ETV Bharat / business

1.7 ಲಕ್ಷ ಕೋಟಿ ರೂ. ಕೊರೊನಾ ಪ್ಯಾಕೇಜ್... ಕೋವಿಡ್​ ಚಿಕಿತ್ಸಾ ವೈದ್ಯರಿಗೆ 50 ರೂ. ಲಕ್ಷ ವಿಮೆ - ಭಾರತದಲ್ಲಿ ಕೊರೊನಾ ವೈರಸ್

ಮಾಧ್ಯಮಗಳು ಹಾಗೂ ದೇಶವನ್ನು ಉದ್ದೇಶಿಸಿ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ ಅಡಿ ಮುಂದಿನ 3 ತಿಂಗಳುಗಳವರೆಗೆ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆಯನ್ನು ಸರ್ಕಾರ ಪಾವತಿಸುತ್ತದೆ. 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ 90 ಪ್ರತಿಶತದಷ್ಟು ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ನೀಡಲಾಗುವುದು ಎಂದರು.

Sitharaman
ಸೀತಾರಾಮನ್
author img

By

Published : Mar 26, 2020, 2:55 PM IST

ನವದೆಹಲಿ: ಕಳೆದ ಒಂದು ವಾರದಿಂದ ದೇಶದ ಜನತೆ ಹಾಗೂ ಉದ್ಯಮ ವಲಯಗಳು ಎದುರುನೋಡುತ್ತಿದ್ದ ಕೇಂದ್ರ ಕೊರೊನಾ ವೈರಸ್ ಪ್ಯಾಕೇಜ್​ ಘೋಷಣೆಯಾಗಿದೆ.

ಮಾಧ್ಯಮಗಳು ಹಾಗೂ ದೇಶವನ್ನು ಉದ್ದೇಶಿಸಿ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ ಅಡಿ ಮುಂದಿನ 3 ತಿಂಗಳುಗಳವರೆಗೆ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆಯನ್ನು ಸರ್ಕಾರ ಪಾವತಿಸುತ್ತದೆ. 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ 90 ಪ್ರತಿಶತದಷ್ಟು ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ನೀಡಲಾಗುವುದು ಎಂದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಮಹಿಳೆಯರಿಗೆ ಮೇಲಾಧಾರ ಸಾಲವನ್ನು ದ್ವಿಗುಣಗೊಳಿಸಲಾಗುವುದು. ಉಜ್ವಲ್​ ಯೋಜನಾ ಮಹಿಳೆಯರಿಗೆ ಮುಂದಿನ 3 ತಿಂಗಳವರೆಗೆ ಉಚಿತ ಸಿಲಿಂಡರ್ ನೀಡಲಾಗುವುದು. ಇದರಿಂದ 8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಹೇಳಿದರು.

  • Govt ready to amend the regulation of EPF due to this pandemic so that workers can draw upto 75% non-refundable advance from credit in PF account or 3 months salary, whichever is lower: FM Sitharaman https://t.co/kHfRjlyZNm

    — ANI (@ANI) March 26, 2020 " class="align-text-top noRightClick twitterSection" data=" ">

ಮಹಿಳಾ ಜನ ಧನ್ ಖಾತೆದಾರರು 500 ರೂ. ಸ್ವೀಕರಿಸಲಿದ್ದಾರೆ. ಇದರಿಂದ ಅವರು ತಮ್ಮ ಕುಟುಂಬಗಳ ನಿರ್ವಹಣೆ ಮಾಡಿಕೊಳ್ಳಬಹುದು. ಮುಂದಿನ 3 ತಿಂಗಳವರೆಗೆ ಇದು ಅನ್ವಯಿಸುತ್ತದೆ ಎಂದರು.

ನೇರ ನಗದು ವರ್ಗಾವಣೆಯ ಮೂಲಕ 8.69 ಕೋಟಿ ರೈತರಿಗೆ ತಕ್ಷಣ ಅನುಕೂಲ ಆಗುವಂತೆ ಏಪ್ರಿಲ್ ಮೊದಲ ವಾರದಲ್ಲಿ 2000 ರೂ.ಗಳ ಮೊದಲ ಕಂತು ವರ್ಗಾಯಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

ಯಾರೂ ಹಸಿವಿನಿಂದ ಬಳಲುವುದಿಲ್ಲ. ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ 1.7 ಲಕ್ಷ ಕೋಟಿ ರೂ. ಪ್ಯಾಕೇಜ್​ ನೀಡಲಾಗುತ್ತಿದೆ. ಕೊರೊನಾ ವೈರಸ್​ ನಿರ್ಮೂಲನೆಯಲ್ಲಿ ಭಾಗಿಯಾಗುತ್ತಿರುವ ಮುಂಚೂಣಿ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರು, ವೈದ್ಯರು, ನೈರ್ಮಲ್ಯ ಕಾರ್ಮಿಕರು, ಪ್ಯಾರಾ ಮೆಡಿಕ್ಸ್ ಸಿಬ್ಬಂದಿಗೆ ಕೃತಜ್ಞತೆಗಳು. ಅವರಿಗೆ 50 ಲಕ್ಷ ರೂ. ವಿಮಾ ಸೌಲಭ್ಯ ನೀಡಲಾಗುವುದು ಎಂದು ಸೀತಾರಾಮನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.