ETV Bharat / business

ಹೌಸಿಂಗ್-ಕಮರ್ಷಿಯಲ್​​​ ರಿಯಲ್ ಎಸ್ಟೇಟ್​... 'ಕುಂಟನ ಮೇಲೆ ಕುರುಡನ ಸವಾರಿ'

2019ರಲ್ಲಿ ಭಾರತೀಯ ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಕಂಡುಬರಲಿಲ್ಲ. ನಗದು ಬಿಕ್ಕಟ್ಟು, ವಿಳಂಬವಾದ ಪ್ರಾಜೆಕ್ಟ್​​ಗಳಿಂದ ಕೆಲವು ಬಿಲ್ಡರ್​ಗಳು ದಿವಾಳಿತನ ಘೋಷಿಸಿದರು ಮತ್ತು ರಾಷ್ಟ್ರೀಯ ಕಂಪನಿ ಕಾನೂನಿನ ನ್ಯಾಯ ಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ಪ್ರಕರಣಗಳ ವಿಚಾರಣೆಗಳು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾದವು.

author img

By

Published : Dec 30, 2019, 8:20 PM IST

Real Estate
ರಿಯಲ್​ ಎಸ್ಟೇಟ್

ನವದೆಹಲಿ: ಕಪ್ಪುಹಣ ಹೂಡಿಕೆಗೆ ತಾಣ ಎನಿಸಿದ್ದ ರಿಯಲ್​ ಎಸ್ಟೇಟ್​ ಉದ್ಯಮವು ಕಳೆದ ಎರಡು-ಮೂರು ವರ್ಷಗಳಿಂದ ನೋಟ್ ಬ್ಯಾನ್ ಮತ್ತು ಜಿಎಸ್​ಟಿ ಹೊಡತಕ್ಕೆ ಸಿಲುಕಿ ನಲುಗಿತ್ತು. 2019ರಲ್ಲಿ ಉದ್ಯಮದ ಪೂರಕ ಕಚ್ಚಾ ಸರಕುಗಳ ಮೇಲಿನ ತೆರಿಗೆ ಕಡಿತದಂತಹ ಸುಧಾರಣಾ ಕ್ರಮಗಳಿಂದ ಅದು ಅಲ್ಪ ಮಟ್ಟದಲ್ಲಿ ಚೇತರಿಸಿಕೊಂಡಿದೆ. ವಾಣಿಜ್ಯ ರಿಯಲ್​ ಎಸ್ಟೇಟ್​ ಸೋದರ ಸಂಬಂಧಿಯಾದ ವಸತಿ ಉದ್ಯಮ ತನ್ನ ಕಳಪೆ ಸಾಧನೆಯನ್ನು 2019ರಲ್ಲಿಯೂ ಮುಂದುವರೆಸಿದೆ.

ವರ್ಷವಿಡೀ ಸರ್ಕಾರವು ಕೈಗೊಂಡ ಕೆಲವು ಕ್ರಮಗಳ ಹೊರತಾಗಿಯೂ ವಸತಿ ಆಸ್ತಿಗಳ ಮಾರಾಟವು ಸ್ವಲ್ಪಮಟ್ಟಿಗೆ ಹೆಚ್ಚಳವಾಯಿತು. ಆದರೆ, ಆಫೀಸ್ ಸ್ಪೇಸ್ ಗುತ್ತಿಗೆಯು 40 ಪ್ರತಿಶತದಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ 46.5 ಮಿಲಿಯನ್ ಚದರ ಅಡಿಗೆ ತಲುಪಿತು. ಭಾರತದ ಮೊದಲ ರಿಯಲ್​ ಎಸ್ಟೇಟ್ ಇನ್ವೆಸ್ಟ್​ಮೆಂಟ್ ಟ್ರಸ್ಟ್ ಸುಮಾರು 5,000 ಕೋಟಿ ರೂ.ವರೆಗೂ ಹಂಚಿಕೆ ಮಾಡಿತು.

ರಿಯಲ್ ಎಸ್ಟೇಟ್​ನ ವಸತಿ ವಿಭಾಗವು ಕಳಪೆ ಮಾರಾಟ ಮತ್ತು ತೀವ್ರವಾದ ಹಣದ ಬಿಕ್ಕಟ್ಟಿನಿಂದ ವರ್ಷವಿಡಿ ಹೆಣಗಾಡಿತು. ಗೃಹ ಬಳಕೆದಾರರು ತಮ್ಮ ಕನಸಿನ ಮನೆಗಳನ್ನು ಪಡೆಯಲು ಅನಿವಾರ್ಯವಾಗಿ ಹೋರಾಟ ಮಾಡಬೇಕಾಯಿತು. ಅನೇಕ ಬಿಲ್ಡರ್‌ಗಳು ದಿವಾಳಿತನದಿಂದ ನ್ಯಾಯಾಲಯದ ಮುಂದೆ ನಿಲ್ಲಬೇಕಾಯಿತು.

2019ರಲ್ಲಿ ಭಾರತೀಯ ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಕಂಡುಬರಲಿಲ್ಲ. ನಗದು ಬಿಕ್ಕಟ್ಟು, ವಿಳಂಬವಾದ ಪ್ರಾಜೆಕ್ಟ್​ಗಳಿಂದ ಕೆಲವು ಬಿಲ್ಡರ್​ಗಳು ದಿವಾಳಿತನ ಘೋಷಿಸಿದರು ಮತ್ತು ರಾಷ್ಟ್ರೀಯ ಕಂಪನಿ ಕಾನೂನಿನ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ಪ್ರಕರಣಗಳ ವಿಚಾರಣೆಗಳು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾದವು ಎಂದು ಕ್ರೆಡೈ ಅಧ್ಯಕ್ಷ ಸತೀಶ್ ಮಗರ್ ಹೇಳಿದರು.

ರಿಲಯ್ ಎಸ್ಟೇಟ್​ ವಲಯವು ಪ್ರಸ್ತುತ ನಗದು ಬಿಕ್ಕಟ್ಟು ಸಮಸ್ಯೆ ಎದುರಿಸುತ್ತಿದೆ. ಮುಂದಿನ ವರ್ಷ ಪುನರುಜ್ಜೀವನಗೊಳ್ಳುವ ಆಶೆಯ ಇದೆ. ಇದಕ್ಕೆ ಸರ್ಕಾರವು ತೆರಿಗೆ ಕಡಿತ, ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ಗಳ ಮೇಲಿನ ಜಿಎಸ್‌ಟಿ ದರದಲ್ಲಿ ತೀವ್ರ ಇಳಿಕೆ ಹಾಗೂ ಸ್ಥಗಿತಗೊಂಡ ವಸತಿ ಯೋಜನೆಗಳ ರಕ್ಷಣೆಗೆ 25 ಸಾವಿರ ಕೋಟಿ ರೂ. ನೀಡಬೇಕಿದೆ ಎಂದು ಅಪೆಕ್ಸ್ ರಿಯಾಲ್ಟರ್ ಅಧ್ಯಕ್ಷ ಜಾಕ್ಸೆ ಷಾ ಮನವಿ ಮಾಡಿದರು.

ಪ್ರಾಪರ್ಟಿ ಬ್ರೋಕರೇಜ್ ಸಂಸ್ಥೆ ಅನರಾಕ್ ಪ್ರಕಾರ, ದೇಶದ ಏಳು ಪ್ರಮುಖ ನಗರಗಳಲ್ಲಿ ವಸತಿ ಮಾರಾಟವು ಕೇವಲ ಶೇ. 5ರಷ್ಟು ಏರಿಕೆಯಾಗಿ 2,61,370ಕ್ಕೆ ತಲುಪಿದೆ. ಹಿಂದಿನ ವರ್ಷ ಇದು 2,48,310 ಯುನಿಟ್​ಗಳಷ್ಟು ಇತ್ತು ಎಂದು ತಿಳಿಸಿದೆ.

ಜುಲೈ-ಡಿಸೆಂಬರ್ ಅವಧಿಯಲ್ಲಿ ಹಬ್ಬದ ಬೇಡಿಕೆಯಿಂದ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತ್ತು. ಆದರೆ, ವರ್ಷದ ಮೊದಲ ಆರು ತಿಂಗಳಿಗೆ ಹೋಲಿಸಿದರೆ 2019ರ ದ್ವಿತೀಯಾರ್ಧದ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಸ್ಥಿರವಾದ ದ್ರವ್ಯತೆ ಬಿಕ್ಕಟ್ಟು, ನಿರೀಕ್ಷೆಗಿಂತ ಕಡಿಮೆಯಾದ ಖರೀದಿದಾರರ ಮನೋಭಾವ ಮತ್ತು ಕುಂಠಿತಗೊಂಡ ಜಿಡಿಪಿ ಬೆಳವಣಿಗೆಯು 2019ರ ದ್ವಿತೀಯಾರ್ಧದಲ್ಲಿ ವಸತಿ ಬೆಳವಣಿಗೆಗೆ ಬ್ರೇಕ್ ಹಾಕಿತು ಎಂದು ಅನರಾಕ್​ ಅಧ್ಯಕ್ಷ ಅನುಜ್ ಪುರಿ ಹೇಳಿದರು.

Intro:Body:

Real estate developers in the housing segment struggled to stay afloat due to poor sales and acute cash crunch, and homebuyers continued their battle to get their dream homes, dragging many builders to insolvency court in 2019.

New Delhi: Residential property as an investment has always been the poor cousin of commercial real estate, and 2019 couldn't have been a better testimony to this statement, as housing sales were plagued by demand slowdown amid surplus inventory and office space leasing hit a record high.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.