ETV Bharat / business

ಜಾಗತಿಕ ಆರ್ಥಿಕತೆ ಶೇ.4% ವಿಸ್ತರಣೆ.. ಏಷ್ಯಾದ ಕೇಂದ್ರೀಯ ಬ್ಯಾಂಕ್​ಗಳ ಬ್ಯಾಲೆನ್ಸ್​ಶೀಟ್​ ದುರ್ಬಲ- WB - ಜಾಗತಿಕ ಆರ್ಥಿಕತೆಯ ಇತ್ತೀಚಿನ ಸುದ್ದಿ

ಹಣಕಾಸಿನ ಪರಿಸ್ಥಿತಿಗಳು ಹಠಾತ್ ಬಿಗಿ ಆಗುವುದರಿಂದ ಸಂಭವನೀಯ ಸಾಂಸ್ಥಿಕ ದಿವಾಳಿತನ, ಹವಾಮಾನ ಬದಲಾವಣೆಯು ದುಷ್ಪರಿಣಾಮಕ್ಕೆ ಒಳಗಾಗಲಿವೆ. ಸಾಂಕ್ರಾಮಿಕ ರೋಗದ ದೀರ್ಘಕಾಲದ ಚೇತರಿಕೆಯ ಆರ್ಥಿಕ ಪರಿಣಾಮಗಳಿಂದ ಏಷ್ಯಾ ವಲಯದ ದೇಶೀಯ ಬ್ಯಾಂಕ್​ಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು..

World Bank
ವಿಶ್ವ ಬ್ಯಾಂಕ್
author img

By

Published : Jan 6, 2021, 4:23 PM IST

ವಾಷಿಂಗ್ಟನ್ : 2021ರಲ್ಲಿ ಜಾಗತಿಕ ಆರ್ಥಿಕತೆಯು ಶೇ.4ರಷ್ಟು ವೃದ್ಧಿಸುವ ನಿರೀಕ್ಷೆಯಿದೆ. ಆರಂಭಿಕ ಕೋವಿಡ್-19 ಲಸಿಕೆ ನೀಡಿಕೆಯು ವರ್ಷದುದ್ದಕ್ಕೂ ವಿಸ್ತರಣೆ ಆಗಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಸಾಂಕ್ರಾಮಿಕ ರೋಗದ ಹತೋಟಿ ಮತ್ತು ಹೂಡಿಕೆ ಹೆಚ್ಚಿಸುವಂತಹ ಸುಧಾರಣಾ ನೀತಿಗಳನ್ನು ಜಾರಿಗೆ ತರದ ಹೊರತು ಚೇತರಿಕೆ ಹಾದಿ ಸುಗಮವಾಗಿ ಸಾಗುವುದಿಲ್ಲ ಎಂದು ಇತ್ತೀಚಿನ ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿನ ಬೆಳವಣಿಗೆಯು ಕ್ಷೀಣಿಸುತ್ತಿದ್ದ ಸಮಯದಲ್ಲಿ ಸಾಂಕ್ರಾಮಿಕವು ಆರ್ಥಿಕತೆಗೆ ಅಪ್ಪಳಿಸಿತು. 2020-21ರ ಆರ್ಥಿಕ ವರ್ಷದಲ್ಲಿ ಉತ್ಪಾದನೆ ಶೇ.9.6ರಷ್ಟು ಕುಗ್ಗುತ್ತದೆ. ಗೃಹ ಖರ್ಚು ಮತ್ತು ಖಾಸಗಿ ಹೂಡಿಕೆಯ ತೀವ್ರ ಕುಸಿತದ ಪ್ರತಿಬಿಂಬವಾಗಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಆರ್ಥಿಕ ವಲಯದ ದೌರ್ಬಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಗಿತವಾದ ಖಾಸಗಿ ಹೂಡಿಕೆಯ ಬೆಳವಣಿಗೆಯು ತಳಮಟ್ಟದಿಂದ ಮರುಕಳಿಸುವಿಕೆಯು 2021ರಲ್ಲಿ ಶೇ.5.4ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಏಷ್ಯಾ ಪ್ರದೇಶವು 2021ರಲ್ಲಿ ಶೇ.3.3ರಷ್ಟು ಬೆಳೆಯುವ ನಿರೀಕ್ಷೆಯಿದೆ.

ಆದಾಯ ಮತ್ತು ಉದ್ಯೋಗ, ಅದರಲ್ಲೂ ವಿಶೇಷವಾಗಿ ಸೇವಾ ವಲಯದ ಮೇಲೆ ದುರ್ಬಲ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. 2021ರ ದ್ವಿತೀಯಾರ್ಧದಿಂದ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಸೋಂಕುಗಳಲ್ಲಿ ವ್ಯಾಪಕ ಪುನರುತ್ಥಾನವಿಲ್ಲ ಎಂದು ಊಹಿಸಲಾಗಿದೆ.

ಇದನ್ನೂ ಓದಿ: 2021-22ರ ಬಜೆಟ್​ನಲ್ಲಿ ಏನೆಲ್ಲ ಇರಬೇಕು? ನಾಡಿದ್ದು ಉದ್ಯಮಿ ತಜ್ಞರ ಜತೆ ಪ್ರಧಾನಿ ಮೋದಿ ಚರ್ಚೆ

ಹಣಕಾಸಿನ ಪರಿಸ್ಥಿತಿಗಳು ಹಠಾತ್ ಬಿಗಿ ಆಗುವುದರಿಂದ ಸಂಭವನೀಯ ಸಾಂಸ್ಥಿಕ ದಿವಾಳಿತನ, ಹವಾಮಾನ ಬದಲಾವಣೆಯು ದುಷ್ಪರಿಣಾಮಕ್ಕೆ ಒಳಗಾಗಲಿವೆ. ಸಾಂಕ್ರಾಮಿಕ ರೋಗದ ದೀರ್ಘಕಾಲದ ಚೇತರಿಕೆಯ ಆರ್ಥಿಕ ಪರಿಣಾಮಗಳಿಂದ ಏಷ್ಯಾ ವಲಯದ ದೇಶೀಯ ಬ್ಯಾಂಕ್​ಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು.

ಇದು ದಿವಾಳಿತನದ ಏರಿಕೆಗೆ ಕಾರಣವಾಗಬಹುದು. ಈ ಪ್ರದೇಶದ ಹಲವು ಆರ್ಥಿಕತೆಗಳಲ್ಲಿ (ಬಾಂಗ್ಲಾದೇಶ, ಭೂತಾನ್, ಭಾರತ, ಶ್ರೀಲಂಕಾ) ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಕ್ಷೇತ್ರಗಳ ಬ್ಯಾಲೆನ್ಸ್ ಶೀಟ್‌ ದುರ್ಬಲಗೊಳಿಸಬಹುದು. ವಿಪರೀತ ಹವಾಮಾನ ಘಟನೆಗಳು ಪ್ರಾದೇಶಿಕ ಅಪಾಯವಾಗಿ ಉಳಿಯುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ಜಾಗತಿಕ ಆರ್ಥಿಕತೆಯು ಅಧೋಗತಿಗೆ ಒಳಪಟ್ಟಿದೆ ಎಂಬುದು ತೋರುತ್ತದೆ. ಆದರೂ ಸಾರ್ವಜನಿಕ ಆರೋಗ್ಯ, ಸಾಲ ನಿರ್ವಹಣೆ, ಬಜೆಟ್ ನೀತಿ, ಕೇಂದ್ರೀಯ ಬ್ಯಾಂಕಿಂಗ್ ಮತ್ತು ರಚನಾತ್ಮಕ ಸುಧಾರಣೆಗಳಲ್ಲಿ ನೀತಿ ತಜ್ಞರು ಭೀಕರ ಸವಾಲುಗಳನ್ನು ಎದುರಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.