ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಲೆಟಿನ್ ಪ್ರಕಾರ, ದೇಶಾದ್ಯಂತದ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವು ಚುರುಕುಗೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಬಳಕೆ ಮತ್ತು ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬಳಕೆ ಮತ್ತು ಕಠಿಣ ಪ್ರವೃತ್ತಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೆಚ್ಚಿನ ಶ್ರಮದ ಅಗತ್ಯವಿದೆ ಎಂಬುದನ್ನು ಕೊರೊನಾ ಬಹಿರಂಗಪಡಿಸಿತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜನರು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿದ್ದರು. ನಿರ್ಬಂಧಗಳು ಸಡಿಲಿಸಿದ ನಂತರ, ಸಾಮಾನ್ಯತೆ ಮೇಲುಗೈ ಸಾಧಿಸಿತು. ಈಗ ಅವರು ತಮ್ಮ ವಿವೇಚನೆಯಿಂದ ಹಣ ಬಯಸಿದ್ದನ್ನು ಖರೀದಿಸಲು ಖರ್ಚು ಮಾಡುತ್ತಿದ್ದಾರೆ. ಇದು ಬಳಕೆಯ ಪ್ರವೃತ್ತಿಯಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಆರು ತಿಂಗಳಲ್ಲಿ 2ನೇ ಬಾರಿ ವೇತನ ಹೆಚ್ಚಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್!
ಖಾಸಗಿ ಬಳಕೆ 2020-21ರ ಮೊದಲ ತ್ರೈಮಾಸಿಕದಲ್ಲಿ ಶೇ 26.3ರಷ್ಟು ಕುಸಿದಿದೆ. ಸಾರ್ವಜನಿಕ ಉಳಿತಾಯ ಏಕೆ ನಿಧಾನವಾಗುತ್ತಿದೆ ಎಂಬುದನ್ನು ಇದು ವಿವರಿಸುತ್ತದೆ. 2020ರ ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ನಡೆಸಿದ ಸಮೀಕ್ಷೆಯ ಪ್ರಕಾರ, ಗ್ರಾಹಕರ ವಿಶ್ವಾಸವು ಜೀವಿತಾವಧಿಯ ಕನಿಷ್ಠ ಮಟ್ಟಕ್ಕೆ ಇಳಿಯುವ ನಿರೀಕ್ಷೆಯಿದೆ. ಬಳಕೆ ಹೆಚ್ಚಾದಂತೆ, ಉಳಿತಾಯವು ಮತ್ತಷ್ಟು ನಿಧಾನಗೊಳ್ಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ತ್ರೈಮಾಸಿಕ ಆಧಾರದ ಮೇಲೆ ಬ್ಯಾಂಕ್ ಸಾಲವು ಅಕ್ಟೋಬರ್ - ಡಿಸೆಂಬರ್ನಲ್ಲಿ ಶೇ 2.7ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದು ಶೇ 0.2ರಷ್ಟಿತ್ತು. ಅದೇ ಸಮಯದಲ್ಲಿ ಠೇವಣಿಗಳ ಬೆಳವಣಿಗೆ 1.9 ಪ್ರತಿಶತದಿಂದ 2.4 ಪ್ರತಿಶತಕ್ಕೆ ಇಳಿದಿದೆ ಎಂದು ಬುಲೆಟಿನ್ ಹೇಳಿದೆ.
ಸಾರ್ವಜನಿಕ ಉಳಿತಾಯದ ಬೆಳವಣಿಗೆಯು ಮತ್ತಷ್ಟು ನಿಧಾನವಾಗಲಿದೆ ಎಂದು ನಿರೀಕ್ಷಿಸಲಾಗಿದ್ದರೂ ಷೇರು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯ ಹೆಚ್ಚಳವು, ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದೆ ಎಂದಿದೆ.