ETV Bharat / business

ಶ್ಯೂರಿಟಿ ಇಲ್ಲದೆ 3 ಲಕ್ಷ ಕೋಟಿ ರೂ. ಸಾಲ ಯೋಜನೆಯ ಬದಲಾವಣೆಗೆ ಸರ್ಕಾರ ಸಿದ್ಧ: ನಿರ್ಮಲಾ ಸೀತಾರಾಮನ್​ - ಆರ್ಥಿಕ ಪ್ಯಾಕೇಜ್

ರಚನಾತ್ಮಕ ಸುಧಾರಣೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಬ್ಯಾಂಕ್​ಗಳು ಸೇರಿದಂತೆ ಕ್ಯಾಬಿನೆಟ್-ತೆರವುಗೊಳಿಸಿದ ಹೂಡಿಕೆ ಪ್ರಸ್ತಾಪಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಲಿದೆ. 3 ಲಕ್ಷ ಕೋಟಿ ರೂ. ಯೋಜನೆಯ ವೃತ್ತಿಪರತೆಗೆ ಈಗಲೂ ಮುಕ್ತವಾಗಿದ್ದೇವೆ. ಹೆಚ್ಚಿನ ಬದಲಾವಣೆಗಳು ಅಗತ್ಯವಿದ್ದರೆ ಸರ್ಕಾರದ ಅದಕ್ಕೆ ಮುಕ್ತವಾಗಿದೆ ಎಂದು ಸಿಐಐಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದಾರೆ.

FM
ವಿತ್ತ ಸಚಿವೆ
author img

By

Published : Aug 25, 2020, 6:21 PM IST

ನವದೆಹಲಿ: ಸಣ್ಣ ಉದ್ಯಮಗಳಿಗೆ ಮೇಲಾಧಾರ ರಹಿತ ಸಾಲ ಒದಗಿಸಲು 3 ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆಯನ್ನು ಅಗತ್ಯ ಬಿದ್ದರೆ ಮತ್ತಷ್ಟು ಬದಲಾವಣೆ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೈಗಾರಿಕಾ ಒಕ್ಕೂಟ ಸಿಐಐ ಅನ್ವಯ, ಸಚಿವರು ಇತ್ತೀಚೆಗೆ ಗೌಪ್ಯ ಸಭೆ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದೆ. 'ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಆತಿಥ್ಯ ಮತ್ತು ವಿಮಾನಯಾನ ಸಂಸ್ಥೆಗಳಂತಹ ಕ್ಷೇತ್ರಗಳ ಮೇಲೆ ಕೋವಿಡ್​-19 ಸೋಂಕಿನಿಂದ ಅಸಮರ್ಪಕವಾದ ಪರಿಣಾಮ ಬೀರಿರುವುದರಿಂದ ದೇಶಿಯ ಆದಾಯದ ಉತ್ಪಾದನೆ ಕಳವಳಕಾರಿಯಾಗಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಚನಾತ್ಮಕ ಸುಧಾರಣೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಬ್ಯಾಂಕ್​ಗಳು ಸೇರಿದಂತೆ ಕ್ಯಾಬಿನೆಟ್-ತೆರವುಗೊಳಿಸಿದ ಹೂಡಿಕೆ ಪ್ರಸ್ತಾಪಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಲಿದೆ. 3 ಲಕ್ಷ ಕೋಟಿ ರೂ. ಯೋಜನೆಯ ವೃತ್ತಿಪರತೆಗೆ ಈಗಲೂ ಮುಕ್ತವಾಗಿದ್ದೇವೆ. ಹೆಚ್ಚಿನ ಬದಲಾವಣೆಗಳು ಅಗತ್ಯವಿದ್ದರೆ ಸರ್ಕಾರ ಅದಕ್ಕೆ ಮುಕ್ತವಾಗಿದೆ ಸಿಐಐಗೆ ಸೀತಾರಾಮನ್ ಭರವಸೆ ನೀಡಿದ್ದಾರೆ.

ತಿಂಗಳ ಆರಂಭದಲ್ಲಿ ಸರ್ಕಾರವು 3 ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆಯ ವ್ಯಾಪ್ತಿಯನ್ನು 50 ಕೋಟಿ ರೂ. ಬಾಕಿ ಸಾಲಗಳ ಮೇಲೆಯೂ ದ್ವಿಗುಣಗೊಳಿಸಿತು. ಈ ಮೂಲಕ ಎಂಎಸ್​ಎಂಇ ಹೊರತುಪಡಿಸಿ ವ್ಯಾಪಾರ ಉದ್ದೇಶಗಳಿಗೆ ವೈದ್ಯರು, ವಕೀಲರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಂತಹ ವೃತ್ತಿಪರರಿಗೆ ವೈಯಕ್ತಿಕ ಸಾಲದ ವ್ಯಾಪ್ತಿ ವಿಸ್ತರಿಸಿತ್ತು.

ಆಗಸ್ಟ್ 20ರವರೆಗೆ ಬ್ಯಾಂಕ್​ಗಳು 3 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​​ಜಿಎಸ್) ಅಡಿಯಲ್ಲಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಸಾಲ ವಿತರಿಸಿವೆ. ಇದನ್ನು ಆತ್ಮನಿರ್ಭಾರ ಭಾರತ ಪ್ಯಾಕೇಜ್​ನ ಭಾಗವಾಗಿ ಘೋಷಿಸಲಾಗಿದೆ.

ಸರ್ಕಾರವು ಕಾಳಜಿಗಳನ್ನು ಅರ್ಥಮಾಡಿಕೊಂಡು ಉದ್ಯಮದ ಬೇಡಿಕೆಗಳಿಗೆ ಸ್ಪಂದಿಸಲಿದೆ. ರಚನಾತ್ಮಕ ಸುಧಾರಣೆಗಳು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕೋವಿಡ್​-19 ಸವಾಲು ಎದುರಿಸಲು ಸರ್ಕಾರದ ಪ್ರಕಟಿಸಿದ್ದ ಪ್ರಕಟಣೆಗಳು ಪ್ರತಿಫಲಿಸುತ್ತಿವೆ ಎಂದು ಸೀತಾರಾಮನ್ ಹೇಳಿದರು.

ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ಆತಿಥ್ಯ, ವಿಮಾನಯಾನ ಸಂಸ್ಥೆಗಳಂತಹ ಕೆಲವು ಕ್ಷೇತ್ರಗಳ ಮೇಲೆ ಅಸಮರ್ಪಕ ಪರಿಣಾಮ ಬೀರಿವೆ. ದೇಶಿಯ ಆದಾಯದ ಉತ್ಪಾದನೆಯು ಕಳವಳಕಾರಿಯಾಗಿದೆ. ಬ್ಯಾಂಕ್​ಗಳಿಗೆ ಸಮರ್ಪಕ ಬೆಂಬಲ ಖಾತ್ರಿಪಡಿಸಿಕೊಳ್ಳಲು ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.