ನವದೆಹಲಿ: ಜೂನ್ ತಿಂಗಳ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಸಂಗ್ರಹ ಮೊತ್ತವು ಉದ್ದೇಶಿತ ಮಾಸಿಕ 1 ಲಕ್ಷ ಕೋಟಿ ರೂ. ಗಳಿಕೆಯಲ್ಲಿ ಅಲ್ಪ ಹಿನ್ನೆಡೆಯಾಗಿದೆ.
ಮೇ ತಿಂಗಳ ಜಿಎಸ್ಟಿ ಸಂಗ್ರಹವು ಒಂದು ಲಕ್ಷ ಕೋಟಿ ದಾಟಿ ₹ 1,00,289 ಹಣ ಖಜಾನೆಗೆ ಹರಿದು ಬಂದಿತ್ತು. ಇದೇ ನಿರೀಕ್ಷೆಯಲ್ಲಿದ್ದ ಆದಾಯ ತೆರಿಗೆ ಇಲಾಖೆಗೆ ತುಸು ಹಿನ್ನಡೆಯಾಗಿದ್ದು, ಜೂನ್ ಅಂತ್ಯದ ವೇಳೆಗೆ ₹ 99,939 ಕೋಟಿಯಷ್ಟು ತೆರಿಗೆ ಸಂಗ್ರಹಾವಗಿದೆ.
ಜೂನ್ನಲ್ಲಿ ಸಂಗ್ರಹವಾದ ಒಟ್ಟು ₹ 99,939 ಕೋಟಿ ಜಿಎಸ್ಟಿಯಲ್ಲಿ ಕೇಂದ್ರ ಜಿಎಸ್ಟಿ ಪಾಲು ₹ 18,366 ಕೋಟಿ ಇದೆ. ವಿವಿಧ ರಾಜ್ಯಗಳ ಎಸ್ಜಿಎಸ್ಟಿ ಪ್ರಮಾಣ ₹ 25,343 ಕೋಟಿಯಷ್ಟಿದೆ. ಅಂತಾರಾಜ್ಯ ಜಿಎಸ್ಟಿ ₹ 47,772 (₹ 21,980 ಕೋಟಿ ಆಮದು ಮೇಲಿನದ್ದು) ಮತ್ತು ಸೆಸ್ ₹ 8,457 ಕೋಟಿಯಷ್ಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.