ETV Bharat / business

GST ಪರಿಹಾರ.. 16 ರಾಜ್ಯಗಳಿಗೆ ಶೇ.4% ಬಡ್ಡಿಯಲ್ಲಿ ₹6,000 ಕೋಟಿ ಬಿಡುಗಡೆ.. ಇದ್ರಲ್ಲಿ ಕರ್ನಾಟಕ ಇದೆಯಾ? - ಜಿಎಸ್​ಟಿ ಕೊರತೆ ವರ್ಗಾವಣೆ

ಜಿಎಸ್​ಟಿ ಪರಿಹಾರ ಸೆಸ್ ಕೊರತೆ ಪೂರೈಸಲು ರಾಜ್ಯ ಸರ್ಕಾರಕ್ಕೆ ವಿಶೇಷ ವಿಂಡೋ ಅಡಿಯಲ್ಲಿ ಹಣಕಾಸು ಸಚಿವಾಲಯವು ಇಂದು 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಎರಡನೇ ಹಂತವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

GST shortfall pay
ಜಿಎಸ್​ಟಿ
author img

By

Published : Nov 2, 2020, 7:23 PM IST

ನವದೆಹಲಿ: ಮಹಾರಾಷ್ಟ್ರ, ಬಿಹಾರ, ಅಸ್ಸೊಂ, ಪುದುಚೇರಿ ಮತ್ತು ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​ಟಿ ಪರಿಹಾರ ಕೊರತೆಯ ಎರಡನೇ ಹಂತವಾಗಿ 6,000 ಕೋಟಿ ರೂ. ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.

ಕೇಂದ್ರವು ಅಕ್ಟೋಬರ್ 23ರಂದು 6,000 ಕೋಟಿ ರೂ. ಅನ್ನು 16 ರಾಜ್ಯಗಳು ಹಾಗೂ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳೀಗೆ ವರ್ಗಾಯಿಸಿತ್ತು. ವರ್ಗಾವಣೆಯ ಎರಡನೇ ಹಂತದಲ್ಲಿ, ಪುದುಚೇರಿ ಅನ್ನು ಸೇರಿಸಲಾಗಿದೆ.

ಜಿಎಸ್​ಟಿ ಪರಿಹಾರ ಸೆಸ್ ಕೊರತೆ ಪೂರೈಸಲು ರಾಜ್ಯ ಸರ್ಕಾರಕ್ಕೆ ವಿಶೇಷ ವಿಂಡೋ ಅಡಿಯಲ್ಲಿ ಹಣಕಾಸು ಸಚಿವಾಲಯವು ಇಂದು 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಎರಡನೇ ಹಂತವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಾಲವನ್ನು ಶೇ 4.42ರ ಬಡ್ಡಿ ದರದಲ್ಲಿ ಮಾಡಲಾಗಿದ್ದು, ಇದು ರಾಜ್ಯ ಮತ್ತು ಯುಟಿಗಳಿಗೆ ಸಾಲ ಪಡೆಯುವ ವೆಚ್ಚಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಅವರಿಗೆ ಹೆಚ್ಚುವರಿ ಲಾಭಸಿಗಲಿದೆ ಎಂದು ಹೇಳಿದೆ.

ರಾಜ್ಯಗಳು / ಯುಟಿಗಳಿಗೆ ವಿಶೇಷ ವಿಂಡೋ ಅಡಿಯಲ್ಲಿ ಹಣಕಾಸು ಸಚಿವಾಲಯವು ಇಲ್ಲಿಯವರೆಗೆ 12,000 ಕೋಟಿ ರೂ. ಸಾಲ ಒದಗಿಸಿದೆ ಎಂದು ಹೇಳಿದೆ. ಇಲ್ಲಿಯವರೆಗೆ 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ವಿಶೇಷ ವಿಂಡೋವನ್ನು ಆರಿಸಿಕೊಂಡಿವೆ. ಕೇಂದ್ರವು ಸಂಗ್ರಹಿಸಿದ ಸಾಲಗಳನ್ನು ಜಿಎಸ್​ಟಿ ಪರಿಹಾರ ಸೆಸ್ ಬಿಡುಗಡೆ ಮಾಡಿದೆ.

ಆಂಧ್ರಪ್ರದೇಶ, ಅಸ್ಸೊಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಸೇರಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.