ನವದೆಹಲಿ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 4.5ಕ್ಕೆ ಇಳಿದ ಕೆಲವು ದಿನಗಳ ನಂತರ ಬಿಜೆಪಿಯ ಸಂಸದ, ಆರ್ಥಿಕತೆಯನ್ನು ನಿರ್ಣಯಿಸಲು ಇದನ್ನು "ಬೈಬಲ್, ರಾಮಾಯಣ ಅಥವಾ ಮಹಾಭಾರತ" ಎಂದು ಪರಿಗಣಿಸಬಾರದು ಎಂದು ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಜಾರ್ಖಂಡ್‌ನ ಗೊಡ್ಡಾದ ಸಂಸದ ನಿಶಿಕಾಂತ್ ದುಬೆ, ಜಿಡಿಪಿ ಎಂಬ ಪದವು 1934ರಲ್ಲಿ ಮಾತ್ರ ಬಂದಿತು. ಅದಕ್ಕೂ ಮೊದಲು ಜಿಡಿಪಿ ಇರಲಿಲ್ಲ. ಭವಿಷ್ಯದಲ್ಲಿಯೂ ಇದು ಉಪಯುಕ್ತವಾಗುವುದಿಲ್ಲ ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ಸುಸ್ಥಿರ ಆರ್ಥಿಕ ಕಲ್ಯಾಣ ಲಭ್ಯವಿದೆಯೇ ಎಂದು ನಾವು ನೋಡಬೇಕು. ಜಿಡಿಪಿಗಿಂತ ಸುಸ್ಥಿರ ಆರ್ಥಿಕ ಅಭಿವೃದ್ಧಿ ಮತ್ತು ವ್ಯಕ್ತಿಯ ಸಂತೋಷ ಮುಖ್ಯವಾಗಿದೆ ಎಂದು ದುಬೆ ಹೇಳಿದರು.
ಉತ್ಪಾದನಾ ಕ್ಷೇತ್ರದಲ್ಲಿನ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆ ಮಂದಗತಿಯಿಂದಾಗಿ 2019-20ರ ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 4.5ಕ್ಕೆ ಇಳಿದಿದೆ. ಈ ಬೆಳವಣಿಗೆಯು ಆರು ವರ್ಷಗಳ ಹಿಂದಕ್ಕೆ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಸರ್ಕಾರದ ಅಧಿಕೃತ ದತ್ತಾಂಶಗಳು ಕಳೆದ ಶುಕ್ರವಾದ ತಿಳಿಸಿದ್ದವು.