ETV Bharat / business

ಸೀತಾರಾಮನ್ ಗತ್ತು, ತೆರಿಗೆದಾರರ ತಾಕತ್ತು: ಸತತ 5 ತಿಂಗಳಲ್ಲಿಯೂ 1 ಲಕ್ಷ ಕೋಟಿ ರೂ. ದಾಟಿದ GST ಕಲೆಕ್ಷನ್​​​​ - ಜಿಎಸ್​ಟಿ ಆದಾಯ

ಕಳೆದ ಐದು ತಿಂಗಳಲ್ಲಿ ಜಿಎಸ್​ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿಯಲ್ಲಿ ಸಾಗುತ್ತಿದೆ. 2021ರ ಫೆಬ್ರವರಿಯ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್​ಟಿ ಆದಾಯಕ್ಕಿಂತ ಶೇ ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

GST collection
GST collection
author img

By

Published : Mar 1, 2021, 6:28 PM IST

Updated : Mar 1, 2021, 6:46 PM IST

ನವದೆಹಲಿ: ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಫೆಬ್ರವರಿಯಲ್ಲಿ ಸತತ ಐದನೇ ಬಾರಿಗೆ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ ಹರಿದು ಬಂದಿದೆ.

ಫೆಬ್ರವರಿ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹವನ್ನು ವರ್ಷದಿಂದ ವರ್ಷಕ್ಕೆ ಹೋಲಿಸಿದರೇ ಶೇ 7 ರಷ್ಟು ಏರಿಕೆ ಕಂಡು 1.13 ಲಕ್ಷ ಕೋಟಿ ರೂ.ಗೆ ತಲುಪಿದೆ.

ಕಳೆದ ಐದು ತಿಂಗಳಲ್ಲಿ ಜಿಎಸ್​ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿಯಲ್ಲಿ ಸಾಗುತ್ತಿದೆ. 2021ರ ಫೆಬ್ರವರಿಯ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್​ಟಿ ಆದಾಯಕ್ಕಿಂತ ಶೇ 7ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜನವರಿ ತಿಂಗಳಲ್ಲಿ ದಾಖಲೆಯ 1.20 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹದ ಬಳಿಕ ಫೆಬ್ರವರಿಯಲ್ಲಿ 1.13 ಲಕ್ಷ ಕೋಟಿ ರೂ. ಆದಾಯ ಹರಿಬಂದಿದೆ. ಅಂತರರಾಜ್ಯ ವಹಿವಾಟಿನಿಂದ ಆದಾಯ ಇತ್ಯರ್ಥಪಡಿಸಿದ ಬಳಿಕ ಕೇಂದ್ರ ಸರ್ಕಾರವು 67,490 ಕೋಟಿ ರೂ. ಪಡೆದುಕೊಂಡಿದೆ. ರಾಜ್ಯಗಳು ಒಟ್ಟಾಗಿ ಆ ತಿಂಗಳಲ್ಲಿ 68,807 ಕೋಟಿ ರೂ. ಪಡೆದಿವೆ ಎಂದು ಹೇಳಿದೆ.

ಇದನ್ನೂ ಓದಿ: 1,939.32 ಅಂಕ ಕುಸಿದ ಬಳಿಕ 750 ಅಂಕ ಜಿಗಿದ ಸೆನ್ಸೆಕ್ಸ್​!

ಜಿಎಸ್‌ಟಿ ಆದಾಯವು ಸತತವಾಗಿ ಐದನೇ ಬಾರಿಗೆ 1 ಲಕ್ಷ ಕೋಟಿ ರೂ. ದಾಟಿದೆ. ಫೆಬ್ರವರಿ ತಿಂಗಳ ಆದಾಯ ಸಂಗ್ರಹಣೆಯ ಹೊರತಾಗಿಯೂ ಸಾಂಕ್ರಾಮಿಕ ರೋಗದ ಬಳಿಕ ಮೂರನೇ ಬಾರಿಗೆ 1.1 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ ದಾಟಿದೆ. ಇದು ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ. ತೆರಿಗೆ ಪಾವತಿ ಅನುಸರಣೆ ಸುಧಾರಿಸಲು ತೆರಿಗೆ ಆಡಳಿತವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮದಿಂದಾಗಿ ಇಷ್ಟೊಂದು ಪ್ರಮಾಣ ಸಂಗ್ರಹ ಹರಿದು ಬಂದಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

Last Updated : Mar 1, 2021, 6:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.