ETV Bharat / business

ನೇರ ಮತ್ತು ಪರೋಕ್ಷ ತೆರಿಗೆ ಮಂಡಳಿ ವಿಲೀನವಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಸಿಬಿಡಿಟಿ ಮತ್ತು ಸಿಬಿಐಸಿ ವಿಲೀನಗೊಳಿಸಬೇಕು ಎಂಬುದು 2016ರಲ್ಲಿ ಪಾರ್ಥಸಾರಥಿ ಶೋಮ್ ನೇತೃತ್ವದ ತೆರಿಗೆ ಆಡಳಿತ ಸುಧಾರಣಾ ಆಯೋಗ (ಟಿಎಆರ್​ಸಿ) ಸಲ್ಲಿಸಿದ್ದ ಶಿಫಾರಸುಗಳಲ್ಲಿ ಒಂದಾಗಿದೆ. ಟಿಎಆರ್​ಸಿ 385 ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ 291 ಶಿಫಾರಸುಗಳು ಸಿಬಿಡಿಟಿಗೆ ಮತ್ತು 253 ಸಿಬಿಐಸಿಗೆ ಸಂಬಂಧಿಸಿವೆ.

FinMin
ವಿತ್ತ ಸಚಿವಾಲಯ
author img

By

Published : Jul 6, 2020, 9:50 PM IST

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ವಿಲೀನಗೊಳಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.

ಸಿಬಿಡಿಟಿ ಮತ್ತು ಸಿಬಿಐಸಿ ವಿಲೀನಗೊಳಿಸಬೇಕು ಎಂಬುದು 2016ರಲ್ಲಿ ಪಾರ್ಥಸಾರಥಿ ಶೋಮ್ ನೇತೃತ್ವದ ತೆರಿಗೆ ಆಡಳಿತ ಸುಧಾರಣಾ ಆಯೋಗ (ಟಿಎಆರ್​ಸಿ) ಸಲ್ಲಿಸಿದ್ದ ಶಿಫಾರಸುಗಳಲ್ಲಿ ಒಂದಾಗಿದೆ. ಟಿಎಆರ್​ಸಿ 385 ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ 291 ಶಿಫಾರಸುಗಳು ಸಿಬಿಡಿಟಿಗೆ ಮತ್ತು 253 ಸಿಬಿಐಸಿಗೆ ಸಂಬಂಧಿಸಿವೆ.

ಸಿಬಿಡಿಟಿ ಮತ್ತು ಸಿಬಿಐಸಿ ನೇರ ಮತ್ತು ಪರೋಕ್ಷ ತೆರಿಗೆಗಳ ನೀತಿ ರಚನೆ ಸಂಸ್ಥೆಗಳ ವಿಲೀನದಲ್ಲಿವೆ ಎಂಬ ಮಾಧ್ಯಮ ವರದಿಯೊಂದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವಾಲಯ, ಕೇಂದ್ರ ಮಂಡಳಿಗಳ ಅಡಿಯಲ್ಲಿ ರಚಿಸಲಾದ ಎರಡು ಮಂಡಳಿಗಳನ್ನು ವಿಲೀನಗೊಳಿಸುವ ಪ್ರಸ್ತಾಪವಿಲ್ಲ ಎಂದು ಹೇಳಿದೆ.

ಟಿಎಆರ್​ಸಿ ವರದಿಯನ್ನು ಸರ್ಕಾರ ವಿವರವಾಗಿ ಪರಿಶೀಲಿಸಿದೆ. ಟಿಎಆರ್​ಟಿಯ ಈ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ.

ಜಾಗತಿಕ ಉತ್ತಮ ಅಭ್ಯಾಸಗಳನ್ನು ಹೊಂದುವ ಹಿನ್ನೆಲೆಯಲ್ಲಿ ತೆರಿಗೆ ನೀತಿಗಳು ಮತ್ತು ಕಾನೂನುಗಳ ಅನ್ವಯ ಪರಿಶೀಲಿಸುವ ಉದ್ದೇಶದಿಂದ ತೆರಿಗೆ ಆಡಳಿತ ಸುಧಾರಣಾ ಆಯೋಗ ರಚಿಸಲಾಯಿತು. ಪರಿಣಾಮಕಾರಿ ಮತ್ತು ದಕ್ಷತೆಯನ್ನು ಹೆಚ್ಚಿಸಲು ತೆರಿಗೆ ಆಡಳಿತದಲ್ಲಿ ಅಗತ್ಯವಾದ ಸುಧಾರಣೆಗಳಿಗೆ ಇದು ಕ್ರಮಕ್ಕೆ ಶಿಫಾರಸು ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.