ಮುಂಬೈ: ಹಣಕಾಸಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಬಳಿ ₹30,000 ಕೋಟಿ ಮಧ್ಯಂತರ ಹಣಕಾಸಿನ ನೆರವು ಕೇಳುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೇಂದ್ರ ಸರ್ಕಾರ ₹30,000 ಕೋಟಿ ಹಣವನ್ನು ಮುಂದಿನ ಹಣಕಾಸು ವರ್ಷ(ಏಪ್ರಿಲ್ - ಮೇ) ತಿಂಗಳಲ್ಲಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗೆಗಿನ ಎಲ್ಲ ವ್ಯವಹಾರಗಳು ಮುಂದಿನ ಜನವರಿಯಲ್ಲಿ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತಂತೆ ಹಣಕಾಸು ಇಲಾಖೆ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಕಳೆದ ವರ್ಷ ಆರ್ಬಿಐ ಕೇಂದ್ರ ಸರ್ಕಾರಕ್ಕೆ ₹28,000 ಕೋಟಿ ಮಧ್ಯಂತರ ನೆರವು ನೀಡಿತ್ತು.