ETV Bharat / business

GST ಸಂಗ್ರಹದಲ್ಲಿ ಮತ್ತೆ ಕುಸಿತ... ಕೇಂದ್ರಕ್ಕೆ ಆರ್ಥಿಕ ಹೊಡೆತದ್ದೇ ಚಿಂತೆ! - Income Tax Department

ಅಕ್ಟೋಬರ್​​ನಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಶೇ 5.59ರಷ್ಟು ಇಳಿಕೆ ಕಂಡಿದ್ದು, ₹ 95,380 ಕೋಟಿ ಹರಿದು ಬಂದಿದೆ. ಕಳೆದ ವರ್ಷ ಇದೇ ವರ್ಷದಲ್ಲಿ ₹ 1,00,710 ಕೋಟಿಯಷ್ಟು ಸಂಗ್ರಹವಾಗಿತ್ತು. ಮಾಸಿಕ ₹ 1 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಬೇಕು ಎಂಬ ತೆರಿಗೆ ಇಲಾಖೆಯ ಗುರಿಗೆ ಹಿನ್ನಡೆ ಉಂಟಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊಡೆತದ ಬಗ್ಗೆ ಚಿಂತಿಸುವಂತೆ ಮಾಡಿದೆ.

ಜಿಎಸ್​ಟಿ
author img

By

Published : Nov 2, 2019, 8:43 AM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ಅಕ್ಟೋಬರ್​ ಮಾಸಿಕದಲ್ಲಿ ಕುಸಿತ ಉಂಟಾಗಿದ್ದು, ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊಡೆತದ ಚಿಂತೆ ಎದುರಾಗಿದೆ.

ಅಕ್ಟೋಬರ್​​ನಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಶೇ 5.59ರಷ್ಟು ಇಳಿಕೆ ಕಂಡಿದ್ದು, ₹ 95,380 ಕೋಟಿ ಹರಿದು ಬಂದಿದೆ. ಕಳೆದ ವರ್ಷ ಇದೇ ವರ್ಷದಲ್ಲಿ ₹ 1,00,710 ಕೋಟಿಯಷ್ಟು ಸಂಗ್ರಹವಾಗಿತ್ತು ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳು ತಿಳಿಸಿವೆ.

ಸಿಜಿಎಸ್​ಟಿ ₹ 17,582 ಕೋಟಿ, ಎಸ್​ಜಿಎಸ್ ಟಿ ₹ 23, 674 ಕೋಟಿ, ಐಜಿಎಸ್​ಟಿ ₹ 46,517 ಕೋಟಿ (₹ 21,446 ಕೋಟಿ ಆಮದು ತೆರಿಗೆ ಸೇರಿ) ಮತ್ತು ಸೆಸ್ ₹ 7,607 ಕೋಟಿಯಷ್ಟು (ಆಮದು ಮೇಲಿನ ಸಂಗ್ರಹ ₹ 774 ಕೋಟಿ ಸೇರಿ) ಸಂಗ್ರಹವಾಗಿದೆ. ಸೆಪ್ಟೆಂಬರ್​ನಿಂದ ಅಕ್ಟೋಬರ್​ 31ರ ವರೆಗೆ ₹ 73.83 ಲಕ್ಷ ಕೋಟಿ ಜಿಎಸ್​​ಟಿಆರ್​ 3ಬಿ ರಿಟರ್ನ್ಸ್​​ ದಾಖಲಾಗಿದೆ. ಅಕ್ಟೋಬರ್​​ ಮಾಸಿಕದಲ್ಲಿ ಸಾಲು-ಸಾಲು ಹಬ್ಬಗಳು ಇದ್ದರೂ ಜಿಎಸ್​ಟಿ ಸಂಗ್ರಹ ಕುಸಿದಿದೆ.

ಜಿಎಸ್​ಟಿ ಕುಸಿತವು ಸರ್ಕಾರಕ್ಕೆ ಕಠಿಣ ಪರಿಸ್ಥಿತಿ ತಂದೊಡ್ಡಲಿದೆ. ಆದಾಯ ಸಂಗ್ರಹಣೆ ಸುಧಾರಿಸಲು ಇನ್ನೂ ಹಲವು ಉತ್ತೇಜನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ತೆರಿಗೆದಾರರ ಪಾವತಿಯ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಖಚಿತವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಧ್ರುವ ಅಡ್ವೈಸರ್ಸ್​​ ಪಾಲುದಾರ ಅಮಿತ್ ಭಗತ್ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.