ETV Bharat / business

ಮುಂದಿನ ತಿಂಗಳಿಂದ ವಿಮಾನ ಪ್ರಯಾಣಿಕರಿಗೆ ದರ ಏರಿಕೆಯ ಬರೆ: ಇಲ್ಲಿದೆ ಬೆಲೆ ಹೆಚ್ಚಳಕ್ಕೆ ಕಾರಣ!

ನಾಗರಿಕ ವಿಮಾನಯಾನ ಸಚಿವಾಲಯವು ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಾಯುಯಾನ ಭದ್ರತಾ ಶುಲ್ಕವನ್ನು (ಎಎಸ್ಎಫ್) ಹೆಚ್ಚಿಸಿದೆ. 10 ರೂ. ಹೆಚ್ಚಳದ ನಂತರ, ಎಎಸ್ಎಫ್ ದೇಶಿಯ ಪ್ರಯಾಣಿಕರಿಗೆ 160 ರೂ. ಮತ್ತು ಹಿಂದಿನ 363 ರೂ. ಬದಲು 389 ರೂ. ವಿಧಿಸಲಿದೆ.

Flight
ವಿಮಾನ
author img

By

Published : Aug 21, 2020, 8:15 PM IST

ನವದೆಹಲಿ: ವಿಮಾನಯಾನ ಭದ್ರತಾ ಶುಲ್ಕ ಏರಿಕೆ ಆಗಿರುವುದರಿಂದ ಮುಂದಿನ ತಿಂಗಳಿನಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ನಾಗರಿಕ ವಿಮಾನಯಾನ ಸಚಿವಾಲಯವು ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಾಯುಯಾನ ಭದ್ರತಾ ಶುಲ್ಕವನ್ನು (ಎಎಸ್ಎಫ್) ಹೆಚ್ಚಿಸಿದೆ. 10 ರೂ. ಹೆಚ್ಚಳದ ನಂತರ, ಎಎಸ್ಎಫ್ ದೇಶಿಯ ಪ್ರಯಾಣಿಕರಿಗೆ 160 ರೂ. ಮತ್ತು ಹಿಂದಿನ 363 ರೂ. ಬದಲು 389 ರೂ. ವಿಧಿಸಲಿದೆ.

ಪ್ರಯಾಣಿಕರ ವಿಮಾನಯಾನ ಭದ್ರತಾ ಶುಲ್ಕವನ್ನು ವಿಮಾನಯಾನ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಎಎಸ್ಎಫ್ ಅನ್ನು ಬಳಸಲಾಗುತ್ತದೆ.

ಎಎಸ್ಎಫ್ ದರವನ್ನು ಕೊನೆಯದಾಗಿ 2019ರ ಜುಲೈನಲ್ಲಿ ಪರಿಷ್ಕರಿಸಲಾಗಿತ್ತು. ನಂತರ ಭದ್ರತಾ ಶುಲ್ಕವನ್ನು ದೇಶಿಯ ಪ್ರಯಾಣಿಕರಿಗೆ ಹಿಂದಿನ 130 ರೂ.ಗಳಿಂದ 150 ರೂ.ಗೆ ಮತ್ತು ಹಿಂದಿನ 243 ರೂ.ಗಳಿಂದ 363 ರೂ.ಗೆ ಹೆಚ್ಚಿಸಲಾಯಿತು.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ವಾಯುಯಾನ ಕ್ಷೇತ್ರವು ಹೆಚ್ಚು ಪರಿಣಾಮ ಬೀರಿದ ಕ್ಷೇತ್ರಗಳಲ್ಲಿ ಒಂದಾಗಿದೆ. ದೇಶಿಯ ಹಾರಾಟಕ್ಕೆ ನಿರ್ಬಂಧಿತ ಅವಕಾಶವನ್ನು ನೀಡಲಾಗಿದೆ. ಇದರಿಂದ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿ ಕಡಿತ ಹಾಗೂ ಸಂಬಳ ತಗ್ಗಿಸುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.