ETV Bharat / business

ಬಲಿಷ್ಠ ಭಾರತದ ರಫ್ತು ವಹಿವಾಟಿನ ಬೆನ್ನೆಲುಬು ನಮ್ಮ ರಾಜ್ಯ: ಆತ್ಮನಿರ್ಭರ ಭಾರತದತ್ತ ಕರ್ನಾಟಕ ದಾಪುಗಾಲು!

ನೀತಿ ಆಯೋಗದ ರಫ್ತು ಸನ್ನದ್ಧತೆ ಸೂಚ್ಯಂಕ 2020 ವರದಿಯ ಪ್ರಕಾರ, ಆರು ಕರಾವಳಿ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳ ಮೊದಲ ಹತ್ತು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿವೆ. ಇವು ರಫ್ತು ಉತ್ತೇಜಿಸಲು ಬಲವಾದ ಶಕ್ತಿ ಸಾಮರ್ಥ್ಯ ಮತ್ತು ಸುಗಮಗೊಳಿಸುವಂತಹ ಅಂಶಗಳನ್ನು ಉಪಸ್ಥಿತಿ ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Export
ರಫ್ತು
author img

By

Published : Aug 26, 2020, 8:47 PM IST

ನವದೆಹಲಿ: ದೇಶದ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ರಫ್ತು ವಹಿವಾಟು ಒಂದು ಪ್ರಧಾನ ಭೂಮಿಕೆ ಆಗಿರುತ್ತದೆ. ಭಾರತದ 30 ರಾಜ್ಯಗಳ ಪೈಕಿ ಅಗ್ರ ಐದು ರಾಜ್ಯಗಳು ರಫ್ತಿ ವಹಿವಾಟಿನಲ್ಲಿ ಸಿಂಹಪಾಲು ಕಾಣ್ಕೆ ನೀಡುತ್ತಿವೆ. ಇದರಲ್ಲಿ ಕರ್ನಾಟಕವೂ ಸೇರಿದೆ ಎಂಬುದು ಕನ್ನಡಿಗರ ಹೆಮ್ಮೆ!

ನೀತಿ ಆಯೋಗದ ರಫ್ತು ಸನ್ನದ್ಧತೆ ಸೂಚ್ಯಂಕ 2020ರಲ್ಲಿ ಗುಜರಾತ್ ಅಗ್ರ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದೆ ಎಂದು ಸರ್ಕಾರದ ಚಿಂತಕರ ಚಾವಡಿ ಬಿಡುಗಡೆ ಮಾಡಿದ ವರದಿಯಲ್ಲಿದೆ.

ವರದಿಯ ಪ್ರಕಾರ, ಆರು ಕರಾವಳಿ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳ ಮೊದಲ ಹತ್ತು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿವೆ. ಇವು ರಫ್ತು ಉತ್ತೇಜಿಸಲು ಬಲವಾದ ಶಕ್ತಿ ಸಾಮರ್ಥ್ಯ ಮತ್ತು ಸುಗಮಗೊಳಿಸುವಂತಹ ಅಂಶಗಳ ಉಪಸ್ಥಿತಿ ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ರಾಜಸ್ಥಾನ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಸಹ ಅತ್ಯುತ್ತಮವಾದ ಪ್ರದರ್ಶನ ನೀಡಿವೆ.

ಹಿಮಾಲಯದ ತಪ್ಪಲು ರಾಜ್ಯಗಳ ಪೈಕಿ ಉತ್ತರಾಖಂಡ ಮೊದಲ ಸ್ಥಾನದಲ್ಲಿದ್ದು, ತ್ರಿಪುರ ಮತ್ತು ಹಿಮಾಚಲ ಪ್ರದೇಶವು ನಂತರದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಗೋವಾ ಮತ್ತು ಚಂಡೀಗಢ ನಂತರದ ಸ್ಥಾನದಲ್ಲಿವೆ. ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಫ್ತು ಉತ್ತೇಜಿಸಲು ಹಲವು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ವರದಿ ಹೇಳಿದೆ.

ವರದಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ರಫ್ತು ವಹಿವಾಟು ಆತ್ಮನಿರ್ಭರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಜಿಡಿಪಿ ಮತ್ತು ವಿಶ್ವ ವ್ಯಾಪಾರದಲ್ಲಿ ರಫ್ತು ಪಾಲನ್ನು ಹೆಚ್ಚಿಸಲು ದೇಶವು ಶ್ರಮಿಸಬೇಕಾಗಿದೆ ಎಂದು ಕರೆಕೊಟ್ಟರು.

ಮುಂದಿನ ವರ್ಷಗಳಲ್ಲಿ ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲನ್ನು ದ್ವಿಗುಣಗೊಳಿಸಲು ನಾವು ಪ್ರಯತ್ನಿಸುತ್ತೇವೆ. ದಕ್ಷಿಣ ಕೊರಿಯಾದ 11,900 ಡಾಲರ್ ಮತ್ತು ಚೀನಾದ 18,000 ಯುಎಸ್ ಡಾಲರ್​ಗೆ ಹೋಲಿಸಿದರೆ ಭಾರತದ ತಲಾ ರಫ್ತು 241 ಡಾಲರ್​ನಷ್ಟಿದೆ ಎಂದರು.

ಭಾರತದ ಸರಕು ರಫ್ತು 2016-17ರಲ್ಲಿ 275.9 ಬಿಲಿಯನ್ ಡಾಲರ್‌ನಿಂದ 2017-18ರಲ್ಲಿ 303.5 ಬಿಲಿಯನ್ ಡಾಲರ್‌ಗೆ ಮತ್ತು 2018-19ರಲ್ಲಿ 331 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಕೋವಿಡ್​-19 ಬಿಕ್ಕಟ್ಟು ಪ್ರಸಕ್ತ ಹಣಕಾಸು ವರ್ಷಕ್ಕೆ ದೊಡ್ಡ ಹೊಡೆತ ನೀಡಿತು. ಇದರ ಪರಿಣಾಮವಾಗಿ 2020ರ ಏಪ್ರಿಲ್‌ನಲ್ಲಿ ಭಾರತದ ರಫ್ತು ಶೇ 60ರಷ್ಟು ಕುಗ್ಗಿತು.

ಇನ್​ಸ್ಟಿಟ್ಯೂಟ್ ಆಫ್ ಸ್ಪರ್ಧಾತ್ಮಕತೆಯ ಸಹಭಾಗಿತ್ವದಲ್ಲಿ ನೀತಿ ಆಯೋಗ ಮೊದಲ ರಫ್ತು ಸಿದ್ಧತೆ ಸೂಚ್ಯಂಕ (ಇಪಿಐ) 2020 ಬಿಡುಗಡೆ ಮಾಡಿದೆ. ರಫ್ತು ವಹಿವಾಟು ಸವಾಲುಗಳು ಮತ್ತು ಅವಕಾಶಗಳನ್ನು ಗುರುತಿಸಿ ಅನುಕೂಲಕರ ನಿಯಂತ್ರಕ ಚೌಕಟ್ಟನ್ನು ಪ್ರೋತ್ಸಾಹಿಸಲು ಇಪಿಐ ಉದ್ದೇಶಿಸಿದೆ.

ಈ ಸೂಚ್ಯಂಕವು ನೀತಿ; ವ್ಯಾಪಾರ ಪರಿಸರ ವ್ಯವಸ್ಥೆ; ರಫ್ತು ಪರಿಸರ ವ್ಯವಸ್ಥೆ; ರಫ್ತು ಕಾರ್ಯಕ್ಷಮತೆ ಅಂಶಗಳನ್ನು ಆಧರಿಸಿ ಸೂಚ್ಯಂಕಗಳನ್ನು ನೀಡಿದೆ.

ಸೂಚ್ಯಂಕವು 11 ಉಪ ಅಂಶಗಳನ್ನು ಸಹ ಪರಿಗಣಿಸಿದೆ. ರಫ್ತು ಪ್ರಚಾರ ನೀತಿ; ಸಾಂಸ್ಥಿಕ ಚೌಕಟ್ಟು; ವ್ಯಾವಹಾರಿಕ ವಾತಾವರಣ; ಮೂಲಸೌಕರ್ಯ; ಸಾರಿಗೆ ಸಂಪರ್ಕ; ಹಣಕಾಸು ಪ್ರವೇಶ; ರಫ್ತು ಮೂಲಸೌಕರ್ಯ; ವ್ಯಾಪಾರ ಬೆಂಬಲ; ಆರ್ & ಡಿ ಮೂಲಸೌಕರ್ಯ; ರಫ್ತು ವೈವಿಧ್ಯೀಕರಣ ಮತ್ತು ಬೆಳವಣಿಗೆಯ ದೃಷ್ಟಿಕೋನದಂತಹ ಸೂಚ್ಯಂಕಗಳನ್ನು ಪರಿಗಣಿಸಿತ್ತು.

ನೀತಿ ನಿಯತಾಂಕಗಳಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿ ಗುಜರಾತ್​ ಮತ್ತು ಜಾರ್ಖಂಡ್ ನಂತರದ ಸ್ಥಾನದಲ್ಲಿವೆ. ವ್ಯಾಪಾರ ಪರಿಸರ ವ್ಯವಸ್ಥೆಯ ನಿಯತಾಂಕದಲ್ಲಿ ಗುಜರಾತ್​ ಪ್ರಥಮ ಸ್ಥಾನದಲ್ಲಿದ್ದರೇ ದೆಹಲಿ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ.

ರಫ್ತು ಪರಿಸರ ವ್ಯವಸ್ಥೆಯ ನಿಯತಾಂಕದಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಒಡಿಶಾ ಮತ್ತು ರಾಜಸ್ಥಾನಗಳು ನಂತರದಲ್ಲಿವೆ. ರಫ್ತು ಕಾರ್ಯಕ್ಷಮತೆಯ ನಿಯತಾಂಕದಲ್ಲಿ ಮಿಜೋರಾಂ ಪ್ರಥಮ, ನಂತರ ಗುಜರಾತ್ ಮತ್ತು ಮಹಾರಾಷ್ಟ್ರ ಇವೆ.

ಪ್ರಸ್ತುತ ಭಾರತದ ರಫ್ತಿನ ಶೇ 70ರಷ್ಟು ಪಾಲು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಪ್ರಾಬಲ್ಯವಿದೆ ಎಂದು ವರದಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.