ನವದೆಹಲಿ: ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದಿಂದ (ಕೆಪಿಕೆಬಿ) ನಡೆಯುವ ಅರೆಸೈನಿಕ ಪಡೆಗಳ ಕ್ಯಾಂಟೀನ್‌ಗಳಲ್ಲಿ 1,026 ಉತ್ಪನ್ನಗಳನ್ನು ಕೈಬಿಡಲಾಗಿದ್ದ ಉತ್ಪನ್ನಗಳ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಆದೇಶಿಸಲಾಗಿದೆ.
ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ (ಸಿಪಿಸಿ) ಉಸ್ತುವಾರಿ ಡಿಐಜಿ ರೀಮಾ ಹೊರಡಿಸಿದ ಆದೇಶದಲ್ಲಿ, "ವಿವಿಧ ವರ್ಗಗಳ ಅಡಿ ಉತ್ಪನ್ನಗಳ ಪಟ್ಟಿಗಳನ್ನು ಮರುಪರಿಶೀಲಿಸಲು ಈ ಪತ್ರವನ್ನು ತಕ್ಷಣದಿಂದ ಜಾರಿಗೆ ತರಲಾಗುತ್ತದೆ" ಎಂದಿದೆ. ಜೂನ್ 2ರಂದು ಹೊರಡಿಸಲಾದ ಅಧಿಕೃತ ಆದೇಶ ಪ್ರತಿಯು ಈಟಿವಿ ಭಾರತ ಗಮನಕ್ಕೆ ಬಂದಿದೆ.
ಮೇ 29ರಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್‌ಗಳಲ್ಲಿ ಮಾರಾಟವಾಗುತ್ತಿರುವ ಸ್ವದೇಶಿ ಅಲ್ಲದ (ಆಮದು) ಉತ್ಪನ್ನಗಳನ್ನು ತೆಗೆದುಹಾಕಲು ಕೇಂದ್ರವು ಆದೇಶ ಹೊರಡಿಸಿತ್ತು. ಆ ಪಟ್ಟಿಯಲ್ಲಿ ಅನೇಕ ಭಾರತೀಯ ಕಂಪನಿಗಳ ಉತ್ಪನ್ನಗಳು ಸೇರಿದ್ದರಿಂದ ಸೋಮವಾರ ಸರ್ಕಾರ ಹಿಂತೆಗೆದುಕೊಂಡಿತು.
ಕೆಲವು ಉತ್ಪನ್ನಗಳನ್ನು ತೆಗೆದುಹಾಕುವ ಬಗ್ಗೆ ಕೇಂದ್ರಿಯ ಪೊಲೀಸ್ ಕಲ್ಯಾಣ್ ಭಂಡಾರ್ ಅವರು 2020ರ ಮೇ 29ರಂದು ಹೊರಡಿಸಿದ ಪಟ್ಟಿಯನ್ನು ಸಿಇಒ ಮಟ್ಟದಲ್ಲಿ ತಪ್ಪಾಗಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಪಟ್ಟಿ ಹಿಂಪಡೆದು ಉಂಟಾದ ನಷ್ಟಕ್ಕೆ ಕ್ರಮತೆಗೆದುಳ್ಳಲಾಗುತ್ತಿದೆ ಎಂದು ಸಿಆರ್‌ಪಿಎಫ್ ಡಿಜಿ ಎಪಿ ಮಹೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಯು, ತಪ್ಪಾಗಿ ವಸ್ತುಗಳನ್ನು ಸೇರಿಸಿದ್ದಕ್ಕೆ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಸಾಧ್ಯತೆಯಿದೆ. ಆ ಅಧಿಕಾರಿಯನ್ನು ಮತ್ತೆ ಸಿಆರ್‌ಪಿಎಫ್‌ಗೆ ಕಳುಹಿಸಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳು ಈಟಿವಿ ಭಾರತಗೆ ತಿಳಿಸಿವೆ.