ನವದೆಹಲಿ : ವಾಟ್ಸ್‌ಆ್ಯಪ್‌ನ ನೂತನ ಗೌಪ್ಯತೆ ನೀತಿಯ ಬಗ್ಗೆ ಬಳಕೆದಾರರ ಆಕ್ಷೇಗಳ ನಡುವೆ ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್‌ನಲ್ಲಿ ಮಾಡಲಾದ ಬದಲಾವಣೆಗಳನ್ನು ಪರಿಶೀಲಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ವೈಯಕ್ತಿಕ ಸಂವಹನದ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಸಹ ಪ್ರತಿಪಾದಿಸಿದೆ.
15ನೇ ಭಾರತ ಡಿಜಿಟಲ್ ಶೃಂಗಸಭೆಯಲ್ಲಿ ಮಾತನಾಡಿದ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ದೇಶದಲ್ಲಿ ಚೀನಾ ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳ ಮಾನ್ಯತೆಗೆ ಸಂಬಂಧ ರಾಷ್ಟ್ರೀಯ ಭದ್ರತೆಯ ಕೇಂದ್ರವಾಗಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ರ ಬೆಂಗಾವಲು ವಾಹನಕ್ಕೆ ಶಾಸಕರ ಕಾರು ಡಿಕ್ಕಿ
ತನ್ನ ಮೂಲ ಕಂಪನಿಯಾದ ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚಿಕೊಳ್ಳಲಾಗುತ್ತಿದೆ ಎಂಬ ಆತಂಕದ ಬಗ್ಗೆ ಭಾರತ ಸೇರಿದಂತೆ ಜಾಗತಿಕ ಬಳಕೆದಾರರಿಂದ ವಾಟ್ಸ್‌ಆ್ಯಪ್ ವಿರುದ್ಧ ಭಾರಿ ಟೀಕೆಗಳು ಕೇಳಿ ಬಂದವು. ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್ ಎರಡೂ ಖಾಸಗಿ ಸಂದೇಶಗಳನ್ನು ವಾಟ್ಸ್‌ಆ್ಯಪ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡುವುದಿಲ್ಲ ಎಂದು ಆ್ಯಪ್ ಸ್ಪಷ್ಟನೆ ನೀಡಿತ್ತು.
ಇದು ನನ್ನ ಇಲಾಖೆಗೆ ಸಂಬಂಧಿಸಿದ (ಕಾರ್ಯನಿರ್ವಹಿಸುತ್ತಿದೆ) ಒಂದು ಸಮಸ್ಯೆಯಾಗಿದೆ. ಅಂತಿಮ ನಿರ್ಧಾರ ಪ್ರಾಧಿಕಾರದ ಕೈಯಲ್ಲಿರುವುದರಿಂದ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಆದರೆ, ಒಂದು ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳ ಬಯಸುತ್ತೇನೆ, ವಾಟ್ಸ್ಆ್ಯಪ್ ಆಗಿರಲಿ, ಅದು ಫೇಸ್‌ಬುಕ್ ಆಗಿರಲಿ, ಅದು ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರಲಿ. ನೀವು ಭಾರತದಲ್ಲಿ ವ್ಯಾಪಾರ ಮಾಡಲು ಮುಕ್ತರಾಗಿದ್ರೇ, ಇಲ್ಲಿ ಕಾರ್ಯನಿರ್ವಹಿಸುವ ಭಾರತೀಯರ ಹಕ್ಕುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ ಎಂದು ಪ್ರಸಾದ್ ತಾಕೀತು ಮಾಡಿದರು.