ETV Bharat / business

ತೈಲ ದರ ಏರಿಕೆ ಮಧ್ಯೆ ಎಥೆನಾಲ್​ ಶಾಕ್​: ಕಾಕಂಬಿ ಮೇಲೆ ಮೋದಿ 3 ರೂ. ಏರಿಸಿದ್ದೇಕೆ? - ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ

ಸಿ- ಮೊಲ್ಯಾಸಿಸ್‌ ಎಥೆನಾಲ್ ದರ ಲೀಟರ್‌ಗೆ 43.75 ರೂ.ನಿಂದ 45.69 ರೂ.ಗೆ ಮತ್ತು ಬಿ - ಮೊಲ್ಯಾಸಿಸ್‌ ಎಥೆನಾಲ್ ಅನ್ನು 54.27 ರೂ.ನಿಂದ 57.61 ರೂ.ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಿರ್ಧರಿಸಿದೆ.

ethanol
ಎಥೆನಾಲ್
author img

By

Published : Oct 29, 2020, 5:56 PM IST

ನವದೆಹಲಿ: ರೈತ ಪರ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ತೈಲ ಆಮದಿನ ಪ್ರಮಾಣ ಕಡಿತಗೊಳಿಸಲು ಸಹಕಾರಿಯಾಗಿ ಪೆಟ್ರೋಲ್ ಡೋಪಿಂ​ಗಾಗಿ ಕಬ್ಬಿನಿಂದ ಹೊರತೆಗೆಯಲಾದ ಕಾಕಂಬಿ (ಸಿ-ಮೊಲ್ಯಾಸಿಸ್‌) ಆಧರಿತ ಎಥೆನಾಲ್ ಮೇಲೆ ಲೀಟರ್‌ಗೆ 3.34 ರೂ. ಹೆಚ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಎಥೆನಾಲ್ ಬೆಲೆಯನ್ನು ಪ್ರತಿ ಲೀಟರ್‌ ಮೇಲೆ 3.34 ರೂ. ಹೆಚ್ಚಿಸಿ 62.65 ರೂ.ಗೆ ಏರಿಸಿದೆ.

ಸಿ - ಮೊಲ್ಯಾಸಿಸ್‌ ಎಥೆನಾಲ್ ದರ ಲೀಟರ್‌ಗೆ 43.75 ರೂ.ನಿಂದ 45.69 ರೂ.ಗೆ ಮತ್ತು ಬಿ-ಮೊಲ್ಯಾಸಿಸ್‌ ಎಥೆನಾಲ್ ಅನ್ನು 54.27 ರೂ.ಯಿಂದ 57.61 ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.

ತೈಲ ಅಗತ್ಯಗಳನ್ನು ಪೂರೈಸಲು ಭಾರತವು ಶೇ 85ರಷ್ಟು ಸಾಗರೋತ್ತರ ಆಮದಿನ ಮೇಲೆ ಅವಲಂಬಿತವಾಗಿದೆ. ತೈಲ ಆಮದು ಮತ್ತು ವಾಹನ ಹೊಗೆ ಹೊರಸೂಸುವಿಕೆ ಕಡಿತಗೊಳಿಸುವ ಉದ್ದೇಶದಿಂದ ಪೆಟ್ರೋಲ್‌ನಲ್ಲಿ ಶೇ 10ರಷ್ಟು ಎಥೆನಾಲ್ ಬಳಸಲು ಅನುಮತಿಸಲಾಗಿದೆ. ಕಬ್ಬು ಬೆಳೆಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಭಾವನೆ ಮೂಲ ಹೆಚ್ಚಿಸಲು ಇದು ಸಹಾಯಕವಾಗುತ್ತದೆ.

ತೈಲ ಮಾರುಕಟ್ಟೆ ಕಂಪನಿಗಳು ಪಾವತಿಸುವ ಎಥೆನಾಲ್ ಬೆಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಿದೆ. ಎಥೆನಾಲ್ ಖರೀದಿ 2019-14ರಲ್ಲಿ 195 ಕೋಟಿ ಲೀಟರ್‌ಗೆ ಏರಿದ್ದು (ಡಿಸೆಂಬರ್ 2019 ರಿಂದ ನವೆಂಬರ್ 2020) 2013-14ರಲ್ಲಿ 38 ಕೋಟಿ ಲೀಟರ್​ನಷ್ಟಿತ್ತು.

ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್‌ಪಿಸಿಎಲ್) ಪೆಟ್ರೋಲ್ ಡೋಪಿಂಗ್​​ಗೆ ಸಂಗ್ರಹಿಸಿದ ಎಥೆನಾಲ್ ಮೇಲೆ ಜಿಎಸ್​​ಟಿ ಮತ್ತು ಸಾರಿಗೆ ವೆಚ್ಚ ಭರಿಸಲಿವೆ ಎಂದು ಹೇಳಿದರು.

ಎಥೆನಾಲ್ ಶೂನ್ಯ ಹೊಗೆ ಹೊರಸೂಸುವಿಕೆಯೊಂದಿಗೆ ಪರಿಸರ ಸ್ನೇಹಿ ಇಂಧನವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.