ETV Bharat / business

2024ಕ್ಕೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಸಾಧಿಸುತ್ತೇವೆ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ವಿಶ್ವಾಸ

ನಾವು ಗುರಿಯನ್ನು ಪರಿಷ್ಕರಿಸಿಲ್ಲ. ನಾವು ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದು ಸೇರಿದಂತೆ ಸರ್ಕಾರದ ವಿವಿಧ ಉಪಕ್ರಮಗಳು ಆ ಗುರಿಯನ್ನು ಸಾಧಿಸುವ ಮಿಷನ್​ ಹೊಂದಿದೆ ಎಂದು ಬಜಾಜ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

5 ಟ್ರಿಲಿಯನ್​ ಡಾಲರ್​
5 ಟ್ರಿಲಿಯನ್​ ಡಾಲರ್​
author img

By

Published : Feb 4, 2021, 7:56 PM IST

ನವದೆಹಲಿ: 2024-25ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಸಾಧಿಸುವ ಗುರಿಯನ್ನು ಸರ್ಕಾರ ಬಿಟ್ಟುಕೊಡುವುದಿಲ್ಲ. ಮೂಲಸೌಕರ್ಯ ಕ್ಷೇತ್ರಕ್ಕೆ ಒತ್ತು ನೀಡಿ 2021-22ರ ಬಜೆಟ್​ನಲ್ಲಿ ಕೈಗೊಂಡ ಇತರ ಉಪಕ್ರಮಗಳು ಗುರಿ ಸಾಧಿಸಲು ನೆರವಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದ ಬಜೆಟ್​ನಲ್ಲಿ ಮೂಲಸೌಕರ್ಯ ಖರ್ಚು, ಆಸ್ತಿ ಹಣಗಳಿಕೆ, ಆರೋಗ್ಯ ಕ್ಷೇತ್ರ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಮರ್ಥ್ಯ ಹೆಚ್ಚಾಗಲು ಒಂದು ದೊಡ್ಡ ಉತ್ತೇಜಕ ನೀಡಿದ್ದರು. ಈ ಉಪಕ್ರಮಗಳು ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆ ಪುನರುಜ್ಜೀವನಗೊಳಿಸುವ ಗುರಿ ಹೊಂದಿವೆ.

ನಾವು ಗುರಿಯನ್ನು ಪರಿಷ್ಕರಿಸಿಲ್ಲ. ನಾವು ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದು ಸೇರಿದಂತೆ ಸರ್ಕಾರದ ವಿವಿಧ ಉಪಕ್ರಮಗಳು ಆ ಗುರಿಯನ್ನು ಸಾಧಿಸುವ ಮಿಷನ್​ ಹೊಂದಿದೆ ಎಂದು ಬಜಾಜ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

2020-21ರ ಬಜೆಟ್ ಅಂದಾಜಿನಲ್ಲಿ ಮೂಲಸೌಕರ್ಯ ಖರ್ಚು 4.12 ಲಕ್ಷ ಕೋಟಿಯಿಂದ 5.54 ಲಕ್ಷ ಕೋಟಿ ರೂ.ಗೆ ಏರಿದರೆ, ಆರೋಗ್ಯ ಕ್ಷೇತ್ರದಲ್ಲಿ 94,000 ಕೋಟಿ ರೂ.ಗಳಿಂದ 2.23 ಲಕ್ಷ ಕೋಟಿ ರೂ.ಗೆ ತಲುಪಿದೆ.

2024-25ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಗುರಿ ಇರಿಸಿಕೊಂಡಿದ್ದಾಗಿ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಒಂದು ವೇಳೆ, ಇದು ಸಾಕಾರವಾದರೇ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ದೀಪಾವಳಿಗೆ LIC ಐಪಿಒ ಷೇರಿಗೆ ಚಾಲನೆ: ವಿಮಾ ಪಾಲಿಸಿದಾರರಿಗೆ ಸಿಗುವ ಷೇರುಗಳೆಷ್ಟು?

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಶೇ 7.7ರಷ್ಟು ಕುಗ್ಗುತ್ತದೆ ಎಂದು ಅಂದಾಜಿಸಲಾಗಿದೆ. 2021-22ರಲ್ಲಿ ಇದು ಶೇ 11ಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ದಾಖಲಿಸುವ ನಿರೀಕ್ಷೆಯಿದೆ.

ಕಳೆದ ತಿಂಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2021ರಲ್ಲಿ ಭಾರತ ಶೇ 11.5ರಷ್ಟು ಬೆಳವಣಿಗೆಯ ದರ ಕಾಣಲಿದೆ. ಈ ನಿರೀಕ್ಷಿತ ಬೆಳವಣಿಗೆಯ ದರವು ಕೊರೊನಾ ವೈರಸ್​ ಸಾಂಕ್ರಾಮಿಕದ ಮಧ್ಯೆ ಎರಡು ಅಂಕಿಯ ಬೆಳವಣಿಗೆ ದಾಖಲಿಸುವ ವಿಶ್ವದ ಏಕೈಕ ಪ್ರಮುಖ ಆರ್ಥಿಕತೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

2021ರಲ್ಲಿ ಚೀನಾ ಶೇ 8.1ರಷ್ಟು ಬೆಳವಣಿಗೆಯೊಂದಿಗೆ ಮುಂದಿನ ಸ್ಥಾನದಲ್ಲಿದೆ. ಸ್ಪೇನ್ ಶೇ 5.9ರಷ್ಟು ಮತ್ತು ಫ್ರಾನ್ಸ್ ಶೇ 5.5ರಷ್ಟು ಮೂಲಕ ನಂತರದ ಸ್ಥಾನದಲ್ಲಿದೆ.ಜಿಡಿಪಿ ಬೆಳವಣಿಗೆಯ ಕುರಿತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ (ಡಿಇಎ), 'ಮುಂದಿನ ಆರ್ಥಿಕ ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆ ಶೇ 10-10.5ರಷ್ಟು ಇರಬಹುದು' ಎಂದು ಹೇಳಿದರು.

"ನಮ್ಮ ಆದಾಯದ ಅಂಕಿ -ಅಂಶವು ಅತಿಯಾಗಿ ಹೇಳಲಾಗಿಲ್ಲ. ನಾವು ನಾಮಮಾತ್ರ ಜಿಡಿಪಿಯನ್ನು ಶೇ 14.4ರಷ್ಟು ಮತ್ತು ಆದಾಯದ ಬೆಳವಣಿಗೆಯನ್ನು ಶೇ 16.7ಕ್ಕೆ ತೆಗೆದುಕೊಂಡಿದ್ದೇವೆ. ಆದ್ದರಿಂದ ಚೇತರಿಕೆ ಕೇವಲ ಶೇ 1.16ರಷ್ಟು ಮಾತ್ರ. ನಾವು ಇದಕ್ಕಿಂತ ಹೆಚ್ಚಿನದನ್ನು ಪಡೆಯುತ್ತೇವೆ ಎಂಬುದನ್ನು ನಮ್ಮ ಭಾವನೆ. ನಾವು ಖಂಡಿತವಾಗಿಯೂ ಶೇ 6.8ರ ಒಳಗೆ ಇರಲಿ ಮತ್ತು ಕಡಿಮೆ ಇರಬಹುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.