ETV Bharat / business

ಆರಕ್ಕೇರದ ಮೂರಕ್ಕೆ ಇಳಿಯದ ಜಿಎಸ್​ಟಿ: 'ಕೇಂದ್ರ ಸಾಲ ಎತ್ತಲ್ಲ, ರಾಜ್ಯಗಳೇ ಸಾಲ ಮಾಡಲಿ'- ಸೀತಾರಾಮನ್ - ಜಿಎಸ್​ಟಿ ಆದಾಯ ಕೊರತೆ

ಪರೋಕ್ಷ ತೆರಿಗೆಗಳ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯು ಒಂದು ವಾರದಲ್ಲಿ ಎರಡನೇ ಬಾರಿಗೆ ಸಭೆ ಸೇರಿತ್ತು. ಕೊರತೆ ನೀಗಿಸಲು ಭವಿಷ್ಯದ ಜಿಎಸ್​ಟಿ ಸಂಗ್ರಹಗಳ ವಿರುದ್ಧ ಸಾಲ ಪಡೆಯುವ ರಾಜ್ಯಗಳ ಕೇಂದ್ರದ ಪ್ರಸ್ತಾಪದ ಬಗ್ಗೆ ಒಮ್ಮತ ಸಾಧಿಸುವಲ್ಲಿ ವಿಫಲವಾಗಿದೆ.

Nirmala Sitharaman
ನಿರ್ಮಲಾ ಸೀತಾರಾಮನ್
author img

By

Published : Oct 13, 2020, 4:23 PM IST

ನವದೆಹಲಿ: ಜಿಎಸ್​ಟಿ ಸಂಗ್ರಹದ ಕೊರತೆಗೆ ಸಂಬಂಧ ಕೆಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾದ ನಡುವಿನ ಆದಾಯ ಹಂಚಿಕೆ ಕದನ ಯಾವುದೇ ಒಮ್ಮತ ಸಾಧಿಸದೇ ಜಿಎಸ್​ಟಿ ಮಂಡಳಿ ಸಭೆ ಕೊನೆಗೊಂಡಿದೆ.

ಪರೋಕ್ಷ ತೆರಿಗೆಗಳ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯು ಒಂದು ವಾರದಲ್ಲಿ ಎರಡನೇ ಬಾರಿಗೆ ಸಭೆ ಸೇರಿತ್ತು. ಕೊರತೆ ನೀಗಿಸಲು ಭವಿಷ್ಯದ ಜಿಎಸ್​ಟಿ ಸಂಗ್ರಹಗಳ ವಿರುದ್ಧ ಸಾಲ ಪಡೆಯುವ ರಾಜ್ಯಗಳ ಕೇಂದ್ರದ ಪ್ರಸ್ತಾಪದ ಬಗ್ಗೆ ಒಮ್ಮತ ಸಾಧಿಸುವಲ್ಲಿ ವಿಫಲವಾಗಿದೆ. ತೆರಿಗೆ ನಷ್ಟ ಪರಿಹಾರದ ಕೊರತೆಯ ಬಗ್ಗೆ ಚರ್ಚಿಸಿದೆ ಸತತ ಮೂರನೇ ಸಭೆ ಇದಾಗಿದೆ.

ಕೌನ್ಸಿಲ್ ಮುಖ್ಯಸ್ಥರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಜಿಎಸ್​ಟಿ ಜಾರಿ ಹಾಗೂ ಕೋವಿಡ್ ಬಿಕ್ಕಟ್ಟಿನ ಪರಿಣಾಮ ರಾಜ್ಯಗಳಿಗೆ ಉಂಟಾಗಿರುವ ಜಿಎಸ್​ಟಿ ನಷ್ಟ ನಷ್ಟಕ್ಕೆ ತಾನೇ ಸಾಲ ಪಡೆದ ಪರಿಹಾರ ವಿತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯಗಳು ಸಾಲ ಪಡೆಯಬೇಕು ಎಂದು ಹೇಳಿದರು.

ಕೇಂದ್ರವು ಸಾಲ ಪಡೆಯಲು ಮತ್ತು ಕೊರತೆಯನ್ನು ರಾಜ್ಯಗಳಿಗೆ ಪಾವತಿಸಲು ಸಾಧ್ಯವಿಲ್ಲ. ಇದು ಬಾಂಡ್ ಇಳುವರಿ ಹೆಚ್ಚಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಸರ್ಕಾರ ಮತ್ತು ಖಾಸಗಿ ವಲಯದ ವೆಚ್ಚ ಹೆಚ್ಚಳವಾಗುತ್ತದೆ. ಭವಿಷ್ಯದ ಜಿಎಸ್​ಟಿ ಸ್ವೀಕೃತಿ ವಿರುದ್ಧ ರಾಜ್ಯಗಳು ಸಾಲ ಪಡೆದರೆ ಈ ರೀತಿಯಾಗುವುದಿಲ್ಲ. ಕೇಂದ್ರವು ಸೂಚಿಸಿದಂತೆ 21 ರಾಜ್ಯಗಳು ಸಾಲ ಪಡೆಯಲು ಒಪ್ಪಿಕೊಂಡಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.