ನವದೆಹಲಿ: 2018-19ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿಯ ಪರಿವರ್ತನೆ ಪರಿಣಾಮ ಮತ್ತು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಹೊರತಾಗಿಯೂ ಕಳಪೆ ಮಟ್ಟದಲ್ಲಿರುವ ಕೃಷಿ ವಲಯದ ಪರಿಸ್ಥಿತಿಯಿಂದಾಗಿ ಹಣಕಾಸಿನ ಕೊರತೆಯ ಶೇ 0.1ರಷ್ಟು ಅಲ್ಪ ವಿಚಲನೆಯಾಗಿ ಶೇ 3.4ರಲ್ಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಬಜೆಟ್‌ಗೆ ಸಂಬಂಧಿಸಿದ ಸ್ವೀಕೃತಿ ಮತ್ತು ಖರ್ಚಿನ ಮೇಲಿನ ಅರ್ಧವಾರ್ಷಿಕ ಪರಿಶೀಲನಾ ಪ್ರವೃತ್ತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಈ ಹೇಳಿಕೆ ಪ್ರಕಟಿಸಿದೆ.
ಹಣಕಾಸಿನ ಕೊರತೆಯನ್ನು (ಎಫ್‌ಡಿ) 2018-19ರ ಬಜೆಟ್ ನಿರೀಕ್ಷಣೆಯಲ್ಲಿ 6,24,276 ಕೋಟಿ ರೂ. (ಯೋಜಿತ ಜಿಡಿಪಿಯ ಶೇ 3.3ರಷ್ಟು) ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ಅಂದಾಜು (ಆರ್‌ಇ) ಹಂತದಲ್ಲಿ 6,34,398 ಕೋಟಿ ರೂ.ಗೆ (ಜಿಡಿಪಿಯ ಶೇ 3.4ರಷ್ಟು) ನಿಗದಿಪಡಿಸಲಾಗಿದೆ.
ಜಿಎಸ್‌ಟಿ ಪರಿವರ್ತನೆಯ ಪರಿಣಾಮ ಮತ್ತು ದೇಶದ ಕೃಷಿ ವಲಯದಲ್ಲಿ ಉಂಟಾದ ಪರಿಸ್ಥಿತಿಯಿಂದಾಗಿ ಶೇ 0.1ರಷ್ಟು ಅಂಕಗಳ ಅಲ್ಪ ವಿಚಲನ ಕಂಡುಬಂದಿದೆ. ಪರಿಷ್ಕೃತ ಗುರಿಯ ವಿರುದ್ಧ 2018ರ ನೈಜ ವಿತ್ತೀಯ ಕೊರತೆಯು 6,45,367 ಕೋಟಿ ರೂ. (ಪ್ರೊವಿನ್ಷಿಯಲ್) ಇದ್ದು, ಜಿಡಿಪಿಯ ಶೇ 3.4ರಷ್ಟಿದೆ ಎಂದು ಸ್ವೀಕೃತಿ ಮತ್ತು ಖರ್ಚಿನ ಟ್ರೆಂಡ್ಸ್ ಹೇಳಿಕೆ ತಿಳಿಸಿದೆ.
2017ರ ಜುಲೈ 1ರಿಂದ ಜಾರಿಗೆ ಬಂದ ಪರೋಕ್ಷ ತೆರಿಗೆ (ಜಿಎಸ್‌ಟಿ) ನಿಯಮದಲ್ಲಿನ ರಚನಾತ್ಮಕ ಬದಲಾವಣೆಗಳು 2018-19ನೇ ಹಣಕಾಸು ವರ್ಷದಲ್ಲಿ ಸ್ಥಿರೀಕರಣ (ಸ್ಟೆಬಿಲಿಷನ್) ಹಂತದಲ್ಲಿದೆ. 2018-19ರ ಎಫ್‌ವೈನಲ್ಲಿ ಜಿಎಸ್‌ಟಿ ಪರಿಚಯಿಸಿದ ನಂತರ ಇದು ಮೊದಲ ಪೂರ್ಣ ಹಣಕಾಸು ವರ್ಷವಾಗಿದೆ.
ಪ್ರಸ್ತುತ ಕೃಷಿ ಆರ್ಥಿಕತೆಯಲ್ಲಿನ ಬದಲಾವಣೆಗಳನ್ನು ನಿಭಾಯಿಸಲು ರೈತರಿಗೆ ಸರ್ಕಾರದ ಬೆಂಬಲ ಬೇಕಾಗಿದೆ. ಕೃಷಿ ವಲಯದ ತೊಂದರೆಗಳನ್ನು ತಗ್ಗಿಸಲು ಸರ್ಕಾರವು ನಿರ್ಣಾಯಕ ಪಾತ್ರ ವಹಿಸಬೇಕಾಗಲಿದೆ. 2018-19ರಲ್ಲಿ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ. 3.3ಕ್ಕೆ ನಿಗದಿಪಡಿಸಲಾಗಿತ್ತು. ಆರ್‌ಇ 2018-19ರಲ್ಲಿ ಇದನ್ನು ಶೇ. 3.4ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.