ETV Bharat / business

ವಾಯುಯಾನ ಹೂಡಿಕೆಗಿರುವ ಅಡೆತಡೆ ನಿವಾರಣೆ: ಪ್ರಸ್ತಾಪಗಳ ತ್ವರಿತ ವಿಲೇಗೆ ಏಕಗವಾಕ್ಷಿ ವ್ಯವಸ್ಥೆ

author img

By

Published : Jul 18, 2020, 4:24 PM IST

ಇನ್​ವೆಸ್ಟ್ ಕ್ಲಿಯರೆನ್ಸ್​ ಸೆಲ್ ಸ್ಥಾಪನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ 2020-2021ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದರು.

aviation sector
ವಾಯುಯಾನ ವಲಯ

ಮುಂಬೈ: ದೇಶೀಯ ವಾಯುಯಾನ ಉದ್ಯಮದಲ್ಲಿ ವಿವಿಧ ಹೂಡಿಕೆ ಪ್ರಸ್ತಾಪಗಳನ್ನು ತ್ವರಿತಗೊಳಿಸಲು ನಾಗರಿಕ ವಿಮಾನಯಾನ ಸಚಿವಾಲಯವು ಏಕಗವಾಕ್ಷಿ ಸೇವೆಯ ಕಾರ್ಯವಿಧಾನವನ್ನು ಸ್ಥಾಪಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯ ತ್ವರಿತ ಸಹಾಯ ಮತ್ತು ತೆರವಿಗಾಗಿ ಇನ್​ವೆಸ್ಟ್ ಕ್ಲಿಯರೆನ್ಸ್​ ಸೆಲ್ (ಐಸಿಸಿ) ತೆರೆದಿದೆ ಎಂದು ಸಚಿವಾಲಯ ಶನಿವಾರ ಟ್ವಿಟರ್​​ನಲ್ಲಿ ತಿಳಿಸಿದೆ.

ಐಸಿಸಿ ಸ್ಥಾಪನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ 2020-2021ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದರು.

ಜುಲೈ 1ರಂದು ಕೈಗಾರಿಕೆ ಮತ್ತು ವ್ಯಾಪಾರ ಪ್ರಚಾರ ಇಲಾಖೆಯ (ಡಿಪಿಐಟಿ) ಆದೇಶದ ನಂತರ ಈ ಸೆಲ್​ ಸ್ಥಾಪಿಸಲಾಗಿದೆ. ಎಂಸಿಎ ಆದೇಶದಂತೆ, 10 ಸದಸ್ಯರ ಐಸಿಸಿ ವಾಯುಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಂಬರ್ ದುಬೆ ಈ ಸೆಲ್‌ನ ನೇತೃತ್ವ ವಹಿಸಲಿದ್ದಾರೆ.

ವಾಯುಯಾನ ದೇಶದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸಿಂಗಲ್​ ವಿಂಡೋ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು ಐಸಿಸಿ ಕಡ್ಡಾಯಗೊಳಿಸಲಾಗಿದೆ. ಹೂಡಿಕೆಗಳನ್ನು ಚುರುಕುಗೊಳಿಸುವುದು, ಪ್ರೋತ್ಸಾಹ, ನೀತಿ-ನಿಯಮಗಳ ಮಧ್ಯಸ್ಥಿಕೆ, ತ್ವರಿತ ಅನುಮತಿ ಅಂಗೀಕಾರ ಸೇರಿದಂತೆ ಇತರೆ ವಿಚಾರಗಳು ಒಳಗೊಂಡಿರಲಿದೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.