ವಾರಣಾಸಿ : ಉತ್ತಮ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ರೈತರಿಗೆ ನೀಡುವ ಇತ್ತೀಚಿನ ಕಾನೂನುಗಳ ವಿರುದ್ಧ ತಪ್ಪು ಮಾಹಿತಿ ಅಭಿಯಾನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ತಮ್ಮ ಸರ್ಕಾರದ ಸುಧಾರಣೆಗಳನ್ನು ಸಮರ್ಥಿಸಿದರು.
ಈಗ ಹೊಸ ಪ್ರವೃತ್ತಿ ಶುರುವಾಗಿದೆ. ಸರ್ಕಾರದ ನಿರ್ಧಾರಗಳನ್ನು ಈ ಹಿಂದೆ ವಿರೋಧಿಸಲಾಗುತ್ತಿತ್ತು. ಆದರೆ, ಈಗ ವದಂತಿಗಳು ವಿರೋಧಕ್ಕೆ ಆಧಾರವಾಗಿವೆ. ನಿರ್ಧಾರ ಸರಿಯಾಗಿದ್ದರೂ ಪ್ರಚಾರ ಹಬ್ಬಿಸಲಾಗುತ್ತಿದೆ. ಎಂದಿಗೂ ಸಂಭವಿಸದ ವಿಷಯಗಳ ಬಗ್ಗೆ ವದಂತಿ ಸೃಷ್ಟಿಸಲಾಗುತ್ತಿದೆ ಎಂದು ಮೋದಿ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಹೇಳಿದರು.
ಶೀಘ್ರದಲ್ಲಿ ಲಸಿಕೆ ಲಭ್ಯವಾಗಿ ಕೊರೊನಾ & ಆರ್ಥಿಕ ಯುದ್ಧ ಗೆಲ್ಲುತ್ತೇವೆ : ಸಚಿವ ಗಡ್ಕರಿ ವಿಶ್ವಾಸ
ಕೃಷಿಯಲ್ಲಿನ ಐತಿಹಾಸಿಕ ಸುಧಾರಣೆಗಳ ವಿರುದ್ಧ ತಪ್ಪು ಮಾಹಿತಿ ಅಭಿಯಾನ ನಡೆಯುತ್ತಿದೆ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ ಅದೇ ಜನರಿಂದ ಕಾಯ್ದೆ ತಡೆ ಪ್ರಯತ್ನ ಮಾಡಲಾಗುತ್ತಿದೆ.
ಈ ಮೊದಲು ಮಂಡಿ ಹೊರಗಿನ ಯಾವುದೇ ವಹಿವಾಟುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿತ್ತು. ಸಣ್ಣ ರೈತರಿಗೆ ಮಂಡಿಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಈಗ ಸಣ್ಣ ರೈತರು ಸಹ ಕಾನೂನುಬದ್ಧವಾಗಿ ಮಂಡಿಗಳ ಹೊರಗೆ ಕಾರ್ಯನಿರ್ವಹಿಸಬಹುದು. ಇದರಿಂದ ರೈತರಿಗೆ ಹೊಸ ಆಯ್ಕೆಗಳು ದೊರೆತಿವೆ ಎಂದರು.
ದೊಡ್ಡ ಮಾರುಕಟ್ಟೆಗಳ ಆಯ್ಕೆ ನೀಡುವ ಮೂಲಕ ರೈತರಿಗೆ ಅಧಿಕಾರ ನೀಡಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದು ಅವರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.
ಒಬ್ಬ ರೈತನು ತನ್ನ ಉತ್ಪನ್ನಗಳನ್ನು ಉತ್ತಮ ಬೆಲೆ ಮತ್ತು ಸೌಲಭ್ಯಗಳನ್ನು ನೀಡುವವರಿಗೆ ನೇರವಾಗಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆಯಬಾರದೇ ಎಂದು ಹೆದ್ದಾರಿ ಯೋಜನೆಯ ಉದ್ಘಾಟನೆಯಲ್ಲಿ ಪ್ರಶ್ನಿಸಿದರು.