ನವದೆಹಲಿ: ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ಎನ್ಎಆರ್ಇಡಿಸಿಒ) ಮಂಗಳವಾರ ಇ ಕಾಮರ್ಸ್ ಹೌಸಿಂಗ್ ಪೋರ್ಟಲ್ 'ಹೌಸಿಂಗ್ಫಾರ್ಆಲ್.ಕಾಮ್ಗೆ' (HousingForAll.Com) ಚಾಲನೆ ನೀಡಲಾಯಿತು.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರ ಅವರು ಈ ಪೋರ್ಟಲ್ಗೆ ಚಾಲನೆ ನೀಡಿದರು. 'ಹೌಸಿಂಗ್ಫಾರ್ಆಲ್.ಕಾಮ್ ಪೋರ್ಟಲ್ ಚಾಲನೆಯಿಂದ ಪ್ರಮಾಣಿಕ ಮತ್ತು ಪಾರದರ್ಶಕತೆ ಕಂಡು ಬರಲಿದೆ. ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಇರಬೇಕು. ರಿಯಾಲ್ಟರ್‌ಗಳ ಬಾಡಿಯ ಕ್ರೆಡೈ ಕೂಡ ಇದೇ ರೀತಿಯ ಪೋರ್ಟಲ್ ಆರಂಭಿಸಲಿದೆ ಎಂದರು.
ಫೆಬ್ರವರಿ 14ರಿಂದ 45 ದಿನಗಳ ಮಾರಾಟದ ಅವಧಿಯೊಂದಿಗೆ ಮನೆ ಖರೀದಿದಾರರಿಗೆ ಈ ಪೋರ್ಟಲ್ ತೆರೆದಿರುತ್ತದೆ. ಇ-ಕಾಮರ್ಸ್ ಹೌಸಿಂಗ್ ಪೋರ್ಟಲ್ ಆರಂಭವಾಗಲಿದ್ದು, 45 ದಿನಗಳ 'ಅಖಿಲ ಭಾರತ ಆನ್‌ಲೈನ್ ಮನೆ ಖರೀದಿ ಉತ್ಸವ' ಕೂಡ ಸಿದ್ಧವಾಗಲಿದೆ. 1,000ಕ್ಕೂ ಹೆಚ್ಚು ಯೋಜನೆಗಳನ್ನು ಪಟ್ಟಿ ಮಾಡುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡೆವಲಪರ್‌ಗಳು ತಮ್ಮ ಯೋಜನೆಗಳನ್ನು ನೋಂದಾಯಿಸಲು ಪೋರ್ಟಲ್ ಜನವರಿ 14ರಿಂದ ಫೆಬ್ರವರಿ 13ರವರೆಗೆ ಅಂದರೆ, ಒಂದು ತಿಂಗಳವರೆಗೆ ತೆರೆದಿರಲಿದೆ. ಮಾರ್ಚ್‌ನಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ಖರೀದಿಸಲು ಸಾಧ್ಯವಾಗುತ್ತದೆ. ಆಕ್ಯುಪೆನ್ಸಿ ಸರ್ಟಿಫಿಕೇಟ್ಯೊಂದಿಗಿನ (ಒಸಿ) ಸೈಟ್‌ಗಳು ಖರೀದಿಗೆ ಲಭ್ಯವಿರುತ್ತವೆ. ಖರೀದಿದಾರರು ನೆಲದ ಯೋಜನೆ, ಕೋಣೆಯ ಆಯಾಮ, ಘಟಕಗಳ ವೀಡಿಯೊ ಮತ್ತು ಬಾಹ್ಯ ಮಾಹಿತಿಯನ್ನು ವೀಕ್ಷಿಸಲು ಸಾಧ್ಯವಾಗಲಿದೆ.
ಪೋರ್ಟಲ್ನಲ್ಲಿ ಕೇವಲ 25 ಸಾವಿರ ರೂ. ಪಾವತಿಯೊಂದಿಗೆ ಒಂದು ಘಟಕ ಕಾಯ್ದಿರಿಸಬಹುದು. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ 'ಮನಿ-ಬ್ಯಾಕ್ ಗ್ಯಾರಂಟಿ' ಸಹ ದೊರೆಯಲಿದೆ.