ಹೈದರಾಬಾದ್ : ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ (40) ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತು. ಆದರೆ, ಅವನಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ. ಯಾರಿಂದ ಸೋಂಕಿಗೆ ತುತ್ತಾ ಎಂಬುದು ಸಹ ತಿಳಿಯಲಿಲ್ಲ. ಅವರು ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿ, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಿ, ಆರೋಗ್ಯ ಸಿಬ್ಬಂದಿ ನೀಡಿದ ಔಷಧಿಗಳನ್ನು ಸೇವಿಸಿದರು.
ಆರಂಭದಲ್ಲಿ ಸ್ವಲ್ಪ ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬಂದಿದ್ದರೂ 17 ದಿನಗಳಲ್ಲಿ ವಾಸಿಯಾದರು. ನಾಲ್ಕು ವಾರಗಳ ಬಳಕ ಅಂಗಡಿ ಮಾಲೀಕರು ಆ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ. ಒಂದು ತಿಂಗಳು ಗೈರಾಗಿದ್ದರಿಂದ ಅವರ ಸಂಬಳ ಸ್ಥಗಿತಗೊಳಿಸಲಾಯಿತು. ತನ್ನ ಕುಟುಂಬಸ್ಥರನ್ನು ಪೋಷಿಸಲು ಆ ವ್ಯಕ್ತಿ ಹೆಣಗಾಡುತ್ತಿದ್ದಾರೆ.
ಮನೆಯಲ್ಲಿ ಕೆಲಸ ಮಾಡುವು 32 ವರ್ಷದ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂತು. ವಸತಿ ಸಮುಚ್ಚಯದ ಎಲ್ಲಾ ನಿವಾಸಿಗಳಿಗೆ ಕೋವಿಡ್ ಪರೀಕ್ಷೆ ನಡೆಸುವಾಗ ಅವಳನ್ನು ಸಹ ಪರೀಕ್ಷಿಗೆ ಒಳಪಡಿಸಲಾಯಿತು. ಸೋಂಕು ಇರುವುದು ಅವಳಲ್ಲಿ ದೃಢಪಟ್ಟಿತು. ಆದರೆ, ಆಕೆಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ. ಜಿಹೆಚ್‌ಎಂಸಿ ಸಿಬ್ಬಂದಿ ನೀಡಿದ ಔಷಧಿಗಳನ್ನು ಸೇವಿಸಿದ್ದು, ಯಾವುದೇ ಲಕ್ಷಣಗಳಿಲ್ಲದೆ 10 ದಿನಗಳು ಕಳೆದಿವೆ.
ಅಪಾರ್ಟ್ಮೆಂಟ್ನಲ್ಲಿ ಆಕೆಗೆ ಇನ್ನೂ ಎರಡು ವಾರಗಳ ಕಾಲ ಪ್ರವೇಶಿಸಲು ನಿರ್ಬಂಧ ಹಾಕಲಾಗಿದೆ. ಪತಿ ಆಟೋ ಡ್ರೈವರ್ ಆಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಗೆಲಸದ ಹೊರತೂ ಬೇರೆ ಯಾವುದೇ ಆದಾಯವಿಲ್ಲ. ಈಗ ಅವಳು ಕೆಲಸಕ್ಕೆ ಹೋಗುತ್ತಿಲ್ಲ. ಆರ್ಥಿಕ ತೊಂದರೆಗಳು ಕುಟುಂಬವನ್ನು ಉಸಿರುಗಟ್ಟಿಸುತ್ತಿವೆ.
ನೌಕರರು, ವ್ಯಾಪಾರಿಗಳು, ಕಾರ್ಮಿಕರು ಸೇರಿ ಎಲ್ಲ ವರ್ಗದ ಸಮುದಾಯ ಕೊರೊನಾ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಪಾಸಿಟಿವ್ ವರದಿ ಬಂದ ಬಳಿಕ ಸೋಂಕಿತರು ವಾರಗಳವರೆಗೆ ಕೆಲಸದಿಂದ ದೂರ ಇರಬೇಕಾಗುತ್ತದೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಸಹ ಹೆಚ್ಚಿನ ಜನ ಒಂದು ತಿಂಗಳಿಗಿಂತ ಅಧಿಕ ಕಾಲ ಮನೆಯಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ಇದು ಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಾರಗಳವರೆಗೆ ಕೆಲಸ ಕಳೆದುಕೊಂಡ ಕುಶಲ ಕಾರ್ಮಿಕರು ಮತ್ತು ದಿನಗೂಲಿ ಮಾಡುವವರು ಬದುಕು ಶೋಚನೀಯವಾಗಿದೆ.
ಸೋಂಕಿನ ನೆಗೆಟಿವ್ ಪರೀಕ್ಷಾ ಪ್ರಮಾಣಪತ್ರ ಹೊಂದಿರದಿದ್ದರೆ ನೌಕರರಿಗೆ ಕೆಲಸದ ಸ್ಥಳಕ್ಕೆ ಪ್ರವೇಶವಿಲ್ಲ ಎಂದು ಹಲವರು ಸ್ಪಷ್ಟಪಡಿಸುತ್ತಿದ್ದಾರೆ. ಇದಕ್ಕೆ ಬಲಿಪಶು ಆದವರು ಸಂದಿಗ್ಧತೆಗೆ ಒಳಗಾಗುತ್ತಿದ್ದಾರೆ. ಕೋವಿಡ್ ಬಗ್ಗೆ ಈಗ ಎದ್ದಿರುವ ಅನುಮಾನಗಳನ್ನು ಡಾ.ಎಂ ವಿ ರಾವ್ ಅವರು ಸ್ಪಷ್ಟಪಡಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾರ್ಗಸೂಚಿಗಳ ಪ್ರಕಾರ, ಯಾವುದೇ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದ ವ್ಯಕ್ತಿಗಳು (ಲಕ್ಷಣರಹಿತ) 17 ದಿನಗಳ ನಂತರ ಕರ್ತವ್ಯಕ್ಕೆ ಮರಳಬಹುದು. ನಿಗದಿತ ಅವಧಿಯ ನಂತರ ಮರು ಪರೀಕ್ಷೆಯ ಅಗತ್ಯವಿಲ್ಲ ಎಂದು ತಿಳಿಸಿದೆ.
ಪ್ರತ್ಯೇಕತೆ 10 + 7 ದಿನಗಳು ಮಾತ್ರ :
- ಶೇ.85ರಷ್ಟು ಪಾಸಿಟಿವ್ ಕೇಸ್ಗಳಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುತ್ತಿಲ್ಲ. ಅವರಿಗೆ ಅರಿವಿಲ್ಲದೆಯೂ ವೈರಸ್ ತಗುಲುತ್ತದೆ
- ಪಾಸಿಟಿವ್ ಕಂಡು ಬಂದವರು ಮನೆಯಲ್ಲಿ ಪ್ರತ್ಯೇಕವಾಗಿ ಇರುವುದು ಉತ್ತಮ
- ಮನೆಯಲ್ಲಿ ಪ್ರತ್ಯೇಕ ಕೊಠಡಿ ಅಥವಾ ಸ್ನಾನಗೃಹ ಸೌಲಭ್ಯ ಇಲ್ಲದಿದ್ದರೆ ಸರ್ಕಾರಿ ಕೇಂದ್ರಗಳಲ್ಲಿ ಉಳಿಯಬಹುದು
- ಪಾಟಿಸಿವ್ ಹೊಂದಿದ್ದವರು 10 ದಿನಗಳ ತನಕ ಪ್ರತ್ಯೇಕವಾಗಿ ಇರಬೇಕು. ಜ್ವರ, ಕೆಮ್ಮು, ಶೀತ ಮತ್ತು ಆಯಾಸದಂತಹ ಯಾವುದೇ ರೋಗಲಕ್ಷಣಗಳಿಗೆ ಮುಂದಿನ 7 ದಿನಗಳವರೆಗೆ ಗಮನಿಸುತ್ತಿರಬೇಕು
- ಗಡುವು ಮುಗಿಯುವವರೆಗೂ ಯಾವುದೇ ಲಕ್ಷಣಗಳು ಕಾಣಿಸದಿದ್ದರೆ, ಅವರು ಕೊರೊನಾದಿಂದ ಮುಕ್ತರಾಗಿದ್ದಾರೆ ಎಂದು ಪರಿಗಣಿಸಬೇಕು
- ಮೇಲಿನ ಮಾರ್ಗ ಸೂಚಿಗಳನ್ನು ಯಶಸ್ವಿಯಾಗಿ ಪೂರೈಸಿ 17 ದಿನಗಳ ನಂತರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬಹುದು
ಸೌಮ್ಯ ಲಕ್ಷಣ ಇರುವವರು :
- ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರು ಸಹ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಜೊತೆಗೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು
- ಪಾಸಿಟಿವ್ ಬಂದವರು ಮೊದಲ 10 ದಿನಗಳವರೆಗೆ ವೈದ್ಯರ ತಪಾಸಣೆಯಲ್ಲಿರಬೇಕು. ಮೂರು ದಿನಗಳ ತನಕ ಜ್ವರ ಇಲ್ಲದಿದ್ದರೆ ಉಳಿದ 7 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು
- 10 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸದಿದ್ದರೆ, ಪಾಸಿಟಿವ್ ರೋಗನಿರ್ಣಯ ಆದ ದಿನದಿಂದ ಹಿಡಿದು 17 ದಿನಗಳ ನಂತರ ಕೆಲಸಕ್ಕೆ ಹಾಜರಾಗಬಹುದು
- ಈ ಸಮಯದಲ್ಲಿ ರೋಗಲಕ್ಷಣಗಳು ಮತ್ತೆ ಕಾಣಿಸಿಕೊಂಡರೆ, ಎಂದಿನಂತೆ ಪ್ರತ್ಯೇಕ ವಾಸ ಮುಂದುವರಿಸಬೇಕು
- ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಂತರ ಮನೆಯಲ್ಲಿ ಒಂದು ವಾರದವರೆಗೆ ಮೇಲ್ವಿಚಾರಣೆಗೆ ಒಳಗಾಗಬೇಕು. ಆ ಸಮಯದಲ್ಲಿ ರೋಗಲಕ್ಷಣಗಳು ಮತ್ತೆ ಕಾಣಿಸದಿದ್ದರೆ ತಮ್ಮ ದಿನಚರಿಗೆ ಹಾಜರಾಗಬಹುದು.
- ರೋಗಲಕ್ಷಣಗಳು ಮುಂದುವರಿದರೆ ಕೆಲಸ ಪುನರಾರಂಭಿಸಲು ವೈದ್ಯರ ಸಮಾಲೋಚನೆ, ಚಿಕಿತ್ಸೆ ಮತ್ತು ತೆರವು ಅಗತ್ಯವಾಗಿದೆ