ನವದೆಹಲಿ: ಜೂನ್ ತಿಂಗಳಲ್ಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದ ಹಿನ್ನೆಡೆಯ ಬಳಿಕ ಜುಲೈ ತಿಂಗಳಲ್ಲಿ 1 ಲಕ್ಷ ಕೋಟಿ ರೂ.ನಷ್ಟು ತೆರಿಗೆಯು ಕೇಂದ್ರದ ಖಜಾನೆಗೆ ಹರಿದುಬಂದಿದೆ.
ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಜುಲೈ ತಿಂಗಳಲ್ಲಿ ₹ 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಈ ಹಿಂದಿನ ಐದು ತಿಂಗಳಲ್ಲಿ ಜೂನ್ ತಿಂಗಳು ಹೊರತುಪಡಿಸಿ ಉಳಿದ ನಾಲ್ಕು ತಿಂಗಳ ಸಂಗ್ರಹದ ಮೊತ್ತ 1 ಲಕ್ಷ ಕೋಟಿ ರೂ. ದಾಟಿದೆ ಎಂದು ತಿಳಿಸಿದೆ.
ಜುಲೈನಲ್ಲಿ ಸಿಜಿಎಸ್ಟಿ ಪಾಲು ₹ 17,912 ಕೋಟಿ, ಎಸ್ಜಿಎಟಿ ಷೇರು ₹ 25,008 ಕೋಟಿ, ಐಜಿಎಸ್ಟಿ ₹ 50,612 ಕೋಟಿ (₹ 24,246 ಕೋಟಿ ಆಮದು ತೆರಿಗೆ ಸೇರಿ) ಹಾಗೂ ₹ 8,551 ಕೋಟಿ ಸೆಸ್ ಒಳಗೊಂಡಿದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.