ನವದೆಹಲಿ: ಜುಲೈ ತಿಂಗಳಿಗೆ ಕೊನೆಗೊಂಡಂತೆ ಹಣಕಾಸಿನ ಕೊರತೆಯು ₹ 5.47 ಲಕ್ಷ ಕೋಟಿ ತಲುಪಿದ್ದು, ಇದು 2019-20ರ ಬಜೆಟ್ ಅಂದಾಜಿನ ಶೇ 77.8 ರಷ್ಟಿದೆ.
ಸರಳವಾಗಿ ಹೇಳುವುದಾದರೆ; ಹಣಕಾಸಿನ ಕೊರತೆ ಅಥವಾ ಖರ್ಚು ಮತ್ತು ಆದಾಯದ ನಡುವಿನ ಅಂತರ ₹ 5,47,605 ಕೋಟಿ ಆಗಿದೆ ಎಂಬುದು ಮಹಾಲೇಖಪಾಲರ (ಸಿಜಿಎ) ವರದಿಯಲ್ಲಿ ತಿಳಿದಿಬಂದಿದೆ.
ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ, ಜುಲೈ ಅಂತ್ಯದಲ್ಲಿ ಹಣಕಾಸಿನ ಕೊರತೆಯು ಹಿಂದಿನ ವರ್ಷದ ಅವಧಿಯಲ್ಲಿನ 2018-19ರ ಬಜೆಟ್ ಅಂದಾಜಿನ ಶೇ 86.5 ರಷ್ಟಿತ್ತು. ಕೇಂದ್ರ ಸರ್ಕಾರ ಹಣಕಾಸಿನ ಕೊರತೆಯನ್ನು 2019-20ರಲ್ಲಿ ₹ 7.03 ಲಕ್ಷ ಕೋಟಿಯಷ್ಟು ಅಂದಾಜಿಸಿತ್ತು.
ಸಿಜಿಎ ದತ್ತಾಂಶವು 2019-20ರ ಏಪ್ರಿಲ್-ಜುಲೈ ಅವಧಿಯಲ್ಲಿನ ಸರ್ಕಾರದ ಆದಾಯದ ಸ್ವೀಕೃತಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಜೆಟ್ ಅಂದಾಜಿನ ಶೇ 19.5ರಷ್ಟು ಯಥಾವತ್ತಾಗಿ ಉಳಿದಿವೆ ಎಂದು ತೋರಿಸಿದೆ.
2019ರ ಜುಲೈ ಅಂತ್ಯದ ವೇಳೆಗೆ ಆದಾಯದ ಸ್ವೀಕೃತಿ ₹ 3.82 ಲಕ್ಷ ಕೋಟಿ ಆಗಿದ್ದು, ಇಡೀ ವರ್ಷದಲ್ಲಿ ಆದಾಯದ ಸ್ವೀಕೃತಿಯನ್ನು ₹ 19.62 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಬಂಡವಾಳ ವೆಚ್ಚವು ಬಜೆಟ್ನಲ್ಲಿ ಶೇ 31.8ರಷ್ಟಿತ್ತು. ಇದು ಹಿಂದಿನ ವರ್ಷದ ಈ ಅವಧಿಯಲ್ಲಿ ಶೇ 37.1 ರಷ್ಟಿದೆ ಎಂದು ಸಿಜಿಎ ತಿಳಿಸಿದೆ.