ETV Bharat / business

ಆಧಾರ್​-ಪ್ಯಾನ್​ ಲಿಂಕ್​ ಡೆಡ್​ಲೈನ್: 2021ರ ಮಾ.31ಕ್ಕೆ ಮುಂದೂಡಿಕೆ

ನಾವು ಈಗಿರುವ ಸಮಯವನ್ನು ಗಮನದಲ್ಲಿಟ್ಟುಕೊಂಡು ನಾವು ಗಡುವನ್ನು ವಿಸ್ತರಿಸಿದ್ದೇವೆ. ಪ್ಯಾನ್ - ಆಧಾರ್ ಲಿಂಕ್ ಅನ್ನು 2021ರ ಮಾರ್ಚ್ 31ರವರೆಗೆ ಮಾಡಬಹುದು. ಇದನ್ನು ಇನ್ನಷ್ಟು ಉತ್ತಮವಾಗಿ ಜೋಡಿಸಲು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

PAN
ಪ್ಯಾನ್
author img

By

Published : Jul 6, 2020, 11:42 PM IST

ನವದೆಹಲಿ: ಆಧಾರ್ ಮತ್ತು ಪ್ಯಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಆದಾಯ ತೆರಿಗೆ ಇಲಾಖೆಯು 2021ರ ಮಾರ್ಚ್​​ 31ಕ್ಕೆ ನಿಗದಿಪಡಿಸಿದೆ.

ಲಾಕ್​ಡೌನ್​ ಹಾಗೂ ಇತರೆ ಕಾರಣಗಳಿಂದ ಇದುವರೆಗೂ 10 ಬಾರಿ ಅಂತಿಮ ಗಡುವು ಮುಂದೂಡಲಾಗಿದೆ. ಬಹುತೇಕ ಕಾರ್ಡ್​ದಾರರು ಜೋಡಣೆಗೆ ಹಿಂದೇಟು ಹಾಕುತ್ತಿದ್ದರು.

ಕೋವಿಡ್ -19 ಸಾಂಕ್ರಾಮಿಕತೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ತೊಂದರೆಗಳನ್ನು ಗಮನದಲ್ಲಿಟ್ಟು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಾವು ಈಗಿರುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಗಡುವನ್ನು ವಿಸ್ತರಿಸಿದ್ದೇವೆ. ಪ್ಯಾನ್ - ಆಧಾರ್ ಲಿಂಕ್ ಅನ್ನು 2021ರ ಮಾರ್ಚ್ 31 ರವರೆಗೆ ಮಾಡಬಹುದು. ಇದನ್ನು ಇನ್ನಷ್ಟು ಉತ್ತಮವಾಗಿ ಜೋಡಿಸಲು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

ಈ ಮೊದಲು ತೆರಿಗೆ ಮೌಲ್ಯಮಾಪಕರಿಗೆ ಮತ್ತೊಂದು ದೊಡ್ಡ ಪರಿಹಾರವಾಗಿ ಐಟಿ ಇಲಾಖೆಯು ರೂ. 1 ಲಕ್ಷ ವರೆಗಿನ ಸ್ವಯಂ ಮೌಲ್ಯಮಾಪನ ತೆರಿಗೆ ಪಾವತಿಸುವ ಕೊನೆಯ ದಿನಾಂಕವನ್ನು 2020ರ ನವೆಂಬರ್ 30ರವರೆಗೆ ವಿಸ್ತರಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.