ETV Bharat / business

ಡಿಮ್ಯಾಟ್ ಖಾತೆ ತೆರೆಯಲು ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ: ಸೀತಾರಾಮನ್​ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕಳೆದ 19 ತಿಂಗಳುಗಳಲ್ಲಿ ಆಟೋಮೊಬೈಲ್ ವಲಯವು ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದು, ಬೆಳವಣಿಗೆಯ ಕುಸಿತವು 19 ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಸುಮಾರು 13 ಲಕ್ಷ ವಸತಿಗಳು ಮಾರಾಟವಾಗದೇ ಉಳಿದುಕೊಂಡಿವೆ. ವಿದೇಶಾಂಗ ಬಂಡವಾಳ ಹೂಡಿಕೆದಾರರ ಮೇಲಿನ ವಿವಾದಾತ್ಮಕ ಹೆಚ್ಚುವರಿ ಶುಲ್ಕದ ಕುರಿತು ಸರ್ಕಾರದ ನಿಲುವನ್ನು ಹಣಕಾಸು ಸಚಿವರು ತೆರವುಗೊಳಿಸುವ ಸಾಧ್ಯತೆ ಇದೆ.

ಸೀತಾರಾಮನ್
author img

By

Published : Aug 23, 2019, 5:57 PM IST

Updated : Aug 23, 2019, 7:15 PM IST

ನವದೆಹಲಿ: ದೇಶೀಯ ಚಿಲ್ಲರೆ ಹೂಡಿಕೆದಾರರಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲು ಮತ್ತು ಸುಲಭಗೊಳಿಸಲು ಡಿಮ್ಯಾಟ್ ಖಾತೆ ತೆರೆಯಲು ಕೆವೈಸಿಗೆ (ನೌ ಯುವರ್​ ಕಸ್ಟಮರ್​) ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಸುದ್ದಿಗೋಷ್ಠಿ ಪ್ರಮುಖಾಂಶಗಳು

  • 5 ಲಕ್ಷ ಕೋಟಿ ರೂ.ಗಳವರೆಗೆ ದ್ರವ್ಯತೆ ಮಾರುಕಟ್ಟೆ ಹೊಂದಲು ಕೇಂದ್ರ ಸರ್ಕಾರವು 70,000 ಕೋಟಿ ರೂ.ಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡಲಿದೆ
  • ಕೇಂದ್ರೀಕೃತ ವ್ಯವಸ್ಥೆ ಮೂಲಕ ಎಲ್ಲ ವಿಧದ ತೆರಿಗೆ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ. ಎಲ್ಲ ಹಳೆಯ ತೆರಿಗೆ ಸೂಚನೆಗಳನ್ನು ಅಕ್ಟೋಬರ್ 1ರ ಒಳಗೆ ತೆಗೆದುಕೊಳ್ಳಲಾಗುವುದು. ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಮತ್ತೆ ಅಪ್‌ಲೋಡ್ ಮಾಡಲಾಗುತ್ತದೆ
  • ಸರ್ಕಾರವು ಜಟಿಲವಾದ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಕಾರಣ ಹೊರಗಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟರು.
  • ದೇಶದ ಆರ್ಥಿಕತೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮಂದಗತಿಯ ಸಾಲದ ಹರಿವು ಖಾಸಗಿ ವಲಯದ ನಡುವಿನ ಅಪನಂಬಿಕೆ ಸೃಷ್ಟಿಸಿದೆ. "ಯಾರೂ ಬೇರೆಯವರನ್ನು ನಂಬುತ್ತಿಲ್ಲ... ಖಾಸಗಿ ವಲಯದಲ್ಲಿ ಯಾರೂ ಸಾಲ ನೀಡಲು ಸಿದ್ಧರಿಲ್ಲ. ಎಲ್ಲರೂ ಹಣದ ಮೇಲೆ ಅವಲಂಬಿತರಅಗಿ ಕುಳಿತಿದ್ದಾರೆ. ನೀವು (ಸರ್ಕಾರ) ಅಸಾಧಾರಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಾಜೀವ್ ಹೇಳಿದರು.
  • ಪ್ರಸ್ತುತದಲ್ಲಿನ ಆರ್ಥಿಕ ಬಿಕ್ಕಟ್ಟುಗಳು ಜಟಿಲವಾಗಿವೆ ಎಂದ ಕುಮಾರ್, ‘ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಡೀ ಹಣಕಾಸು ವ್ಯವಸ್ಥೆಯೇ ಅಪಾಯಕ್ಕೆ ಸಿಲುಕಿದೆ. ಈ ಹಿಂದೆ ಎಂದೂ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ ಎಂದು ಹೇಳಿದರು.
  • ದೇಶೀಯ ಹೂಡಿಕೆದಾರರ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ಮೇಲಿನ ಹೆಚ್ಚುವರಿ ಶುಲ್ಕವನ್ನು ಹಿಂತೆಗೆದುಕೊಳ್ಳಲಾಗುವುದು. ಇದು ಈ ಹಣಕಾಸು ವರ್ಷದಿಂದಲೇ ಅನ್ವಯವಾಗಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್​ ಭೂಷಣ್ ಪಾಂಡೆ ಹೇಳಿದರು.
  • ದೇಶದ ಆರ್ಥಿಕತೆ ಸದೃಢವಾಗಿದೆ. ಅಮೆರಿಕ, ಚೀನಾಕ್ಕಿಂತ ವೇಗದ ಆರ್ಥಿಕತೆಯನ್ನು ಭಾರತ ಹೊಂದಿದೆ. ಇತರೆ ರಾಷ್ಟ್ರಗಳಿಗೆ ಹೊಲಿಸಿದರೇ ನಮ್ಮ ಆರ್ಥಿಕತೆ ಸದೃಢವಾಗಿ ಸಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.
  • ಇನ್ನೊಂದು ವಾರದಲ್ಲಿ ಮಹತ್ವದ ಘೋಷಣೆಯೊಂದು ಹೊರಬಿಳಲಿದೆ. ಇದ್ದಾದ ಬಳಿಕ ಈಗಾಗಲೇ ಸಮಸ್ಯೆಗಳನ್ನು ಹೆದುರಿಸುತ್ತಿರುವ ವಲಯಗಳು ಚೇತರಿಸಕೊಳ್ಳಲಿವೆ: ಹಣಕಾಸು ಸಚಿವರು

  • ಈ ಹಿಂದೆ ಘೋಷಿಸಲಾದ 100 ಲಕ್ಷ ಕೋಟಿ ರೂ. ಮೂಲಸೌಕರ್ಯಗಳಿಗೆ ಬಂಡವಾಳ ಹೂಡಿಕೆಯ ಜಾರಿಯನ್ನು ವಿಳಂಬವಾಗದಂತೆ ಅಂತರ ಸಚಿವಾಲಯಗಳ ಮಧ್ಯೆ ಕಾರ್ಯಪಡೆ ರಚಿಸಲಾಗುತ್ತಿದೆ. ಇದು ಆರ್ಥಿಕತೆ ವೇಗವನ್ನು ಹೆಚ್ಚಿಸಲಿದೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ: ಸೀತಾರಾಮನ್ ವಿಶ್ವಸ ವ್ಯಕ್ತಪಡಿಸಿದರು.
  • ಕಾರ್ಮಿಕ ಕಾನೂನುಗಳ ಮೂಲಕ ಸ್ಥಿರ ಅವಧಿಯ ಉದ್ಯೋಗವನ್ನು ಸುಗಮಗೊಳಿಸಲಾಗುತ್ತಿದೆ. ಕಾರ್ಮಿಕರಿಗೆ ಸಂಬಂಧಿತ ವ್ಯಾಜ್ಯಗಳ ಉಚಿತ ಪರಿಶೀಲನೆಗೆ ವೆಬ್ ಆಧಾರಿತ ನ್ಯಾಯದಾನ ವಿಧಾನವನ್ನು ಜಾರಿಗೆ ತರಲಾಗುತ್ತಿದೆ. ಅಪ್‌ಲೋಡ್ ಮಾಡಿದ 48 ಗಂಟೆಗಳ ಒಳಗೆ ದೂರನ್ನು ಪರಿಶೀಲಿಸಲಾಗುವುದು: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
  • ಎಂಎಸ್‌ಎಂಇಗಳಿಂದ ಬಾಕಿ ಉಳಿಸಿಕೊಂಡಿರುವ ಎಲ್ಲ ಜಿಎಸ್‌ಟಿ ಮರುಪಾವತಿಗಳನ್ನು 30 ದಿನಗಳಲ್ಲಿ ಹಿಂದುರಿಗಿಸಲಾಗುವುದು. ಜಿಎಸ್‌ಟಿ ಜಾರಿಯಿಂದ ಇರುವರೆಗೂ ಬಾಕಿ ಉಳಿಸಿಕೊಂಡ ಎಲ್ಲ ನಿಧಿಯನ್ನು ಇಂದಿನಿಂದ 30 ದಿನಗಳಲ್ಲಿ ವಿಂಗಡಿಸಿ ಮರುಪಾವತಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಎಸ್‌ಟಿ ಮರುಪಾವತಿಯನ್ನು 60 ದಿನಗಳ ಒಳಗೆ ಪರಿಹರಿಸಲಾಗುವುದು ಎಂದು ಸೀತಾರಾಮನ್ ಭರವಸೆ ನೀಡಿದರು.
  • 15 ದಿನಗಳ ಒಳಗೆ ಸಾಲದ ಪತ್ರ ವಾಪಸ್​: ಸಾಲ ತೀರಿದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್​ಗಳು ಸಾಲ ನೀಡಲು ಪಡೆದಿದ್ದ ದಾಖಲಾತಿಗಳನ್ನು ಗ್ರಾಹಕರಿಗೆ 15 ದಿನಗಳ ಒಳಗೆ ಹಿಂದುರಿಗಿಸಲಿವೆ.
  • ಸಾಂಸ್ಥಿಕ ಸಾರ್ವಜನಿಕ ಜವಾಬ್ದಾರಿ (ಸಿಎಸ್​ಆರ್​) ಚಟುವಟಿಕೆಗಳ ಸಂಬಂಧಿತ ಕಾಯ್ದೆಯ ಉಲ್ಲಂಘನೆಯನ್ನು ಕ್ರಿಮಿನ್​ ಅಪರಾಧಗಳೆಂದು ಪರಿಗಣಿಸುವುದಿಲ್ಲ. ಬದಲಿಗೆ ಅದು ನಾಗರಿಕ ಹೊಣೆಗಾರಿಕೆಯಾಗಿರುತ್ತದೆ. ಕಾನೂನು ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಯಾವುದೇ ಉದ್ದೇಶವಿಲ್ಲ: ನಿರ್ಮಲಾ ಸೀತಾರಾಮನ್
  • ದೇಶದ ಆರ್ಥಿಕತೆ ಸದೃಢವಾಗಿದೆ. ಅಮೆರಿಕ, ಚೀನಾಕ್ಕಿಂತ ವೇಗದ ಆರ್ಥಿಕತೆಯನ್ನು ಭಾರತ ಹೊಂದಿದೆ. ಇತರೆ ರಾಷ್ಟ್ರಗಳಿಗೆ ಹೊಲಿಸಿದರೇ ನಮ್ಮ ಆರ್ಥಿಕತೆ ಸದೃಢವಾಗಿ ಸಾಗುತ್ತಿದೆ: ಸೀತಾರಾಮನ್​
  • ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ ಹಣಕಾಸು ನೀತಿ- 2 ಕಾಯ್ದೆ, 2019ರ ಅನ್ವಯ, ಈ ಹಿಂದೆ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ವಿಧಿಸಿದ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ: ವಿತ್ತ ಸಚಿವರು
  • ಎಲ್ಲ ಸಾಲಗಾರರಿಗೆ ಅನುಕೂಲವಾಗುವಂತೆ ಎಂಸಿಎಲ್ಆರ್ ಕಡಿತದ ಮೂಲಕ ಯಾವುದೇ ದರ ಹೆಚ್ಚಿಸದಂತೆ ಬ್ಯಾಂಕ್​ಗಳು ಈಗಗಾಲೇ ನಿರ್ಧರಿಸಿವೆ. ಇದು ವಸತಿ, ವಾಹನ ಮತ್ತು ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿದರದಲ್ಲಿ ಇಳಿಕೆಯಾಗಿ ಇಎಂಐ ಹೊರೆ ತಗ್ಗಲಿದೆ: ಹಣಕಾಸು ಸಚಿವರ ಹೇಳಿಕೆ

ಕಳೆದ 19 ತಿಂಗಳುಗಳಲ್ಲಿ ಆಟೋಮೊಬೈಲ್ ವಲಯವು ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದು, ಬೆಳವಣಿಗೆಯ ಕುಸಿತವು 19 ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಸುಮಾರು 13 ಲಕ್ಷ ವಸತಿಗಳು ಮಾರಾಟವಾಗದೆ ಉಳಿದುಕೊಂಡಿವೆ.

ಶ್ರೀಮಂತರ ಮೇಲಿನ ಹೆಚ್ಚುವರಿ ತೆರಿಗೆ ಶುಲ್ಕ, ವಾಹನ ಮತ್ತು ವಸತಿ ವಲಯಗಳ ಮಂದಗತಿಯ ಬೆಳವಣಿಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ನಡೆದಿತ್ತು.

ಪಿಎಂ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆಟೋ ಮತ್ತು ರಿಯಾಲ್ಟಿ ಕ್ಷೇತ್ರಗಳಲ್ಲಿನ ಮಂದಗತಿಯ ಬೆಳವಣಿಗೆ ತೊಡಕಾಗಿರುವ ಕಾರಣಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗಿತ್ತು.

Intro:Body:Conclusion:
Last Updated : Aug 23, 2019, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.