ನವದೆಹಲಿ: ಭಾರತವನ್ನು ಆಕರ್ಷಕ ಮತ್ತು ಹೂಡಿಕೆಯ ಸ್ನೇಹಿ ತಾಣವನ್ನಾಗಿಸಲು ಹೆಚ್ಚಿನ ಸುಧಾರಣೆಗಳಿಗೆ ಸರ್ಕಾರವು ಮುಕ್ತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತ-ಸ್ವೀಡನ್ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಇತರೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪುನರುಚ್ಚರಿಸಿದರು.
ಮುಂದಿನ ದಿನಗಳಲ್ಲಿ ಕೇಂದ್ರವು ಬ್ಯಾಂಕಿಂಗ್, ಗಣಿಗಾರಿಕೆ, ವಿಮೆಯಂತಹ ಇತರ ಕ್ಷೇತ್ರಗಳ ಸುಧಾರಣೆಗಳಿಗೆ ಬದ್ಧವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಸ್ವೀಡಿಷ್ ಸಂಸ್ಥೆಗಳನ್ನು ಆಹ್ವಾನಿಸಿದರು. 'ಕೇಂದ್ರವು ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 100 ಲಕ್ಷ ಕೋಟಿ ರೂ. ವಿನಿಯೋಗಿಸಲಿದೆ' ಎಂದು ತಿಳಿಸಿದರು.