ETV Bharat / business

ಫಾರ್ಮಾ ಪಾರ್ಕ್​ ಸ್ಥಾಪನೆ ಮಾರ್ಗಸೂಚಿ ಲಾಂಚ್​: 2024ರ ವೇಳೆಗೆ 100 ಶತಕೋಟಿ ಡಾಲರ್​ ಮಾರುಕಟ್ಟೆ - Pharma Park

ಪ್ರಸ್ತುತ ದೇಶದ ಫಾರ್ಮಾ ಉದ್ಯಮವು 40 ಶತಕೋಟಿ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ಮೌಲ್ಯದ್ದಾಗಿದೆ. ಇದನ್ನು 2024ರ ವೇಳೆಗೆ 100 ಶತಕೋಟಿ ಡಾಲರ್‌ (ಸುಮಾರು 7.5 ಲಕ್ಷ ಕೋಟಿ ರೂಪಾಯಿ) ಉದ್ಯಮವಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

Drug
ಔಷಧಿ
author img

By

Published : Jul 27, 2020, 7:22 PM IST

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ʼಫಾರ್ಮಾ ಪಾರ್ಕ್ʼಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಈ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಔಷಧೋದ್ಯಮ ವಲಯದಲ್ಲಿ ಭಾರತವನ್ನು ಸ್ವಾವಲಂಬಿ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಹೀಗಾಗಿ, ಅವರ ದೂರದೃಷ್ಟಿಗೆ ಅನುಗುಣವಾಗಿ ಈ ಯೋಜನೆ ರೂಪಿಸಲಾಗಿದೆ ಎಂದರು.

ʼಬಲ್ಕ್ ಡ್ರಗ್ಸ್ʼ, ಎಕ್ಟಿವ್‌ ಫಾರ್ಮಾಸ್ಯುಟಿಕಲ್‌ ಇನ್‌ಗ್ರೇಡಿಯಂಟ್ಸ್‌ (ಎಪಿಐ), ʼಕೀ ಸ್ಟಾರ್ಟಿಂಗ್‌ ಮಟಿರಿಯಲ್ಸ್‌ʼ (ಕೆಎಸ್‌ಎಂಇ) ವೈದ್ಯಕೀಯ ಸಲಕರಣೆಗಳ ಉತ್ಪಾದನೆ ಸೇರಿದಂತೆ ಇತರೆ ಔಷಧೋದ್ಯಮಕ್ಕೆ ಸಂಬಂಧಿಸಿದ ವಿವಿಧ ವಲಯಗಳನ್ನು ಕೇಂದ್ರೀಕೃತವಾಗಿ ಈ ʼಫಾರ್ಮಾ ಪಾರ್ಕ್‌ʼಗಳು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಈ ಫಾರ್ಮಾ ಪಾರ್ಕ್‌ʼಗಳಲ್ಲಿ ರಾಜ್ಯ ಸರ್ಕಾರಗಳು ಕನಿಷ್ಠ ಶೇ 51ರಷ್ಟು ಪಾಲುಗಾರಿಕೆ ಹೊಂದಿರಬೇಕು. ಅಗತ್ಯ ಭೂಮಿ, ವಿದ್ಯತ್‌ ಹಾಗೂ ನೀರು ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ರಾಜ್ಯಗಳದ್ದು. ಪ್ಲಗ್‌ ಆ್ಯಂಡ್​ ಪ್ಲೇ ನಮೂನೆಯಲ್ಲಿ ಸಿದ್ಧವಾಗಲಿವೆ. ಇದರಲ್ಲಿ ಆಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಎಲ್ಲ ಸೌಕರ್ಯಗಳು ಇರಲಿವೆ. ಉದ್ಯಮಿಯೊಬ್ಬರು ಬಯಸಿದರೆ ಈ ಪಾರ್ಕ್‌ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಿ ಉತ್ಪಾದನೆ ಆರಂಭಿಸಬಹುದು. ಇದರಲ್ಲಿ ಸ್ಥಾಪಿತವಾಗುವ ಘಟಕಗಳಿಗೆ ನಮ್ಮ ಇಲಾಖೆಯು ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ನೀಡಲಿದೆ. ದೇಶದ ಔಷಧೋದ್ಯಮಗಳು ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಔಷಧ ಮತ್ತು ಔಷಧೋಪಕರಣಗನ್ನು ಉತ್ಪಾದನೆ ಮಾಡಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

  • It gives me immense pleasure to release the guidelines of four schemes for development of Bulk Drug & medical device parks across the country. pic.twitter.com/isM4gwNmEH

    — Sadananda Gowda (@DVSadanandGowda) July 27, 2020 " class="align-text-top noRightClick twitterSection" data=" ">

ಈಗಾಗಲೇ ಹಲವು ರಾಜ್ಯಗಳು ಈ ಯೋಜನೆ ಪಡೆದುಕೊಳ್ಳಲು ಉತ್ಸುಕವಾಗಿವೆ. ಇಂದು ಬಿಡುಗಡೆಯಾಗುತ್ತಿರುವ ಮಾರ್ಗಸೂಚಿಯಲ್ಲಿ ಯೋಜನೆಯ ಮಾನದಂಡಗಳ ವಿವರಗಳಿವೆ. ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಫಾರ್ಮಾ ಪಾರ್ಕ್‌ ಯೋಜನಾ ಸ್ಥಳಗಳ ಆಯ್ಕೆಯು ಅಂತಿಮ ಮಾಡಲಾಗುವುದು. ಇದರಲ್ಲಿ ಯಾವುದೇ ಪ್ರಭಾವಕ್ಕೆ ಅವಕಾಶವಿಲ್ಲ. ಯಾವುದೇ ರಾಜ್ಯದ ಪರ ಅಥವಾ ವಿರುದ್ಧ ಪಕ್ಷಪಾತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಬಿಕ್ಕಟ್ಟು ಜಾಗತಿಕ ಔಷಧ ಪೂರೈಕೆ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಅಸ್ತವ್ಯಸ್ತಗೊಳಿಸಹುದು ಮತ್ತು ಯಾವರೀತಿ ದೇಶದ ಆರೋಗ್ಯ ವ್ಯವಯಸ್ಥೆಯನ್ನು ಬುಡಮೇಲುಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ನಮ್ಮ ಔಷಧ ಇಲಾಖೆಯು ತ್ವರಿತವಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ ಲಾಕ್​ಡೌನ್​ ಅವಧಿಯಲ್ಲಿ ಕೂಡಾ ಔಷಧಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಯಿತು ಎಂದರು.

ವಿವಿಧ ರೀತಿಯ ಔಷಧ, ಮಾತ್ರೆಗಳ ತಯಾರಿಗೆ ಅಗತ್ಯವಾದ ಸುಮಾರು 53 ಬಗೆಯ ಮೂಲ ಕಚ್ಚಾ ರಾಸಾಯನಿಕಗಳು (ಎಪಿಐ) ಹಾಗೂ ಪ್ರಮುಖ ಉತ್ಪನ್ನಗಳಿಗೆ ವಿದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಇವುಗಳ ಪೈಕಿ ಕೆಲವು ಮೂಲ ರಾಸಾಯನಿಕಗಳು ಜೀವರಕ್ಷಕ ಔಷಧಗಳ ಉತ್ಪಾದನೆಯಲ್ಲಿ ಬಳುಸುವುದರಿಂದ ತುಂಬಾನೆ ಮಹತ್ವದ್ದಾಗಿವೆ. ಬಹುತೇಕ ವೈದ್ಯಕೀಯ ಉಪಕರಣಗಳಲ್ಲಿಯೂ ನಾವು ಪರಾವಲಂಬಿಗಳಾಗಿದ್ದೇವೆ. ಈ ಕ್ಷೇತ್ರಗಳಲ್ಲಿ ಭಾರತವು ವಿದೇಶಿ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿಯಾಗಬೇಕು ಎಂಬುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.

2019-20ನೇ ಸಾಲಿನಲ್ಲಿ 40,000 ಕೋಟಿ ರೂ. ಮೌಲ್ಯದ ಫಾರ್ಮಾ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ಪೈಕಿ ಎಪಿಐಗಳ ಪಾಲು ಶೇ 63ರಷ್ಟಿದೆ. 2019-20ರಲ್ಲಿ 49,500 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದು ದೇಶಿಯ ಅಗತ್ಯಗಳ ಶೇ 86ರಷ್ಟಿದೆ. ಪ್ರಸ್ತುತ ದೇಶದ ಫಾರ್ಮಾ ಉದ್ಯಮವು 40 ಶತಕೋಟಿ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ಮೌಲ್ಯದ್ದಾಗಿದೆ. ಇದನ್ನು 2024ರ ವೇಳೆಗೆ 100 ಶತಕೋಟಿ ಡಾಲರ್‌ (ಸುಮಾರು 7.5 ಲಕ್ಷ ಕೋಟಿ ರೂಪಾಯಿ) ಉದ್ಯಮಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವ ಸದಾನಂದ ಗೌಡ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.