ನವದೆಹಲಿ: ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ಹೂಡಿಕೆ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿ, 'ಅಗ್ಗದ ಬೆಲೆಯಲ್ಲಿ ಆಸ್ತಿಗಳ ಮಾರಾಟ ಮಾಡಿ ಸರ್ಕಾರಕ್ಕೆ ಹತ್ತಿರವಿರುವ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗೆ (ಆಪ್ತಕೂಟ ಬಂಡವಾಳಶಾಹಿ) ಸಹಾಯ ಮಾಡುತ್ತಿದೆ' ಎಂದು ಆರೋಪಿಸಿದರು.
ಸೋನಿಯಾ ಗಾಂಧಿ ಬರೆದ ಲೇಖನವನ್ನು ಕಾಂಗ್ರೆಸ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. ''ಮೋದಿ ಸರ್ಕಾರವು ಭಾರತದ ಸಂಪತ್ತಿನ ದೊಡ್ಡ ಭಾಗವನ್ನು ತನ್ನ ನೆಚ್ಚಿನ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗೆ ಹಸ್ತಾಂತರಿಸುವ ಉದ್ದೇಶದಿಂದ ಸಾಂಕ್ರಾಮಿಕ ರೋಗದಿಂದ ಕುಸಿದ ಆರ್ಥಿಕತೆಯನ್ನು ಬಳಸಿಕೊಳ್ಳುತ್ತಿದೆ. ಆತುರದಿಂದ ಸಾರ್ವಜನಿಕ ವಲಯದ ಘಟಕಗಳನ್ನು ಮಾರಾಟ ಮಾಡುತ್ತಿದೆ. ಮೋದಿ ಸರ್ಕಾರವು 'ಹೂಡಿಕೆ'ಯ ಬದಲು 'ಖಾಸಗೀಕರಣ'ವನ್ನು ಸ್ಪಷ್ಟವಾಗಿ ಸ್ವೀಕರಿಸಿದೆ'' ಎಂದು ಬರೆದಿದ್ದಾರೆ.
"ಅದರ (ಕೇಂದ್ರ) ಭಾಷೆಯ ಆಯ್ಕೆಯು ಅದರ ಆಶಯವನ್ನು ಸಂಕೇತಿಸುತ್ತದೆ. ರಾಷ್ಟ್ರದ ಹಣಕಾಸು ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೂಡಿಕೆಯನ್ನು ಹೆಚ್ಚಿಸಲು ಖಾಸಗಿ ವಲಯದ ಮೇಲಿನ ನಂಬಿಕೆಯನ್ನು ಉತ್ತೇಜಿಸಲು ಆಗುತ್ತಿಲ್ಲ. ಸರ್ಕಾರವು ನಮ್ಮ ರಾಷ್ಟ್ರೀಯ ಸ್ವತ್ತುಗಳ ತೊಂದರೆಯನ್ನು ಮಾರಾಟಕ್ಕೆ ತಿರುಗಿಸಿದೆ. ಸಾರ್ವಜನಿಕ ಸಂಪತ್ತಿನ ದೀರ್ಘಕಾಲೀನ ನಷ್ಟಕ್ಕಾಗಿ ಅಲ್ಪಾವಧಿಯ ಲಾಭ ಮಾಡಿಕೊಳ್ಳಲು ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದೆಯಾ? ಎಂದು ಲೇಖನದಲ್ಲಿ ಪ್ರಶ್ನಿಸಿದ್ದಾರೆ.
ಈ ಅಗ್ಗದ ಮಾರಾಟವನ್ನು ದಕ್ಷತೆ ಮತ್ತು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಜಮಾವಣೆಯನ್ನು ಉಲ್ಲೇಖಿಸಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಇದು ಮೋಸಗೊಳಿಸುವ ವಾದ. ವಾಸ್ತವದಲ್ಲಿ ನಮಗೆ ಅರ್ಥವಾಗುತ್ತಿರುವುದು ಏನೆಂದರೆ, ಪಿಎಸ್‌ಯು ಲಾಭಗಳ ಖಾಸಗೀಕರಣ ಮತ್ತು ಖಾಸಗಿ ವಲಯದ ನಷ್ಟಗಳ ರಾಷ್ಟ್ರೀಕರಣ ಎಂದರು.
ಇದನ್ನೂ ಓದಿ: ಗುಜರಾತ್ನ ಕೆವಾಡಿಯಾದಲ್ಲಿ ಮಿಲಿಟರಿ ನಾಯಕತ್ವ ಸಮಾವೇಶ: ನಾಡಿದ್ದು ಪ್ರಧಾನಿ ಭಾಷಣ
ಖಾಸಗೀಕರಣದ ಪೋಷಾಕಿನಲ್ಲಿ ಮೌಲ್ಯಯುತವಾದ ಆಸ್ತಿ ಮತ್ತು ಲಾಭ ಗಳಿಸುವ ಕಂಪನಿಗಳನ್ನು ಕಡಿಮೆ ಅಂದಾಜು ಮಾಡಿ ಆಪ್ತರಿಗೆ ಮಾರಾಟ ಮಾಡಲಾಗುತ್ತದೆ. ಮತ್ತೊಂದೆಡೆ, ಭಾರಿ ಸಾಲದ ಹೊರೆ ಹೊತ್ತ ಡಿಫಾಲ್ಟರ್‌ಗಳಿಗೆ (ದಿವಾಳಿತನ) ಸಾರ್ವಜನಿಕ ಹಣ ಬಳಸಿಕೊಂಡು ಜಾಮೀನು ನೀಡಲಾಗುತ್ತದೆ ಎಂದು ಸೋನಿಯಾ ಆರೋಪಿಸಿದ್ದಾರೆ.
ಭಾರತೀಯ ಆರ್ಥಿಕತೆಯಲ್ಲಿ ಈಗ ನಡೆಯುತ್ತಿರುವ ಬಿಕ್ಕಟ್ಟಿನ ಮೂಲ ಇರುವುದು 2016ರ ನವೆಂಬರ್ 8ರಂದು ರಾತ್ರೋರಾತ್ರಿ ಘೋಷಿಸಿದ ನೋಟು ರದ್ದತಿ. ಡಾ. ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಹೇಳಿದ್ದ ಮಾತುಗಳು, 'ನೋಟ್ಬ್ಯಾನ್' ಜಿಡಿಪಿಯ ಶೇ 2ರಷ್ಟು ಕುಸಿತಕ್ಕೆ ಕಾರಣವಾಗಬಹುದು' ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಕಡಿಮೆಯಾದ ಅಂತಾರಾಷ್ಟ್ರೀಯ ತೈಲ ಬೆಲೆಗಳ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ಮೂಲಕ ಬಳಕೆಯ ಪುನರುಜ್ಜೀವನ ಉತ್ತೇಜಿಸಲು ಸರ್ಕಾರಕ್ಕೆ ಒಂದು ಅವಕಾಶ ಒದಗಿಬಂದಿದೆ. ಈ ಅವಕಾಶವನ್ನು ಬಳಸಿಕೊಳ್ಳುವ ಬದಲು, ಮೋದಿ ಸರ್ಕಾರವು ಕುಗ್ಗುತ್ತಿರುವ ಕುಟುಂಬಗಳ ಬಜೆಟ್ ಮೇಲೆ ಅತಿಯಾದ ಪೆಟ್ರೋಲಿಯಂ ತೆರಿಗೆ ಮತ್ತು ಸೆಸ್ ಮೂಲಕ ಅವರನ್ನು ಹಿಸುಕುತ್ತಲೇ ಇದೆ. ಇದಕ್ಕೆ ವ್ಯತಿರಿಕ್ತವಾಗಿ 2019ರಲ್ಲಿ ಕಾರ್ಪೊರೇಟ್‌ಗಳಿಗೆ ಭಾರಿ ತೆರಿಗೆ ಕಡಿತ ನೀಡಿತ್ತು. ಅದು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಿನ ಹೂಡಿಕೆ ಉತ್ಪಾದಿಸಲಿಲ್ಲ. ಭಾರತದ ಬಜೆಟ್‌ನಲ್ಲಿ 1.45 ಲಕ್ಷ ಕೋಟಿ ರೂ. ರಂಧ್ರಕೊರೆಯುವಲ್ಲಿ ಮಾತ್ರ ಯಶಸ್ವಿಯಾಯಿತು ಎಂದು ಸೋನಿಯಾ ಅಣಕಿಸಿದರು.