ನವದೆಹಲಿ: ದೇಶದ ಭದ್ರತೆ ಹಾಳುಮಾಡುವ ಯಾವುದೇ ಪ್ರಯತ್ನವನ್ನು ತಡೆಯುವ ಸುಸಂಘಟಿತ ಕ್ರಮದಲ್ಲಿ ಸಶಸ್ತ್ರ ಪಡೆಗಳನ್ನು ಸಮರ್ಪಕವಾಗಿ ಸಜ್ಜುಗೊಳಿಸಲಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಲಡಾಖ್ನಲ್ಲಿ ಚೀನಾ ನಡೆಸಿದ ವಿಸ್ತರಣಾವಾದಿ ಯೋಜನೆಗಳನ್ನು ಭಾರತದ ಧೀರ ಸೈನಿಕರು ಹೇಗೆ ವಿಫಲಗೊಳಿಸಿದರು ಎಂಬುದನ್ನು ಗಣರಾಜ್ಯೋತ್ಸವದ ಮುನ್ನ ದಿನ ಸ್ಮರಿಸಿದ ರಾಷ್ಟ್ರಪತಿಗಳು, ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗಾಗಿ ಎಂತಹದ್ದೆ ಖರ್ಚು ಭರಿಸಲು ಸಿದ್ಧ ಇರುವುದಾಗಿ ಘೋಷಿಸಿದರು.
ಆರಂಭಿಕ ಹಂತಗಳಲ್ಲಿ ಸುಧಾರಣೆಯ ಹಾದಿಯು ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು. ಆದರೆ, ಸರ್ಕಾರವು ರೈತರ ಕಲ್ಯಾಣಕ್ಕೆ ಶ್ರಮಿಸಲಿದೆ ಎಂದರು. ಮೂರು ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಗಳು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಬ್ಲಿಕ್ಗೆ ರಿ'ಪಬ್ಲಿಕ್' ಗಿಫ್ಟ್: ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್.. ಬಜೆಟ್ಗೆ ಮತ್ತೊಂದು ಬರೆ
ಪ್ರಪಂಚದಾದ್ಯಂತದ ತೊಂದರೆಗಳನ್ನು ನಿವಾರಿಸಲು ಹಲವು ದೇಶಗಳಿಗೆ ಔಷಧಗಳನ್ನು ಪೂರೈಸಿದ್ದಕ್ಕಾಗಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಕರೆಯಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಅನಿರೀಕ್ಷಿತ ಅಗ್ನಿಪರೀಕ್ಷೆಯ ಸುಮಾರು ಒಂದು ವರ್ಷದ ನಂತರ, ಭಾರತ ಇಂದು ನಿರಾಶಾದಾಯಕವಾಗಿಲ್ಲ. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಂತಿದೆ. ಆರ್ಥಿಕತೆ ತನ್ನ ಚೈತನ್ಯ ಮರಳಿ ಪಡೆದಿರುವುದರಿಂದ ನಿಧಾನಗತಿಯು ಈಗ ಅಸ್ಥಿರವಾಗುತ್ತಿದೆ ಎಂದು ಹೇಳಿದರು.
ಮಾನವೀಯತೆಯ ಮೇಲಿನ ಈ ಪ್ರೀತಿ ಮತ್ತು ತ್ಯಾಗದ ಮನೋಭಾವವು ನಮ್ಮನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ನನಗೆ ಖಾತ್ರಿಯಿದೆ. 2020ರ ಕಲಿಕೆಯ ವರ್ಷವಾಗಿ ನೋಡೋಣ. ಭಾರತವು ಮುಂದೆ ಸಾಗಿ ಪ್ರಪಂಚದಲ್ಲಿ ತನ್ನ ಸರಿಯಾದ ಸ್ಥಾನ ಪಡೆದುಕೊಳ್ಳುತ್ತಿದೆ ಎಂದು ಕೋವಿಂದ್ ಆಶಿಸಿದರು.