ನವದೆಹಲಿ: ಇಎಸ್ಐಸಿಯ ಆರೋಗ್ಯ ವಿಮಾ ಯೋಜನೆಯಡಿ ವಿಮೆ ಮಾಡಿಸಿದ ಮಹಿಳೆಗೆ ಅಥವಾ ವ್ಯಕ್ತಿಯ ಪತ್ನಿಗೆ ಪಾವತಿಸುವ ಕನ್ಫೈನ್ಮೆಂಟ್ (ಹೆರಿಗೆ) ವೆಚ್ಚವನ್ನು 5,000 ರೂ.ಯಿಂದ 7,500 ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಯೋಜನವನ್ನು ಹೆಚ್ಚಿಸಲು ಸೋಮವಾರ ಕರಡು ಅಧಿಸೂಚನೆ ಹೊರಡಿಸಿದೆ.
ಕರಡು ಅಧಿಸೂಚನೆಯ ಪ್ರಕಾರ, ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ನಡೆಸುತ್ತಿರುವ ಇಎಸ್ಐ ಯೋಜನೆಯಡಿ ಮಾತೃತ್ವ ಪ್ರಯೋಜನ ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ಮಧ್ಯಸ್ಥಗಾರರಿಗೆ ತಮ್ಮ ಪ್ರತಿಕ್ರಿಯೆ ನೀಡಲು 30 ದಿನಗಳ ಕಾಲಾವಕಾಶ ನೀಡಿದೆ.
ಸರ್ಕಾರವು ಪ್ರತಿಕ್ರಿಯೆಗಳನ್ನು ಪರಿಗಣಿಸಿ, ತನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಸರ್ಕಾರವು ಪ್ರತಿಕ್ರಿಯೆಗಾಗಿ ಕರಡು ಅಧಿಸೂಚನೆ ಬಿಡುಗಡೆ ಮಾಡುತ್ತಿದೆ. ಪ್ರಸ್ತಾವನೆಗಳಿಗೆ ಪರಿಣಾಮ ಬೀರುವ ನಿಗದಿತ ಅವಧಿಯ ನಂತರ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ನೌಕರರ ರಾಜ್ಯ ವಿಮೆ (ಕೇಂದ್ರ) ನಿಯಮಗಳು, 1950ರ ನಿಯಮ 56 ಎ ಅನ್ನು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ರೂಪಾಯಿ ಐದು ಸಾವಿರ ಎಂಬ ಪದ ಏಳು ಸಾವಿರದ ಐನೂರು ಎಂದು ಬದಲಿಸಲಾಗಿದೆ. ನಿಯಮ 56 ಎ, ವಿಮೆ ಮಾಡಿದ ಮಹಿಳೆ ಅಥವಾ ವಿಮೆ ಮಾಡಿದ ವ್ಯಕ್ತಿಯ ಕನ್ಫೈನ್ಮೆಂಟ್ ವೆಚ್ಚವನ್ನು ಅವನ ಹೆಂಡತಿಗೆ ಪ್ರತಿ ಹೆರಿಗೆಗೆ 5,000 ರೂ. ನೀಡಲಾಗುತ್ತದೆ.