ETV Bharat / business

ತಮಿಳುನಾಡಿನ ಶಿಕ್ಷಣ ಸಂಸ್ಥೆ ಸೇರಿ 22 ಸ್ಥಳಗಳ ಮೇಲೆ ಐಟಿ ದಾಳಿ: 5 ಕೋಟಿ ನಗದು ಜಪ್ತಿ! - IT Department raid in Chennai

ತಮಿಳುನಾಡಿನ 22 ಸ್ಥಳಗಳಲ್ಲಿ ನಡೆದ ಶೋಧ ಕಾರ್ಯದ ವೇಳೆ ದೊರೆತ ಪುರಾವೆಗಳು ಸ್ವೀಕರಿಸಿದ ಶುಲ್ಕ ನಿಗ್ರಹಿಸುವ ಕುರಿತಾದ ಆರೋಪಗಳು ನಿಜವೆಂದು ತಿಳಿದು ಬಂದಿದೆ. ಲೆಕ್ಕವಿಲ್ಲದ ರಶೀದಿಗಳನ್ನು ಟ್ರಸ್ಟಿಗಳ ವೈಯಕ್ತಿಕ ಖಾತೆಗಳಿಗೆ ಕಳುಹಿಸಲಾಗುತ್ತದೆ. ಕಂಪನಿ ಮೂಲಕ ರಿಯಲ್ ಎಸ್ಟೇಟ್​​ನಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Tn
ತಮಿಳುನಾಡು
author img

By

Published : Oct 29, 2020, 4:04 PM IST

ನವದೆಹಲಿ: ತಮಿಳುನಾಡಿನ ಕೊಯಮತ್ತೂರು, ಈರೋಡ್, ಚೆನ್ನೈ ಮತ್ತು ನಾಮಕ್ಕಲ್‌ನ 22 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಶಿಕ್ಷಣ ಸಂಸ್ಥೆ ಸಮೂಹ ಹಾಗೂ ಅದರ ಸಹಚರ ಗುತ್ತಿಗೆದಾರರಿ ಹೂಡಿಕೆ ಹಾಗೂ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸಾಮಾನ್ಯ ಖಾತೆಗಳ ಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಸಂಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ.

ಶೋಧಕಾರ್ಯದ ವೇಳೆ ದೊರೆತ ಪುರಾವೆಗಳು ಸ್ವೀಕರಿಸಿದ ಶುಲ್ಕ ನಿಗ್ರಹಿಸುವ ಕುರಿತಾದ ಆರೋಪಗಳು ನಿಜವೆಂದು ತಿಳಿದು ಬಂದಿದೆ. ಲೆಕ್ಕವಿಲ್ಲದ ರಶೀದಿಗಳನ್ನು ಟ್ರಸ್ಟಿಗಳ ವೈಯಕ್ತಿಕ ಖಾತೆಗಳಿಗೆ ಕಳುಹಿಸಲಾಗುತ್ತದೆ. ಕಂಪನಿಯ ಮೂಲಕ ರಿಯಲ್ ಎಸ್ಟೇಟ್​​ನಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಇತರ ಷೇರುದಾರರಾದ ತಿರುಪುರದ ಇಂಜಿನಿಯರ್ ಮತ್ತು ಜವಳಿ ಉದ್ಯಮಿಗಳನ್ನು ಸಹ ಒಳಗೊಂಡಿದೆ.

ನಮಕ್ಕಲ್‌ನ ಸಿವಿಲ್ ಗುತ್ತಿಗೆದಾರರ ಪ್ರಕರಣದಲ್ಲಿ ಶೋಧದ ಸಂದರ್ಭದಲ್ಲಿ ಕಾರ್ಮಿಕ ಶುಲ್ಕ, ವಸ್ತು ಖರೀದಿ ಇತ್ಯಾದಿಗಳ ಹೆಸರಿನಲ್ಲಿ ನಕಲಿ ವೆಚ್ಚಗಳನ್ನು ಮೀಸಲಿಟ್ಟು ವ್ಯಾಪಕ ಖರ್ಚಿನ ದಾಖಲೆ ತೋರಿಸಲಾಗಿದೆ. ಶೋದದ ವೇಳೆ ಲೆಕ್ಕವಿಲ್ಲದಷ್ಟು ಹೂಡಿಕೆಗಳನ್ನು ಪತ್ತೆಹಚ್ಚಲಾಗಿದೆ. ಹಣದ ಪಾವತಿ ಸುಮಾರು 150 ಕೋಟಿ ರೂ.ನಷ್ಟಿದೆ.

5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕೆಲವು ಲಾಕರ್‌ಗಳು ತೆರೆಯಬೇಕಿದೆ. ಶೋಧ ಕಾರ್ಯ ಇನ್ನೂ ಮುಂದುವರೆದಿದೆ ಎಂದು ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.