ನವದೆಹಲಿ : ಸತತ ಎರಡು ತ್ರೈಮಾಸಿಕಗಳ ಸಂಕೋಚನದ ನಂತರ ಮುಂದಿನ ತ್ರೈಮಾಸಿಕದಲ್ಲಿ ಜಿಡಿಪಿ ಸಕಾರಾತ್ಮಕ ಹಂತಕ್ಕೆ ಮರಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಚೇತರಿಕೆಗಾಗಿ ಶ್ರಮಿಸಿದ್ದಾರೆ.
ಕೊರೊನಾ ವೈರಸ್ ಬಿಕ್ಕಟ್ಟಿಗೆ ಪ್ರತಿಯಾಗಿ ಒಂದು ಪ್ಯಾಕೇಜ್ ಅನ್ನು ಸಹ ಘೋಷಿಸಿದ್ದರು ಎಂದು ಅಹ್ಮದಾಬಾದ್ನಲ್ಲಿ ರಸ್ತೆ ಮೇಲ್ಸೇತುವೆಯನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಶಾ ಮಾತನಾಡಿದರು.
ಪ್ರಧಾನಮಂತ್ರಿಯಾದ ನರೇಂದ್ರ ಭಾಯ್ ಅವರು, ಆರ್ಥಿಕತೆಯ ಮೇಲೆ ಅದರ ದೀರ್ಘಕಾಲೀನ ಪ್ರಭಾವವನ್ನು ಗಮನದಲ್ಲಿರಿಸಿಕೊಂಡು ಕೋವಿಡ್-19 ಸಾಂಕ್ರಾಮಿಕ ವೇಳೆಯಲ್ಲಿ ನೀತಿ ನಿರೂಪಣೆ ದೃಶ್ಯ ರೂಪಕಗಳನ್ನು ಬಳಸಿಕೊಂಡಿದ್ದಾರೆ. ಒಂದು ಸೆಕೆಂಡ್ ವ್ಯರ್ಥ ಮಾಡದೆ ಕೃಷಿ ಕ್ಷೇತ್ರ, ವಿದ್ಯುತ್, ಕೈಗಾರಿಕಾ ನೀತಿ ಸೇರಿ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳ ಅಭಿವೃದ್ಧಿಯ ವೇಗ ಕಾಯ್ದುಕೊಳ್ಳುವ ವ್ಯವಸ್ಥೆ ರೂಪಿಸಿದರು ಎಂದರು.
ರೈತರಿಗೆ ಮಾರಾಟ ಸ್ವಾತಂತ್ರ್ಯ ನೀಡುವ ಕೃಷಿ ಕಾಯ್ದೆಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರ : ನಮೋ ಕಿಡಿ
ಈ ನಿಟ್ಟಿನಲ್ಲಿ ಅವರು ಬಡ ಜನರ ಕಲ್ಯಾಣಕ್ಕಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡಿದರು. ಅದು ಆರ್ಥಿಕತೆಗೆ ವೇಗ ನೀಡಿತು. ಇದರ ಪರಿಣಾಮವಾಗಿ ಇತ್ತೀಚಿನ ಜಿಡಿಪಿ ಅಂಕಿ ಅಂಶಗಳ ಪ್ರಕಾರ, ನಾವು 6 ಪ್ರತಿಶತದಷ್ಟು ಹಿಂದುಳಿದಿದ್ದೇವೆ. ಮುಂದಿನ ತ್ರೈಮಾಸಿಕದಲ್ಲಿ ಜಿಡಿಪಿ ಸಕಾರಾತ್ಮಕವಾಗಿ ಇರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಶಾ ಹೇಳಿದರು.