ETV Bharat / business

ಚೀನಾ ವಸ್ತುಗಳನ್ನ ನಿಷೇಧಿಸಲು ಕೇಂದ್ರಕ್ಕೆ 2 ಸಿಂಪಲ್​ ಟಿಪ್ಸ್​ ಕೊಟ್ಟ ಕೈಗಾರಿಕಾ & ವ್ಯಾಪಾರ ತಜ್ಞರು

author img

By

Published : Jun 26, 2020, 7:09 PM IST

ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ 'ಮೇಡ್ ಇನ್ ಚೀನಾ' ಉತ್ಪನ್ನಗಳ ವಿರೋಧವು ಸ್ಥಿರವಾಗಿ ಬೆಳೆಯುತ್ತಿದೆ. ಏಷ್ಯಾದ ದೈತ್ಯರ ನಡುವೆ ನಡೆಯುತ್ತಿರುವ ಹಿಮಾಲಯದ ಗಡಿ ನಿಲುವಿನಿಂದಾಗಿ ಬಾಯ್ಕಾಟ್​ ಚೀನೀ ಪ್ರೋಡೆಕ್ಟ್​ ಮನೋಭಾವನೆ ಭಾರತೀಯರಲ್ಲಿ ವ್ಯಾಪಕವಾಗುತ್ತಿದೆ. ಚೀನಾ ವಸ್ತುಗಳನ್ನು ನಿಷೇಧಿಸುವ ಬಗ್ಗೆ ಭಾರತದ ಕೈಗಾರಿಕಾ ಮತ್ತು ವ್ಯಾಪಾರ ತಜ್ಞರು ತಮ್ಮದೆಯಾದ ಸಲಹೆ ನೀಡಿದ್ದಾರೆ.

boycott Chinese products
ಚೀನಾ ವಸ್ತುಗಳ ನಿಷೇಧ

ನವದೆಹಲಿ : ದೇಶಿಯ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಅದರ ಆಮದು ಮೂಲಗಳನ್ನು ವೈವಿಧ್ಯಗೊಳಿಸಿದರೇ ಮಾತ್ರವೇ 'ಮೇಡ್ ಇನ್ ಚೀನಾ' ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತವು ಶಕ್ತವಾಗಲಿದೆ ಎಂದು ಕೈಗಾರಿಕಾ & ವ್ಯಾಪಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ 'ಮೇಡ್ ಇನ್ ಚೀನಾ' ಉತ್ಪನ್ನಗಳ ವಿರೋಧವು ಸ್ಥಿರವಾಗಿ ಬೆಳೆಯುತ್ತಿದೆ. ಏಷ್ಯಾದ ದೈತ್ಯರ ನಡುವೆ ನಡೆಯುತ್ತಿರುವ ಹಿಮಾಲಯದ ಗಡಿ ನಿಲುವಿನಿಂದಾಗಿ ಬಾಯ್ಕಾಟ್​ ಚೀನಿ ಪ್ರೋಡೆಕ್ಟ್​ ಮನೋಭಾವನೆ ಭಾರತೀಯರಲ್ಲಿ ವ್ಯಾಪಕವಾಗುತ್ತಿದೆ. ಕೈಗಾರಿಕಾ ಮತ್ತು ವ್ಯಾಪಾರ ತಜ್ಞರು ಚೀನಾದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಕ್ರಮಕ್ಕೆ ಕೇವಲ ಸಮಯ ಮಾತ್ರವೇ ಸಾಲದು. ದೇಶಿಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕಾರ್ಯತಂತ್ರದ ನೀತಿಯ ಹಸ್ತಕ್ಷೇಪ ಮತ್ತು ಬೆಂಬಲವೂ ಬೇಕಾಗುತ್ತದೆ ಎಂದು ವಾದಿಸಿದರು.

ಕಸ್ಟಮ್ಸ್​ ಹೆಚ್ಚಳ ಮತ್ತು ಗುಣಮಟ್ಟದ ನಿಯಂತ್ರಣ ಮಾನದಂಡಗಳ ಅನುಷ್ಠಾನವು ಸರಕು ತಂದು ಸುರಿಯುವ ಚಟುವಟಿಕೆಗಳನ್ನು ತಡೆಯುತ್ತದೆ. ಚೀನಾ ಬದಲಿ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ಚೀನಿ ಕೈಗಾರಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದಂತಾಗುತ್ತದೆ ಎಂದರು. ಭಾರತೀಯ ಗ್ರಾಹಕರು ಚೀನಾದ ಸರಕುಗಳಾದ ಆಟಿಕೆ, ಚರ್ಮದ ಚೀಲ, ಮೊಬೈಲ್ ಹ್ಯಾಂಡ್‌ಸೆಟ್‌ ಮತ್ತು ಇತರೆ ಕಡಿಮೆ ಬೆಲೆಯ ಸರಕುಗಳನ್ನು ಬಹಿಷ್ಕರಿಸಬಹುದು ಎಂದು ಮುಂಬೈನ ಎಂವಿಐಆರ್‌ಡಿಸಿ ವಿಶ್ವ ವಾಣಿಜ್ಯ ಕೇಂದ್ರದ ಹಿರಿಯ ನಿರ್ದೇಶಕಿ ರೂಪಾ ನಾಯಕ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಕೈಗಾರಿಕಾ ಯಂತ್ರೋಪಕರಣಗಳು, ಕೈಗಾರಿಕೆಗಳಲ್ಲಿ ಬಳಸುವ ಫ್ಯಾಬ್ರಿಕೇಟೆಡ್ ಉಪಕರಣಗಳು, ರಾಸಾಯನಿಕಗಳು ಮತ್ತು ಉತ್ಪಾದನೆಯಲ್ಲಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳಂತಹ ಬಿ 2 ಬಿ ಸರಕುಗಳನ್ನು ಬಹಿಷ್ಕರಿಸುವುದು ನಿಜವಾದ ಸವಾಲು. ಭಾರತವು ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಫಾರ್ಮಾ, ರಾಸಾಯನಿಕ, ರಸಗೊಬ್ಬರ ಮತ್ತು ವಾಹನ ಘಟಕಗಳಿಗೆ ಶೇ 25-75ರಷ್ಟು ಚೀನಾವನ್ನು ಅವಲಂಬಿಸಿದೆ. ಈ ಸರಕುಗಳನ್ನು ಸ್ಥಳೀಯವಾಗಿ ತಯಾರಿಸುವುದು ಕಷ್ಟ ಎಂದಿದೆ.

ಚೀನಾಕ್ಕೆ ಭಾರತದ ರಫ್ತು ಕಚ್ಚಾ ವಸ್ತುಗಳನ್ನು ಮಹತ್ವದ್ದಾಗಿದೆ. ನಾವು ಖನಿಜಗಳು, ಅದಿರು, ಕೃಷಿ ಸರಕುಗಳನ್ನು ರಫ್ತು ಮಾಡುತ್ತಿದ್ದೇವೆ. ಚೀನಾದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ನಾಯಕ್ ಹೇಳಿದರು. ಇದು ದೇಶಿಯ ಕೈಗಾರಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನಾವು ಮೊದಲು ಚೀನಾಕ್ಕೆ ಕಚ್ಚಾ ಸಾಮಗ್ರಿ ರಫ್ತು ಮಾಡುವುದನ್ನು ಪ್ರಾರಂಭಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.