ಪಣಜಿ: ಚೀನಾದಿಂದ ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಉಪಕರಣಗಳನ್ನು ಖರೀದಿಸಲು ಭಾರತಕ್ಕೆ ಸಾಧ್ಯವಾಗದಿದ್ದರೆ ದೇಶದ ಸರಕು ಮತ್ತು ಸೇವಾ ತೆರಿಗೆಯ ಇ - ಪ್ಲಾಟ್‌ಫಾರ್ಮ್ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗೋವಾದ ಸಾರಿಗೆ ಸಚಿವ ಹಾಗೂ ಜಿಎಸ್‌ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಮಾವಿನ್ ಗೋಡಿನ್ಹೋ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು , ಕೋವಿಡ್ ವೈರಸ್ ತಂದಿಟ್ಟ ಬಿಕ್ಕಟ್ಟು ಮತ್ತು ಆಮದು ಕುಗ್ಗುವಿಕೆಯು ಸ್ಥಳೀಯ ಯಂತ್ರಾಂಶ (ಹಾರ್ಡ್‌ವೇರ್) ಮತ್ತು ಇತರ ಉಪಕರಣಗಳ ಉತ್ಪಾದನೆಗೆ ಉತ್ತೇಜನ ನೀಡಬಹುದು. ಒಂದು ವೇಳೆ ಇದು ಸಂಭವಿಸದೇ ಇದ್ದಿದ್ದರೆ ಭಾರತ ಆಮದು ಮಾಡಿಕೊಳ್ಳುತ್ತಿತ್ತು ಎಂದಿದ್ದಾರೆ.
ನಾನು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಇರುವುದರಿಂದ ನಾನು ರಾಷ್ಟ್ರಮಟ್ಟದ ಬಗ್ಗೆಯೂ ಚಿಂತೆ ಮಾಡುತ್ತೇನೆ. ಕೆಲವು ಇ-ಫಾರ್ಮ್ಗಳನ್ನು ಸಲ್ಲಿಸಲು ಅಗತ್ಯವಿರುವ ಯಂತ್ರಾಂಶ ಸಾಧನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದರು.