ಹೈದರಾಬಾದ್ : ಮಂಗಳವಾರ ಬಿಡುಗಡೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿಯ ಪ್ರಕಾರ, ಜೂನ್ 21ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ದರವು ಪೂರ್ವ ಲಾಕ್ಡೌನ್ನ ಶೇ 8.5ರಷ್ಟು ಮಟ್ಟಕ್ಕೆ ಇಳಿದಿದೆ ಎಂದು ತಿಳಿಸಿದೆ.
ಮಾರ್ಚ್‌ನಲ್ಲಿನ ಶೇ 8.75 ರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ 23.5ಕ್ಕೆ ಏರಿಕೆಯಾಗಿದೆ. ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ಇದು ಶೇ 27.1ಕ್ಕೆ ತಲುಪಿತು. ಈ ಬಳಿಕ ನಿಧಾನಕ್ಕೆ ಅದು ಕುಸಿಯಲು ಪ್ರಾರಂಭಿಸಿತು. ಆರಂಭದಲ್ಲಿ ಹಿಂಜರಿಕೆಯಿಂದ ಮತ್ತು ನಂತರ ಜೂನ್‌ನಲ್ಲಿ ವೇಗವಾಗಿ ಇಳಿಯಿತು. 31ಕ್ಕೆ ಕೊನೆಗೊಂಡ ಮೇ ಕೊನೆಯ ವಾರದಲ್ಲಿ ಈ ದರವು ಶೇ 20ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
ಜೂನ್ ಮೊದಲ ಮೂರು ವಾರಗಳಲ್ಲಿ ನಿರುದ್ಯೋಗ ದರವು ನಾಟಕೀಯವಾಗಿ 17.5 ಮತ್ತು 11.6, ಈಗ 8.5ಕ್ಕೆ ಇಳಿದಿದೆ. ನಗರದಲ್ಲಿನ ನಿರುದ್ಯೋಗ ದರ ತೀವ್ರವಾಗಿ ಕುಸಿದಿದೆ. ಇದು ಪೂರ್ವಲಾಕ್‌ಡೌನ್ ಮಟ್ಟಕ್ಕಿಂತ ಹೆಚ್ಚಾಗಿದೆ. ಜೂನ್ 21ಕ್ಕೆ ಕೊನೆಗೊಂಡ ಇತ್ತೀಚಿನ ವಾರದಲ್ಲಿ ನಿರುದ್ಯೋಗ ದರ ಶೇ.11.2ಕ್ಕೆ ಇಳಿದಿದೆ. ಲಾಕ್‌ಡೌನ್‌ಗೆ ಮುಂಚಿನ ಅವಧಿಯಲ್ಲಿ ಇದು ಶೇ.9ರ ಸರಾಸರಿಗಿಂತ 200 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ.
ಜೂನ್ 12ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ನಗರ ಪ್ರದೇಶದಲ್ಲಿ ಶೇ.11.2ರಷ್ಟು ನಿರುದ್ಯೋಗ ದರವು ಗರಿಷ್ಠ ನಿರುದ್ಯೋಗದ ಸಮಯದಲ್ಲಿ ಸರಾಸರಿ 25.83 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಏಪ್ರಿಲ್ ಮತ್ತು ಮೇ ಅವಧಿ ಅಥವಾ ಈವರೆಗಿನ 13 ವಾರಗಳ ಲಾಕ್‌ಡೌನ್ ಅವಧಿಯ ಶೇ 23.18ರ ಸರಾಸರಿಗಿಂತಲೂ ಹೆಚ್ಚಾಗಿದೆ.