನು ಮೊದಲ ಆಯ್ಕೆಯಾಗಿ ನೋಡುತ್ತೇವೆ ಎಂದು ಹೇಳಿದ್ದಾರೆ.

ಮುಂದಿನ 2-3 ವರ್ಷಗಳಲ್ಲಿ ಜಾಗತಿಕ ಹೂಡಿಕೆ ಮಾಡಲು ಎಲ್ಲ ಪ್ರತಿ ಸ್ಪಂದಕರಲ್ಲಿ 80 ಪ್ರತಿಶತದಷ್ಟು ಮತ್ತು ಭಾರತೀಯೇತರ ಪ್ರಧಾನ ಕಚೇರಿಯಲ್ಲಿ 71 ಪ್ರತಿಶತದಷ್ಟು ಜನರು ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸುಮಾರು 30 ಪ್ರತಿಶತದಷ್ಟು ಕಂಪನಿಗಳು 500 ಮಿಲಿಯನ್​ ಡಾಲರ್​ಗಿಂತ ಅಧಿಕ ಹೂಡಿಕೆ ಮಾಡಲು ಯೋಜಿಸುತ್ತಿವೆ. ಸುಮಾರು 50 ಪ್ರತಿಶತದಷ್ಟು ಜನರು 2025ರ ವೇಳೆಗೆ ಭಾರತವನ್ನು ಅಗ್ರ ಮೂರು ಆರ್ಥಿಕತೆಗಳಲ್ಲಿ ಅಥವಾ ವಿಶ್ವದ ಪ್ರಮುಖ ಉತ್ಪಾದನಾ ತಾಣವಾಗಿ ನೋಡುತ್ತಾರೆ ಎಂದಿದೆ.

ಭಾರತವನ್ನು ತಮ್ಮ ಅನುಕೂಲಕರ ತಾಣವನ್ನಾಗಿ ನೋಡಲು ಪ್ರಮುಖ ಮೂರು ಕಾರಣಗಳಿಗೆ ಮಾರುಕಟ್ಟೆ ಸಾಮರ್ಥ್ಯ, ನುರಿತ ಕಾರ್ಯಪಡೆ ಮತ್ತು ರಾಜಕೀಯ ಸ್ಥಿರತೆಯನ್ನು ಆರಿಸಿಕೊಂಡಿದ್ದಾರೆ. ಹೂಡಿಕೆಯ ತಾಣವಾಗಿ ಭಾರತದ ಆಕರ್ಷಣೆಗೆ ಕಾರಣವಾಗುವ ಇತರ ಪ್ರಮುಖ ಅಂಶಗಲ್ಲಿ ಅಗ್ಗದ ಕಾರ್ಮಿಕ ಲಭ್ಯತೆ, ನೀತಿಗಳ ಸುಧಾರಣೆಗಳು ಮತ್ತು ಕಚ್ಚಾ ವಸ್ತುಗಳ ಲಭ್ಯತೆ ಸೇರಿವೆ ಎಂದು ವರದಿ ವಿವರಿಸಿದೆ.

ಕಾರ್ಪೊರೇಟ್ ತೆರಿಗೆ ಕಡಿತ, ವ್ಯಾಪಾರ ಕ್ರಮಗಳನ್ನು ಸುಲಭಗೊಳಿಸುವುದು, ಕಾರ್ಮಿಕ ಕಾನೂನುಗಳ ಸರಳೀಕರಣ, ಎಫ್‌ಡಿಐ ಸುಧಾರಣೆಗಳು ಮತ್ತು ಮಾನವ ಬಂಡವಾಳದ ಕೇಂದ್ರೀಕ ಇತ್ತೀಚಿನ ಸುಧಾರಣೆಗಳು ಹೊಸ ಹೂಡಿಕೆಗಳಿಗೆ ಉತ್ತೇಜಕವಾಗಿವೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.